ಹೆಬ್ಬಾಳ ಫ್ಲೈಓವರ್‌ ಬಂದ್: ಪರ್ಯಾಯ ಮಾರ್ಗಸೂಚಿ

KannadaprabhaNewsNetwork | Published : Jan 13, 2024 1:33 AM

ಸಾರಾಂಶ

ಮೇಲ್ಸೇತುವೆ ಅಗಲೀಕರಣ ಹಾಗೂ ಏಕಮುಖ ಮೇಲ್ಸೇತುವೆ ನಿರ್ಮಾಣ ಹಿನ್ನೆಲೆ ಎಲ್ಲ ವಾಹನಗಳ ದಿಕ್ಕು ಬದಲಿಸಿ ಅನ್ಯ ಮಾರ್ಗದಲ್ಲಿ ಸುಗಮವಾಗಿ ಸಾಗುವಂತೆ ಸಂಚಾರ ನಿರ್ವಹಣೆಗೆ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಬ್ಬಾಳ ಮೇಲ್ಸೇತುವೆ ಅಗಲೀಕರಣ ಹಾಗೂ ಏಕಮುಖ ಮೇಲ್ಸೇತುವೆ ನಿರ್ಮಾಣ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಶನಿವಾರದಿಂದ ಪರ್ಯಾಯ ದಾರಿಯನ್ನು ಸಂಚಾರ ವಿಭಾಗದ ಪೊಲೀಸರು ಕಲ್ಪಿಸಿದ್ದಾರೆ.

ಕಾಮಗಾರಿ ನಡೆಯುವ ಸಮಯದಲ್ಲಿ ಬಳ್ಳಾರಿ ರಸ್ತೆಯಲ್ಲಿ ಸಾಗುವ ಎಲ್ಲ ವಾಹನಗಳ ದಿಕ್ಕು ಬದಲಿಸಿ ಅನ್ಯ ಮಾರ್ಗದಲ್ಲಿ ಸುಗಮವಾಗಿ ಸಾಗುವಂತೆ ಸಂಚಾರ ನಿರ್ವಹಣೆಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಹನ ಸಂಚಾರ ತಾತ್ಕಾಲಿಕ ನಿರ್ಬಂಧ: ಕೆ2 ಬಸ್ ನಿಲ್ದಾಣದಿಂದ ಹೆಬ್ಬಾಳ ಪಿಎಸ್ ಜಂಕ್ಷನವರೆಗಿನ ಬಳ್ಳಾರಿ ಸರ್ವೀಸ್ ರಸ್ತೆ ನಾಗಶೆಟ್ಟಿ, ಭೂಪಸಂದ್ರದಿಂದ ನಗರಕ್ಕೆ ಬರುವ ವಾಹನಗಳು, ಭೂಪಸಂದ್ರ-ನಾಗಶೆಟ್ಟಿಹಳ್ಳಿ-ಸಂಜಯನಗರ ಮುಖ್ಯರಸ್ತೆಯ ಮೂಲಕ ಸಾಗಿ ಸಂಜಯನಗರ ಕ್ರಾಸ್‌ ಎಡ ತಿರುವು ಪಡೆದು ಸಂಜಯನಗರ ಮ್ಯಾಜಿಕ್ ಬಾಕ್ಸ್ ಬಳಿ ಬಲ ತಿರುವು ಪಡೆದು ಬಳ್ಳಾರಿ ರಸ್ತೆಗೆ ಸಾಗಬೇಕು.

-ನಾಗಶೆಟ್ಟಿಹಳ್ಳಿ-ಭೂಪಸಂದ್ರ ಬಸ್‌ ನಿಲ್ದಾಣ-ಕೆ2 ಬಸ್ ನಿಲ್ದಾಣ-ವಿ.ನಾಗೇನಹಳ್ಳಿ ಮುಖ್ಯರಸ್ತೆ (ಗುಡ್ಡದಹಳ್ಳಿ-ಮುಖ್ಯರಸ್ತೆ)- ಗುಡ್ಡದಹಳ್ಳಿ ಸರ್ಕಲ್‌ ನಲ್ಲಿ ಬಲತಿರುವು ಪಡೆದು ಚೋಳನಾಯಕನಹಳ್ಳಿ ಸರ್ಕಲ್‌ ಮೂಲಕ ಬಳ್ಳಾರಿ ರಸ್ತೆಗೆ ಸೇರಬೇಕು.

ಕೆಐಎ ಟು ದೇವನಹಳ್ಳಿ ಮತ್ತು ಯಲಹಂಕ: ಹೆಬ್ಬಾಳ ಮೇಲ್ಸೇತುವೆ-ಸುಮಂಗಲಿ ಸೇವಾಶ್ರಮ ಸರ್ವೀಸ್ ರಸ್ತೆ- ಆನಂದ ನಗರ ಅಂಡರ್‌ ಪಾಸ್‌ನಲ್ಲಿ ಬಲ ತಿರುವು ಪಡೆದು ಸರ್ವೀಸ್ ರಸ್ತೆ ಮೂಲಕ ಕೆ2 ಬಸ್ ನಿಲ್ದಾಣ ಮೂಲಕ ವಿ.ನಾಗೇನಹಳ್ಳಿ ರಸ್ತೆಗೆ ಸಾಗಬೇಕು.

ಬೆಂಗಳೂರು ನಗರ ಟು ವಿ.ನಾಗೇನಹಳ್ಳಿ: ಮೇಖ್ರಿ ಸರ್ಕಲ್‌ ಅಂಡರ್ ಪಾಸ್‌- ಬಳ್ಳಾರಿ ರಸ್ತೆ- ಸಿಬಿಐ ಅಂಡರ್ ಪಾಸ್‌ನಲ್ಲಿ ಬಲ ತಿರುವು ಪಡೆದು ಆರ್‌ಟಿ ನಗರ ಪೊಲೀಸ್ ಠಾಣೆ ಜಂಕ್ಷನ್‌ ಹಾದು ದಿಣ್ಣೂರು ರಸ್ತೆ ಮೂಲಕ ಸಾಗಬೇಕು.

-ಮೇಖ್ರಿ ಸರ್ಕಲ್‌ ಅಂಡರ್‌ ಪಾಸ್‌- ಹೆಬ್ಬಾಳ ಬಸ್‌ ನಿಲ್ದಾಣ- ಕೆ2 ಬಸ್ ನಿಲ್ದಾಣದಲ್ಲಿ ಬಲ ತಿರುವು ಪಡೆದು ವಿ,ನಾಗೇನಹಳ್ಳಿ ಮುಖ್ಯರಸ್ತೆಗೆ ಸಂಚರಿಸಬೇಕು.

Share this article