ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ್ ಹೆಡಗೇವಾರ್, ದೇಶಸೇವೆಯನ್ನು ಎಲ್ಲಕ್ಕಿಂತ ಮೊದಲ ಆದ್ಯತೆಯಾಗಿ ಪರಿಗಣಿಸಿದ್ದರು ಎಂಬುದಾಗಿ ಏಷ್ಯಾನೆಟ್ ಸುದ್ದಿಸಂಸ್ಥೆಯ ಕಾರ್ಯನಿರ್ವಾಹಕ ಮುಖ್ಯಸ್ಥ ರಾಜೇಶ್ ಕಾಲ್ರಾ ಹೇಳಿದರು.
ನವದೆಹಲಿ: ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ್ ಹೆಡಗೇವಾರ್, ದೇಶಸೇವೆಯನ್ನು ಎಲ್ಲಕ್ಕಿಂತ ಮೊದಲ ಆದ್ಯತೆಯಾಗಿ ಪರಿಗಣಿಸಿದ್ದರು ಎಂಬುದಾಗಿ ಏಷ್ಯಾನೆಟ್ ಸುದ್ದಿಸಂಸ್ಥೆಯ ಕಾರ್ಯನಿರ್ವಾಹಕ ಮುಖ್ಯಸ್ಥ ರಾಜೇಶ್ ಕಾಲ್ರಾ ಹೇಳಿದರು.
ಇಲ್ಲಿ ನಡೆದ ಹೆಡಗೇವಾರ್ ಅವರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಲ್ರಾ, ‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾಗಿರುವ ಹೆಡಗೇವಾರ್ ಅವರು ಸಂಘದಲ್ಲಿ ಶಿಸ್ತು ರೂಢಿಸಿಕೊಳ್ಳಲು ಅಗ್ರ ಪಂಕ್ತಿ ಹಾಕಿಕೊಟ್ಟರು. ಅಲ್ಲದೆ ಎಲ್ಲಕ್ಕಿಂತ ದೇಶ ಮತ್ತು ದೇಶಸೇವೆಯೇ ಮೊದಲು ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದರು’ ಎಂದರು.
ಸಂಸತ್ ಭವನದ ಬಾಲಯೋಗಿ ಸಭಾಂಗಣದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ, ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಹೆಡಗೇವಾರ್ ಕುರಿತಾದ ಮ್ಯಾನ್ ಆಫ್ ದಿ ಮಿಲೇನಿಯಾ-ಡಾ. ಹೆಡಗೇವಾರ್ಹೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಾತನಾಡಿ ಸಂಘವನ್ನು ಅರ್ಥ ಮಾಡಿಕೊಳ್ಳಲು ಮನಸ್ಸಿಗಿಂತ ಹೃದಯ ಮುಖ್ಯ ಎಂದರು.