ಭಾರಿ ಮಳೆ: ಸರ್ವೀಸ್‌ ರಸ್ತೆ ಜಲಾವೃತ

KannadaprabhaNewsNetwork | Published : Nov 5, 2023 1:15 AM

ಸಾರಾಂಶ

ರಾಮನಗರ: ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಬೆಂಗಳೂರು-ಮೈಸೂರು ರಾಷ್ಟ್ರಿಯ ಹೆದ್ದಾರಿಯ ಸರ್ವೀಸ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ಸಂಚರಿಸಲು ವಾಹನಗಳ ಸವಾರರು ಪರದಾಡುವಂತಾಯಿತು.

ರಾಮನಗರ: ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಬೆಂಗಳೂರು-ಮೈಸೂರು ರಾಷ್ಟ್ರಿಯ ಹೆದ್ದಾರಿಯ ಸರ್ವೀಸ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ಸಂಚರಿಸಲು ವಾಹನಗಳ ಸವಾರರು ಪರದಾಡುವಂತಾಯಿತು.

ಶನಿವಾರ ಸಂಜೆ 5 ಗಂಟೆಗೆ ಆರಂಭಗೊಂಡು ಭಾರಿ ಮಳೆ ಸುರಿದ ಪರಿಣಾಮ ಕೆಂಪನಹಳ್ಳಿ ಗೇಟ್‌ನಿಂದ, ಕಲ್ಲುಗೋಪಹಳ್ಳಿ, ದಾಸಪ್ಪನದೊಡ್ಡಿ ಬಳಿಯ ರಸ್ತೆ ಕೆಳ ಸೇತುವೆಗಳಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ಇದರಿಂದ ದ್ವಿಚಕ್ರ ಹಾಗೂ ಇತರ ವಾಹನಗಳ ಸವಾರರು ಮಳೆಯಲ್ಲೇ ನೆನೆಯುತ್ತಾ ನಿಲ್ಲುವಂತಾಯಿತು.

ಮಳೆ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆಯುದ್ದಕ್ಕೂ ನೀರು ನಿಂತ ಪರಿಣಾಮ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುವಂತಾಯಿತು.

ಸೋರುತ್ತಿರುವ ಡಿಸಿ ಕಚೇರಿ:

ಒಂದು ಕಡೆ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನೀರು ನಿಂತಿದ್ದರೆ ಮತ್ತೊಂದು ಕಡೆ ಶನಿವಾರ ಸುರಿದ ಸುರಿದ ಮಳೆಗೆ ಜಿಲ್ಲಾಧಿಕಾರಿ ಕಚೇರಿ ಛಾವಣಿಯಲ್ಲಿ ನೀರು ಸೋರುತ್ತಿದೆ. 9 ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡ ಶನಿವಾರ ಸುರಿದ ಮಳೆಗೆ ಛಾವಣಿಯಲ್ಲಿ ಸೋರಿಕೆ ಕಾಣಿಸಿಕೊಂಡಿದೆ.

ತಂಪೆರದ ವರುಣ:

ಕಳೆದ ಕೆಲ ದಿನಗಳಿಂದ ಬಿಸಿಲಿನ ತಾಪಕ್ಕೆ ನಲುಗಿದ್ದ ಜಿಲ್ಲೆಯ ಜನರಿಗೆ ವರುಣ ಶನಿವಾರ ತಂಪೆರೆದಿದ್ದಾನೆ. ಶನಿವಾರ ರಾಮನಗರದಲ್ಲಿ ಸಂಜೆ ರಾಮನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಇದರ ಜತೆ ಬಿಡದಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜಿಲ್ಲೆಯ ಜನರಿಗೆ ವರುಣ ತಂಪೆರೆದಿದ್ದಾನೆ.

ಚಿತ್ರ:

ಪೊಟೋ೩ಸಿಪಿಟಿ೫:

ರಾಮನಗರದಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಸರ್ವೀಸ್ ರಸ್ತೆ ಜಲಾವೃತ.

ಪೊಟೋ೩ಸಿಪಿಟಿ೭: ಮಳೆಯಿಂದಾಗಿ ಜಿಲ್ಲಾಧಿಕಾರಿ ಕಚೇರಿ ಸೋರುತ್ತಿರುವುದು.

Share this article