ಬೆಂಗ್ಳೂರಲ್ಲಿ ಹೆಗ್ಗಡೆ ಅವರ ವಿಂಟೇಜ್‌ ಕಾರುಗಳ ಎಕ್ಸಿಬಿಷನ್‌

KannadaprabhaNewsNetwork |  
Published : Nov 15, 2025, 01:45 AM IST
Vintage Car

ಸಾರಾಂಶ

ನಗರದ ಅರಮನೆ ಮೈದಾನದಲ್ಲಿ ಟ್ರೈಯೂನ್ ಎಕ್ಸಿಬಿಟರ್ಸ್ ಸಂಸ್ಥೆಯು ಮೂರು ದಿನಗಳ ಕಾಲ ಆಯೋಜಿಸಿರುವ ನಾಲ್ಕನೇ ಅಂತಾರಾಷ್ಟ್ರೀಯ ಆಟೋ ಶೋದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಅತೀವ ಆಸಕ್ತಿಯಿಂದ ಸಂಗ್ರಹಿಸಿರುವ ಕಾರುಗಳು ಕಣ್ಮನ ಸೆಳೆದವು.

 ಬೆಂಗಳೂರು :  ನಗರದ ಅರಮನೆ ಮೈದಾನದಲ್ಲಿ ಟ್ರೈಯೂನ್ ಎಕ್ಸಿಬಿಟರ್ಸ್ ಸಂಸ್ಥೆಯು ಮೂರು ದಿನಗಳ ಕಾಲ ಆಯೋಜಿಸಿರುವ ನಾಲ್ಕನೇ ಅಂತಾರಾಷ್ಟ್ರೀಯ ಆಟೋ ಶೋದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಅತೀವ ಆಸಕ್ತಿಯಿಂದ ಸಂಗ್ರಹಿಸಿರುವ ಕಾರುಗಳು ಕಣ್ಮನ ಸೆಳೆದವು.

ಆಟೋ ಶೋದಲ್ಲಿ ಗತಕಾಲದ ಅಪರೂಪದ ವಾಹನಗಳಿಂದ ಹಿಡಿದು ಅತ್ಯಾಧುನಿಕ ಆಟೋಮೋಟಿವ್ ಎಲೆಕ್ಟ್ರಿಕ್‌ ತಂತ್ರಜ್ಞಾನ ಹೊಂದಿದ ವಿವಿಧ ಕಂಪನಿಗಳ ಕಾರು, ಬೈಕ್‌ ಅನಾವರಣಗೊಳಿಸಲಾಗಿದೆ.

ರಾಜ-ಮಹಾರಾಜರ ಕಾಲದ ಅತ್ಯಂತ ಅಪರೂಪದ ಆಕರ್ಷಣೀಯ ಕಾರು ಪ್ರದರ್ಶನ

ಪ್ರದರ್ಶನದಲ್ಲಿ ದೇಶದ ವಿವಿಧ ಕಂಪನಿಗಳ ಕಾರುಗಳ ಜತೆಗೆ ವಿಶೇಷವಾಗಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಂಗ್ರಹಿಸಿರುವ ರಾಜ-ಮಹಾರಾಜರ ಕಾಲದ ಅತ್ಯಂತ ಅಪರೂಪದ ಗತಕಾಲದ ವೈವಿದ್ಯಮಯ ಹಾಗೂ ಆಕರ್ಷಣೀಯ ಕಾರುಗಳನ್ನು ಪಯಣ ಸಂಗ್ರಹಾಲಯದ ಹೆಸರಿನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಸ್ವಾತಂತ್ಯಪೂರ್ವದ 1936ರ ಕಾಲದ ಜರ್ಮನ್‌ ಮೂಲದ ಒಪೆಲ್‌ ಕೆಡೆಟ್ಸ್‌, 1946ರ ಫೋರ್ಡ್‌ ಫ್ರಿಫೆಕ್ಟ್ ಇ93ಎ ಮಾಡೆಲ್‌ ಕಾರು, 1947ರ ಮೋರಿಸ್‌ 8 ಸಿರೀಸ್ಇ, ಬ್ಯೂಕ್‌ ಸೀರೀಸ್‌ 50, ಹಡ್ಸನ್‌ ಕಮೋಡೋರ್‌,ಮತ್ತು ಫ್ರೇಜರ್‌ ಎಫ್‌-47ಸಿ5 ಮ್ಯಾನ್ಹ್ಯಾಟನ್‌, ಸಿಟ್ರೋಯಿನ್‌ ಟ್ರಾಕ್ಷನ್‌ ಅವ್ಯಾಂಟ್‌ 11 ಸಿ.ವಿ ಸೇರಿದಂತೆ ವಿವಿಧ 8 ವಿಭಿನ್ನ ಕಾರುಗಳಿದ್ದು ಪ್ರತಿಯೊಂದು ವಿಶೇಷ ಆಕರ್ಷಣೀಯ ಬಣ್ಣ ಹೊಂದಿದ್ದು ನೋಡುಗರ ಗಮನ ಸೆಳೆಯುತ್ತಿವೆ.

250ಕ್ಕೂ ಹೆಚ್ಚು ಕಾರುಗಳನ್ನು ಸಂಗ್ರಹಿಸಲಾಗಿದೆ

ಧರ್ಮಸ್ಥಳದಲ್ಲಿ 2 ವಿಂಟೇಜ್‌ ಕಾರುಗಳಿಂದ ಆರಂಭವಾದ ವಸ್ತು ಸಂಗ್ರಹಾಲಯದಲ್ಲಿ ಇದೀಗ 250ಕ್ಕೂ ಹೆಚ್ಚು ಕಾರುಗಳನ್ನು ಸಂಗ್ರಹಿಸಲಾಗಿದೆ. ಇದು ಡಾ.ವೀರೇಂದ್ರ ಹೆಗ್ಗಡೆಯವರ ಸಾಂಸ್ಕೃತಿಕ ಪರಂಪರೆ, ಕಾರುಗಳ ಮೇಲಿರುವ ಆಸಕ್ತಿ, ಸೃಜನಾತ್ಮಕತೆ ತೋರಿಸುತ್ತದೆ. ಪಯಣ ವಸ್ತು ಸಂಗ್ರಹಾಲಯದಲ್ಲಿ ರಾಜಮನೆತನದ ಕಾರುಗಳು, ಸೇನಾ ಕಾರುಗಳು, ಸರ್ಕಾರಿ ಹರಾಜಿನ ಮೂಲಕ ಕೊಂಡ ಕಾರುಗಳನ್ನು ಸಂರಕ್ಷಿಸಲಾಗಿದೆ. ಈ ಮೂಲಕ ಮುಂದಿನ ಪೀಳಿಗೆಗೂ ಪರಿಚಯಿಸಲಾಗುತ್ತಿದೆ ಎಂದು ಪಯಣ ಸಂಗ್ರಹಾಲಯದ ವ್ಯವಸ್ಥಾಪಕ ವಿವೇಕ್‌ ಮಾಹಿತಿ ನೀಡಿದ್ದಾರೆ. ಈ ವೇಳೆ ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಡಾ.ಜಾಕೋಬ್ ಕ್ರಾಸ್ತಾ, ಪ್ರದರ್ಶಕ ಸಿರಿಲ್ ಪೆರೇರಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