ಸೋಂಪುರ, ತ್ಯಾಮಗೊಂಡ್ಲು ಹೋಬಳಿಗಳಲ್ಲಿ ಭಾರಿ ಮಳೆ

KannadaprabhaNewsNetwork |  
Published : May 31, 2026, 01:30 AM IST
ಪೋಟೋ 1 : ಪೆಮ್ಮನಹಳ್ಳಿ ಗ್ರಾಮದಲ್ಲಿ ಬೆಳೆದಿದ್ದ ಹುರುಳಿ ಗಿಡವೂ ಮಳೆಯಿಂದ ನಾಶವಾಗಿರುವುದು | Kannada Prabha

ಸಾರಾಂಶ

ದಾಬಸ್‍ಪೇಟೆ: ಸೋಂಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಯಲ್ಲಿ ಶುಕ್ರವಾರ ರಾತ್ರಿ ಬಿದ್ದ ಭಾರಿ ಮಳೆಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ

ದಾಬಸ್‍ಪೇಟೆ: ಸೋಂಪುರ ಹಾಗೂ ತ್ಯಾಮಗೊಂಡ್ಲು ಹೋಬಳಿಯಲ್ಲಿ ಶುಕ್ರವಾರ ರಾತ್ರಿ ಬಿದ್ದ ಭಾರಿ ಮಳೆಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ.

ಶಿವಗಂಗೆ ರಸ್ತೆಯ ವೀರಸಾಗರ ಗ್ರಾಮಕ್ಕೆ ಹೊಂದಿಕೊಂಡಿರುವ ರಸ್ತೆಯಲ್ಲಿ ನೀರು ನಿಂತು ಕೆರೆಯಾಗುತ್ತದೆ. ಇದರಿಂದ ವಾಹನಗಳು ಚಲಿಸಲಾಗದೆ ಪರದಾಡಬೇಕಾಯಿತು.

ಪಟ್ಟಣದಲ್ಲಿ ರಾಜಕಾಲುವೆ ತುಂಬಿದ ಮಳೆ ನೀರು ರಸ್ತೆಯಲ್ಲಿ ಹರಿದು ಎಲ್ಲಾ ರಸ್ತೆಗಳು ಕೆರೆಗಳಂತಾಗಿದ್ದವು. ರಾಷ್ಟ್ರೀಯ ಹೆದ್ದಾರಿ-48ರ ರಸ್ತೆಯಲ್ಲಿ ನೀರು ರಸ್ತೆ ಮೇಲೆ ಹರಿದು ವಾಹನಗಳು ಚಲಿಸಲಾಗದೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ರಾಷ್ಟ್ರೀಯ ಹೆದ್ದಾರಿ-48ರ ಎಡೇಹಳ್ಳಿ ಗ್ರಾಮದ ಸಮೀಪವಿರುವ ಇಂಡಿಯನ್ ಪೆಟ್ರೋಲ್ ಬಳಿ ಇದ್ದ ಚರಂಡಿ ಮುಚ್ಚಿಹೋಗಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶದಿಂದ ಬಂದ ಬೃಹತ್ ನೀರು ಪೆಟ್ರೋಲ್ ಬಂಕ್‌ಗೆ ನುಗ್ಗಿತ್ತು.

