ಕನ್ನಡಪ್ರಭ ವಾರ್ತೆ ದೇವದುರ್ಗ
ಈ ವೇಳೆ ಆಶೀರ್ವಚನ ನೀಡಿದ ಕಲ್ಲೂರು ಅಡವಿಸಿದ್ಧೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಸತಿ-ಪತಿಗಳು ಒಂದಾಗಿ ಬದುಕುವುದು ಶಿವನಿಗೆ ಪ್ರಿಯ. ದೇಹ ಬೇರೆಯಾಗಿದ್ದರೂ ಮನಸ್ಸುಗಳು ಒಂದಾಗಿರಬೇಕು. ಆಚಾರ, ವಿಚಾರ, ಸಂಸ್ಕೃತಿ, ಪರಂಪರೆ ಗತಕಾಲದಿಂದ ಬಂದಿದ್ದು, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಬಡವರಿಗಾಗಿ ಸಾಮೂಹಿಕ ವಿವಾಹಗಳು ಎಂಬ ಮಾತಿದೆ. ಆದರೆ ಮಠಾಧೀಶರು, ಮಹಾತ್ಮರು, ಶರಣರ ಆಶಿರ್ವಾದದಿಂದ ನಡೆಯುವ ಸಾಮೂಹಿಕ ವಿವಾಹ ಎಂದಿಗೂ ಶ್ರೀಮಂತ ಎಂದು ಹೇಳಿದರು.
ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ ರಾಜಶೇಖರ ನಾಯಕ ಮಾತನಾಡಿ, ಮಹಿಳೆಯರು ತವರು ಮನೆ ಬಿಡುವಾಗ ಕಣ್ಣೀರು ಹಾಕುತ್ತಾ ಬಂದಿರುತ್ತಾರೆ. ಆ ಹೆಣ್ಣಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದು ಪುರುಷರ ಕರ್ತವ್ಯವಾಗಿದೆ. ಸಾಮಾಜಿಕ ಕಾರ್ಯಗಳಿಂದ ಮಠ ಭಕ್ತರಿಗೆ ನೆಲೆಯಾಗಿದೆ ಎಂದರು.ಇದೇ ವೇಳೆ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಠದ ಪೀಠಾಧಿಪತಿ ಕಲಿಗಣನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.