-ಸುರಪುರ ನಗರಸಭೆಯ ನೂತನ ಉಪಾಧ್ಯಕ್ಷ ರಾಜಾ ಪಿಡ್ಡನಾಯಕ
ಕನ್ನಡಪ್ರಭ ವಾರ್ತೆ ಸುರಪುರ
ಸುರಪುರ ನಗರಸಭೆಯ, 2ನೇ ಅವಧಿಗಾಗಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹೀನಾ ಕೌಸರ್ ಹಾಗೂ ಉಪಾಧ್ಯಕ್ಷರಾಗಿ ಇದೇ ಪಕ್ಷದ ರಾಜಾ ಪಿಡ್ಡನಾಯಕ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಆಯ್ಕೆ ಅವಿರೋಧವಾದರೆ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಅಭ್ಯರ್ಥಿ ಪರ ಗೆಲುವು ಕಂಡಿತು.ಮೊದಲ ಅವಧಿಯಲ್ಲಿ ಬಿಜೆಪಿ ನಗರಸಭೆಯ ಗದ್ದುಗೇರಿದ್ದರೆ, ಎರಡನೇ ಅವಧಿಯಲ್ಲಿ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾಧಿಕಾರಿ ಕೈ ಎತ್ತುವ ಮೂಲಕ ಆಯ್ಕೆ ಮಾಡುವಂತೆ ಸೂಚಿಸಿದ್ದರಿಂದ, ಬಿಜೆಪಿ ಅಭ್ಯರ್ಥಿ ವಿಷ್ಣು ಗುತ್ತೇದಾರ್ ಪರ 12 ಮತಗಳು ಬಂದರೆ ಕಾಂಗ್ರೆಸ್ ಅಭ್ಯರ್ಥಿ ರಾಜಾ ಪಿಡ್ಡನಾಯಕ ಪರ 17 ಮತಗಳು ಬಂದವು. ಇದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ರಾಜಾ ಪಿಡ್ಡನಾಯಕ ಆಯ್ಕೆಯಾದರು.
ಸಹಾಯಕ ಚುನಾವಣಾಧಿಕಾರಿಯಾಗಿ ಎಚ್.ಎ. ಸರಕಾವಸ್ ಕಾರ್ಯ ನಿರ್ವಹಿಸಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಸದ ಜಿ. ಕುಮಾರನಾಯಕ, ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಸನ್ಮಾನಿಸಿದರು.
ನಗರಸಭೆ ಸದಸ್ಯರಾದ ನಾಸೀರ್ ಕುಂಡಾಲೆ, ಕಮ್ರುದ್ದೀನ್, ಜುಮ್ಮಣ್ಣ ಕೆಂಗುರಿ, ಅಹಮದ್ ಶರೀಫ್ ಹಾಗೂ ಮುಖಂಡರಾದ ವೆಂಕೋಬ ಯಾದವ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ, ರಾಜಾ ಸಂತೋಷ ನಾಯಕ, ರಾಜಾ ವಿಜಯಕುಮಾರ ನಾಯಕ, ರಾಜಾ ಸುಶಾಂತ ನಾಯಕ, ನಿಂಗರಾಜ ಬಾಚಿಮಟ್ಟಿ, ಭೀಮರಾಯ ಮೂಲಿಮನಿ, ಅಬ್ದುಲ್ ಮಜೀದ್, ರಮೇಶ ದೊರೆ, ಅಬ್ದುಲ್ ಗಪೂರ ನಗನೂರಿ, ಮೆಹಬೂಬ್ ಸಾಬ್ ಒಂಟಿ, ಬೀರಲಿಂಗ ಬಾದ್ಯಾಪುರ ಇದ್ದರು.
10ವೈಡಿಆರ್9 : ಸುರಪುರ ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಸಂಸದ ಕುಮಾರ ನಾಯಕ, ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಸನ್ಮಾನಿಸಿದರು.
10ವೈಡಿಆರ್11 : ಸುರಪುರ ನಗರಸಭೆಯ ನೂತನ ಉಪಾಧ್ಯಕ್ಷ ರಾಜಾ ಪಿಡ್ಡನಾಯಕ