ಮಕ್ಕಳಲ್ಲಿ ಹಂಚಿಕೆ ಮನೋಭಾವ ಬೆಳೆಸುವುದು ಶ್ಲಾಘನಿಯ

KannadaprabhaNewsNetwork |  
Published : Nov 06, 2026, 01:15 AM IST
27 | Kannada Prabha

ಸಾರಾಂಶ

ಮಕ್ಕಳು ತಮ್ಮ ಮನೆಗಳಿಂದ ಒಂದು ಹಿಡಿ ಧಾನ್ಯವನ್ನು ತಂದು ಹಿರಿಯರ ಆರೈಕೆ ಕೇಂದ್ರಕ್ಕೆ ನೀಡಿರುವುದು ಉತ್ತಮ ಬೆಳೆವಣಿಗೆ.

ಕನ್ನಡಪ್ರಭ ವಾರ್ತೆ ಮೈಸೂರುಮಕ್ಕಳಲ್ಲಿ ದಾನ, ಮಾನವೀಯತೆ ಮತ್ತು ಪರಸ್ಪರ ಹಂಚಿಕೆ ಮನೋಭಾವವನ್ನು ಬೆಳೆಸುವ ಕಾರ್ಯ ಶ್ಲಾಘನಿಯ ಎಂದು ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ತಿಳಿಸಿದರು.ಮೈಸೂರು ಇಂಟರ್‌ ನ್ಯಾಷನಲ್ ಸ್ಕೂಲ್ ನಲ್ಲಿ ಹಾರ್ಟ್ ಸಂಸ್ಥೆಯು ಆಯೋಜಿಸಿದ್ದ ದಾನೋತ್ಸವ ಹಾಗೂ 71ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ತಮ್ಮ ಮನೆಗಳಿಂದ ಒಂದು ಹಿಡಿ ಧಾನ್ಯವನ್ನು ತಂದು ಹಿರಿಯರ ಆರೈಕೆ ಕೇಂದ್ರಕ್ಕೆ ನೀಡಿರುವುದು ಉತ್ತಮ ಬೆಳೆವಣಿಗೆ. ಒಂದು ಹಿಡಿ ಧಾನ್ಯ ನಿಮ್ಮ ಹೃದಯ ವೈಶಾಲ್ಯತೆಯ ತೋರಿಸುತ್ತದೆ ಎಂದು ಹೇಳಿದರು.ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ಸ್ಪಷ್ಟವಾಗಿ ಮಾತನಾಡಿರುವುದು ಬಹಳ ಸಂತೋಷ. ಶಿಕ್ಷಣ ಕೇವಲ ನೂರು ಅಂಕಗಳ ಸಾಧನೆಗೆ ಸೀಮಿತವಾಗಬಾರದು. ಕಲೆ, ಸಂಸ್ಕೃತಿ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸ ಮತ್ತು ಕೌಶಲ್ಯಗಳನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಕನ್ನಡ ಭಾಷೆ ಕೇವಲ ಸಂವಹನದ ಸಾಧನವಲ್ಲ, ಅದು ನಮ್ಮ ಸಂಸ್ಕಾರ, ಆಚಾರ- ವಿಚಾರ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಮಾತೃಭಾಷೆಯ ಮೂಲಕ ಮಕ್ಕಳಲ್ಲಿ ಅಭಿವ್ಯಕ್ತಿ ಸಾಮರ್ಥ್ಯ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.ಹಾರ್ಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಮಕ್ಕಳಲ್ಲಿ ಬಾಲ್ಯದಿಂದಲೇ ಮಾನವೀಯತೆ, ದಾನಶೀಲತೆ ಮತ್ತು ಸಾಮರಸ್ಯದ ಬದುಕಿನ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ದಾನೋತ್ಸವ ಆಚರಿಸಲಾಗುತ್ತಿದೆ ಎಂದರು.ದಾನೋತ್ಸವದ ಅಂಗವಾಗಿ ಮಕ್ಕಳು ನೀಡಿದ ಅಕ್ಕಿ, ಬೇಳೆ, ಕಾಳು ಸೇರಿದಂತೆ ವಿವಿಧ ದವಸ ಧಾನ್ಯಗಳನ್ನು ಹೃದಯ ಸ್ಪಂದನ ಹಿರಿಯರ ಆರೈಕೆ ಕೇಂದ್ರಕ್ಕೆ ನೀಡಲಾಯಿತು.ಶ್ರೀರಾಂಪುರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಟೆಹುಂಡಿ ಮಹಾದೇವ, ಮೈಸೂರು ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಪ್ರೀತಿ ವಿನ್ಸೆಟ್, ಶಿಕ್ಷಕರು, ಸಿಬ್ಬಂದಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಟಿಂಗ್‌: ನ್ಯಾಯಾಲಯಕ್ಕೆ ಹಲವು ದಾಖಲೆ ಸಲ್ಲಿಸಿದ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ
ಮದುವೆ ಆಗುವಂತೆ ಉದ್ಯಮಿಗೆ ಹನಿಟ್ರ್ಯಾಪ್: ₹2 ಕೋಟಿ ಬೇಡಿಕೆ