ಶುಕ್ರವಾರ ಬಿದ್ದ ಬಾರಿ ಮಳೆಗಾಳಿಗೆ ಸೋಂಪುರ ಹೋಬಳಿಯ ಪೆಮ್ಮನಹಳ್ಳಿ ರೈತ ಮಹಿಳೆ ಲಕ್ಷ್ಮಮ್ಮ ಬೆಳೆದಿದ್ದ ಹುರುಳಿ ಗಿಡ ನಾಶವಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಸೋಂಪುರ ಹೋಬಳಿಯ ತೋಟನಹಳ್ಳಿ, ಕೆರೆಕತ್ತಿಗನೂರು, ಬಿಲ್ಲಿನಕೋಟೆ, ಗೆದ್ದಲ್ಲಹಳ್ಳಿ, ಬಿದಲೂರು, ಹನುಮಂತಪುರ ಗ್ರಾಮಗಳಲ್ಲಿ ರೈತರು ಬೆಳೆದ ಮೆಣಸಿನಕಾಯಿ, ಟೊಮೊಟೊ, ಹಾಗಲಕಾಯಿ, ಬಾಳೆ, ಸೋರೆಕಾಯಿ, ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಹಲಸು, ಸಿಲ್ವರ್, ಆಲದ ಮರಗಳು ನೆಲಕಚ್ಚಿವೆ. ತೋಟನಹಳ್ಳಿ ರೈತರಾದ ಸಿದ್ದಲಿಂಗಯ್ಯ, ನಂದಕುಮಾರ್, ಮಂಜುನಾಥ್, ಹನುಮಂತಪುರ, ಮಹೇಶ್, ಪಂಚಕ್ಷರಿ ಹಾಗೂ ಇತರೆ ರೈತರಿಗೆ ಸೇರಿದ ಸುಮಾರು 10 ಎಕರೆಯಲ್ಲಿ ಬೆಳೆದಿದ್ದ ಟೊಮೋಟೊ, 12 ಎಕರೆ ಬಜ್ಜಿ ಮೆಣಸಿನಕಾಯಿ, 5 ಎಕರೆ ಹಾಗಲಕಾಯಿ, 30ಕ್ಕೂ ಹೆಚ್ಚು ಅಡಿಕೆ ಮರ, 5 ತೆಂಗಿನ ಮರ, 3 ಹಲಸು ಸೇರಿದಂತೆ ವಿವಿಧ ಜಾತಿಯ ಕಾಡು ಮರಗಳು ನೆಲಕ್ಕೆ ಉರಿಳಿವೆ.

ವಿದ್ಯುತ್ ವ್ಯತ್ಯಯ:

ಶುಕ್ರವಾರ ಸಂಜೆ 5.30ರಿಂದ ಶನಿವಾರ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಿ, ರಾಷ್ಟ್ರೀಯ ಹೆದ್ದಾರಿ 48 ಸೇರಿದಂತೆ ಹಲವೆಡೆ ವಿದ್ಯುತ್ ತಂತಿ, ಬಿಲ್ಲಿನಕೋಟೆ-ಗೆದ್ದಲ್ಲಹಳ್ಳಿ ಸಂಪರ್ಕರಸ್ತೆ ಸಂಪೂರ್ಣ ಜಲಾವೃತ್ತವಾಗಿತ್ತು. ಬೃಹತ್ ಮರಗಳು ಧರೆಗೆ: ಗೆದ್ದಲ್ಲಹಳ್ಳಿ, ಗೆದ್ದಲಹಳ್ಳಿ ಕಾಲೋನಿ, ಕೆರೆಕತ್ತಿಗನೂರು ಗೇಟ್ ಬಳಿ ಹಲವೆಡೆ ಮರಗಳು ಉರುಳಿಬಿದಿದ್ದವು.

ಪೋಟೋ 1 :

ಪೆಮ್ಮನಹಳ್ಳಿಯಲ್ಲಿ ಬೆಳೆದಿದ್ದ ಹುರುಳಿ ಗಿಡ ಮಳೆಯಿಂದ ನಾಶವಾಗಿರುವುದು.

ಪೋಟೋ 2 : ವಿದ್ಯುತ್ ಕಂಬ ಉರುಳಿದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಬಿಡಿಟಿ ವ್ಯಕ್ತಿತ್ವ ವಿಕಸನದ ಗುರುಕುಲ: ಬಿ.ಎಲ್.ಸಂತೋಷ್
ಬಿತ್ತನೆಬೀಜ, ರಸಗೊಬ್ಬರಕ್ಕೆ ಕೊರತೆ ಆಗದಿರಲಿ