ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮೈಸೂರು ಊಟಿ ಹೆದ್ದಾರಿಯ ಡಿ.ದೇವರಾಜ ಅರಸು ಕ್ರೀಡಾಂಗಣದ ಮುಂದೆ ಮಳೆಯ ನೀರು ಹೆದ್ದಾರಿಯಲ್ಲಿ "ನಂದಿನಿ ಕೆಫೆ ಮೂ " ತನ ಹರಿದಾಡಿದೆ. ಹಳೆಯ ಕ್ಷೇತ್ರ ಶಿಕ್ಷಣಾಧಿಕಾರಿ ಆವರಣದಲ್ಲಿ ಮಳೆಯ ನೀರು ನಿಂತಿದೆ, ಬಸ್ ನಿಲ್ದಾಣದ ಮುಂದೆಯೂ ಮಳೆ ನೀರು ನಿಂತ ಕಾರಣ ಪ್ರಯಾಣಿಕರು ಪರದಾಟ ನಡೆಸಿದರು.
ಪುರಸಭೆಗೆ ಹಿಡಿ ಶಾಪ ಹಾಕಿದ ಸಾರ್ವಜನಿಕರು:ಮಳೆ ಬಂದಾಗಳೆಲ್ಲ ಮಡಹಳ್ಳಿ ಸರ್ಕಲ್‌ನಲ್ಲಿ ನೀರು ನಿಲ್ಲುವ ಕಾರಣ. ಈ ರಸ್ತೆಯಲ್ಲಿ ಸಂಚರಿಸುವ ಜನರು ಹಾಗೂ ಸವಾರರು ಪುರಸಭೆಗೆ ಹಿಡಿ ಶಾಪ ಹಾಕಿದರು. ಮಡಹಳ್ಳಿ ಸರ್ಕಲ್‌ನಲ್ಲಿ ನೀರು ನಿಲ್ಲದಂತೆ ಮಾಡಲು ಪುರಸಭೆ ಪ್ರಯತ್ನವನ್ನೇ ಮಾಡುತ್ತಿಲ್ಲ. ಇನ್ನಾದರೂ ಕೂಡಲೇ ಎಚ್ಚೆತ್ತು ಮಳೆ ನೀರು ನಿಲ್ಲದಂತೆ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.