ಬುಧವಾರ ಬೆಳಿಗ್ಗೆ ೩.೩೦ಕ್ಕೆ ಪ್ರಾರಂಭವಾದ ಮಳೆ ಬೆಳಗ್ಗೆ ೭ ಗಂಟೆಯವರೆಗೆ ಎಡೆಬಿಡದೆ ಕೆಜಿಎಫ್ ನಗರದಲ್ಲಿ ೨೮ ಮೀಮೀ ಮಳೆ ಸುರಿದಿದೆ, ಮಳೆಗೆ ಅಕ್ಷರ ರಸ್ತೆಗಳು ಕೆರೆಗಳಾಗಿದ್ದವು, ಇದರಿಂದ ಜನಜೀವನ ಅಸ್ತವ್ಯಸ್ಥವಾಗಿತ್ತು,
ಕನ್ನಡಪ್ರಭ ವಾರ್ತೆ ಕೆಜಿಎಫ್ ನಗರದಲ್ಲಿ ಬುಧವಾರ ಬೆಳಗಿನ ಜಾವ ಭಾರೀ ಗಾಳಿ, ಮಳೆಗೆ ಹಲವಡೆ ವಿದ್ಯುತ್ ಕಂಬಗಳು, ಮರಗಳು ಉರುಳಿವೆ. ನಗರದ ಹಲವು ಬಡಾವಣೆಗಳ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.ಒಂದು ವಾರದಿಂದ ಸತತವಾಗಿ ಬೀಳುತ್ತಿರುವ ಭಾರಿ ಮಳೆಗೆ ನಗರದ ಚರಂಡಿಗಳಲ್ಲಿ ತುಂಬಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ನಗರಸಭೆ ಅಧಿಕಾರಿಗಳು ಸಮೋರೊಪದಿಯಲ್ಲಿ ತೆಗೆಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಚರಂಡಿಗಳಲ್ಲಿ ಮಳೆ ಸರಾಗವಾಗಿ ಹರಿಯದೆ ಬುಧವಾರ ಬೆಳಗ್ಗೆಯೂ ಗೌತಮ್‌ನಗರ, ಅಂಡ್ರಸನ್‌ಪೇಟೆ, ಊರಿಗಾಂ ಪೇಟೆ, ಪಿಷ್‌ನೈನ್, ಬೌರಿಲಾಲ್ ಪೇಟೆಯ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಣದ ಆಹಾರ ಸಮಾಗ್ರಿಗಳು ಮಳೆಗೆ ಆಹುತಿಯಾಗಿದ್ದು ಅಲ್ಲದೆ, ಮನೆಗಳಲ್ಲಿ ತುಂಬಿರುವ ನೀರನ್ನು ಹೊರ ಹಾಕುತ್ತಿದ್ದ ದೃಶ್ಯ ನಗರದಲ್ಲಿ ಕಂಡು ಬಂತು.೨೮ ಮೀಮೀ ಮಳೆ:ಬುಧವಾರ ಬೆಳಿಗ್ಗೆ ೩.೩೦ಕ್ಕೆ ಪ್ರಾರಂಭವಾದ ಮಳೆ ಬೆಳಗ್ಗೆ ೭ ಗಂಟೆಯವರೆಗೆ ಎಡೆ ಬಿಡದೆ ಕೆಜಿಎಫ್ ನಗರದಲ್ಲಿ ೨೮ ಮೀಮೀ ಮಳೆ ಸುರಿದಿದೆ, ಮಳೆಗೆ ಅಕ್ಷರ ರಸ್ತೆಗಳು ಕೆರೆಗಳಾಗಿದ್ದವು, ಇದರಿಂದ ಜನಜೀವನ ಅಸ್ತವ್ಯಸ್ಥವಾಗಿತ್ತು, ಅಲ್ಲದೆ ಜನರು ಬೆಳಗಿನ ಜಾವ ಬೆಂಗಳೂರು ನಗರಕ್ಕೆ ಕೆಲಸಗಳಿಗೆ ಹೋಗುವವರಿಗೆ ಮಳೆ ಆಡಚಣೆ ಉಂಟಾಗಿತ್ತು. ಚರಂಡಿಗಳಲ್ಲಿ ಕಟ್ಟಿಕೊಂಡ ತ್ಯಾಜ್ಯನಗರದ ಯಾವುದೇ ಚರಂಡಿಯಲ್ಲಿ ನೋಡಿದರೂ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್, ಹೋಟೆಲ್‌ಗಳ ತ್ಯಾಜ್ಯ ತುಂಬಿದ ಹಿನ್ನಲೆಯಲ್ಲಿ ಮಳೆ ನೀರು ಚರಂಡಿಗಳಲ್ಲಿ ಹರಿಯದೆ ರಸ್ತೆಗಳಲ್ಲಿ ಮಳೆ ನೀರು ಹರಿದ ಪರಿಣಾಮ ಸಾರ್ವಜನಿಕರು ಓಡಾಡಲು ಪಾರದಾಡುವಂತಾಯಿತು, ಬಹುತೇಕ ರಸ್ತೆಗಳಲ್ಲಿ ಚರಂಡಿಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ರಸ್ತೆಗೆ ಬಂದು ಬಿದ್ದಿದ್ದವು. ನಗರಸಭೆ ಅಧಿಕಾರಿಗಳು ಚರಂಡಿಗಳಲ್ಲಿ ಕಟ್ಟಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಲೋಡ್‌ಗಟ್ಟಲೇ ತೆರವುಗೊಳಿಸಿದರೂ ಇನ್ನೂ ಹಲವು ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಜೊತೆ ಮಳೆ ನೀರಿನಲ್ಲಿ ತೇಲುಡಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.ನಗರದ ಪಿಷ್ ಲೈನ್ ಬಡಾವಣೆಗೆ ಮಳೆ ನೀರು ನುಗ್ಗಿದ ಪರಿಣಾಮ ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ಎಇಇ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಮುಖಾಂತರ ೫೦ ಮೀಟರ್ ಕಾಲುವೆ ತೋಡಿ ಮನೆಗಳ ಪಕ್ಕದ ರಸ್ತೆಗಳಲ್ಲಿ ತುಂಬಿದ್ದ ಮಳೆ ನೀರನ್ನು ತೆರವುಗೊಳಿಸಿದರು,
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.