ಕನ್ನಡಪ್ರಭ ವಾರ್ತೆ ಬೇಲೂರುದಿವಂಗತ ಚನ್ನಮ್ಮ ದೇವೇಗೌಡರಿಗೆ ಪಕ್ಷಾತೀತವಾಗಿ ಪಟ್ಟಣದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಚನ್ನಮ್ಮ ದೇವೇಗೌಡ ಸಾರ್ವಜನಿಕ ರಾಜಕೀಯದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳದೆ, ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ದೇವೇಗೌಡ ಅವರ ದೀರ್ಘ ರಾಜಕೀಯ ಜೀವನಕ್ಕೆ ಬೆನ್ನೆಲುಬಾಗಿ ನಿಂತಿದ್ದರು . ಮಾಜಿ ಪ್ರಧಾನಿ ಪತ್ನಿ ಎಂಬ ಅಹಂ ಇಲ್ಲದೆ ಸರ್ವರನ್ನು ಕಾಣುವ ದೃಷ್ಟಿ ನಿಜಕ್ಕೂ ಮೆಚ್ಚುವ ಕೆಲಸ. ಪ್ರತಿನಿತ್ಯ ದೇವರ ಪೂಜೆ ಹಾಗೂ ಧಾರ್ಮಿಕ ಕಾರ್ಯದಲ್ಲಿ ತಲ್ಲಿನರಾಗುವ ಮೂಲಕ ನಾಡಿನ ಒಳಿತಗೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು. ಮಾಜಿ ಸಚಿವ ಎಚ್. ಕೆ. ಕುಮಾರಸ್ವಾಮಿ ಮಾತನಾಡಿ, ಚನ್ನಮ್ಮನವರು ತಾವು ಯಾವುದೇ ಚುನಾವಣೆಯಲ್ಲೂನಿಲ್ಲದೆ, ಅಧಿಕಾರ ಇಲ್ಲದೆ ಜನಸಾಮಾನ್ಯರಲ್ಲಿ ಹೆಸರು ಪಡೆದಿದ್ದಾರೆ. ಯಾರೇ ಮನೆಗೆ ಹೊದ ಸಂದರ್ಭದಲ್ಲಿ ಅವರಿಗೆ ಅತಿಥ್ಯ ನೀಡುತ್ತಿದ್ದರು ಎಂದರು. ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮೊದಲಿಗೆ ಚಮ್ಮ ನವರ ಭಾವಚಿತ್ರಕ್ಕೆ ಮಾಜಿ ಸಚಿವ ಹಾಗೂ ಎಚ್.ಕೆ.ಕುಮಾರಸ್ವಾಮಿ, ಶಾಸಕ ಎಚ್.ಕೆ.ಸುರೇಶ್, ಹಾಸನ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ. ಡಿ. ಚಂದ್ರೇಗೌಡ, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ, ಜಿಪಂ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್, ತಾಲೂಕು ಬಿಜೆಪಿ ಅಧ್ಯಕ್ಷ ಸಂಜು ಕೌರಿ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಚ್. ಎಲ್. ಮಲ್ಲೇಗೌಡ, ಮಾಜಿ ಜಿಪಂ ಸದಸ್ಯ ರಾಂಪುರ ರಾಜಶೇಖರ, ಸಹಕಾರಿ ಒಕ್ಕೂಟದ ಅಧ್ಯಕ್ಷ ಎಂ.ಕೆ. ಆರ್ ಸೋಮೇಶ್, ತಾಲೂಕು ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಅದ್ದೂರಿ ಚೇತನ್ ಮುಂತಾದವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ವ್ಯಕ್ತಪಡಿಸಿದರು.