ಕನಕಪುರ: ವಿದ್ಯಾರ್ಥಿಗಳು ಶೈಕ್ಷಣಿಕ ದಿನಗಳಲ್ಲಿ ಕ್ರೀಡೆಗೆ ಮಹತ್ವ ನೀಡಿ ಆರೋಗ್ಯಕರ ಜೀವನ ರೂಪಿಸಿಕೊಳ್ಳುವಂತೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ಸತತ ಎರಡು ದಿನಗಳ ಕಾಲ ನಡೆದ ಬೆಂಗಳೂರು ದಕ್ಷಿಣ ಜಿಲ್ಲೆ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ 84 ಕಾಲೇಜುಗಳಿಂದ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮಲ್ಲಿರುವ ಕ್ರೀಡಾಸಕ್ತಿ, ಸಾಮರ್ಥ್ಯ ಪ್ರಚುರ ಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರ ಸಂಘದ ಅಧ್ಯಕ ಜಿ.ಶಿವಣ್ಣ, ಸದಸ್ಯರಾದ ದೊಡ್ಡಬೋರಯ್ಯ, ಬಿ.ಮಹೇಶ್, ಆದಿತ್ಯಾಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸತೀಶ್, ಆಡಳಿತಾಧಿಕಾರಿ ಕೆ.ಗಿರೀಶ್, ವೇಣುಗೋಪಾಲ್, ಸತ್ಯನಾರಾಯಣ್, ನಗರಸಭೆ ಅಧ್ಯಕ್ಷೆ ಹೇಮರಾಜು, ನಗರಸಭೆ ಸದಸ್ಯ ಕಾಂತರಾಜು, ಮೋಹನ್, ವಿಜಯ್ ಕುಮಾರ್, ಮುಖಂಡರಾದ ಎಂ.ಡಿ.ವಿಜಯ್ ದೇವ್, ದಿಲೀಪ್. ಕೆ.ಎನ್, ಎಚ್.ಕೆ.ಶ್ರೀಕಂಠ, ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ದೈಹಿಕ ಶಿಕ್ಷಕರು ಪಾಲ್ಗೊಂಡಿದ್ದರು.ವಿಜೇತರ ಪಟ್ಟಿ:
ಆದಿತ್ಯಾಸ್ ಕಾಲೇಜಿನ ಕ್ರೀಡಾಪಟುಗಳು ಬಾಲಕರ ವಿಭಾಗದ ಬ್ಯಾಸ್ಕೆಟ್ ಬಾಲ್ ತಂಡ, ಬಾಲಕ ಮತ್ತುಬಾಲಕಿಯರ ವಿಭಾಗದ ನೆಟ್ ಬಾಲ್ ತಂಡ ಹಾಗೂ 100 ಮೀ, 200 ಮೀ, 4೦೦ ಮೀ. ಓಟದಲ್ಲಿ ಪ್ರೀತಮ್ ಗೌಡ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ಲಿಖಿತ್ ಪ್ರಥಮ ಸ್ಥಾನ ಹಾಗೂ ಬಾಲಕಿಯರ 100 ಮೀ. ಓಟದಲ್ಲಿ ಚಂದ್ರಕಲಾ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.
ಹಾರೋಹಳ್ಳಿ ತಾಲೂಕಿನಿಂದ ಬಾಲಕರ ವಿಭಾಗದ ಷಟಲ್ ಬ್ಯಾಡ್ಮಿಂಟನ್ ತಂಡ, ರಾಮನಗರ ತಾಲೂಕಿನ ಬಾಲಕಿಯರ ವಿಭಾಗದ ಬಾಸ್ಕೆಟ್ ಬಾಲ್ ತಂಡ, ಚನ್ನಪಟ್ಟಣ ತಾಲೂಕಿನ ಬಾಲಕರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ತಂಡ, ಮಾಗಡಿ ತಾಲೂಕಿನ ಬಾಲಕಿಯರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾದವು.ಕೆ ಕೆ ಪಿ ಸುದ್ದಿ 02:
ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ಆದಿತ್ಯಾಸ್ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಚಾಲನೆ ನೀಡಿದರು.