ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ಸಹಕರಿಸಿ: ಟಿ.ಎನ್.ವಿಶುಕುಮಾರ್

KannadaprabhaNewsNetwork |  
Published : Jan 18, 2026, 01:15 AM IST
ಶ್ರೀಗಂಧ ರಕ್ಷಣಾ ವೇದಿಕೆಯ ಮಹಿಳಾ ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭ | Kannada Prabha

ಸಾರಾಂಶ

ತರೀಕೆರೆನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕಾರ ನೀಡಬೇಕು ಎಂದು ಶ್ರೀಗಂಧ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ಟಿ.ಎನ್.ವಿಶುಕುಮಾರ್ ಹೇಳಿದ್ದಾರೆ.

ಶ್ರೀಗಂಧ ರಕ್ಷಣಾ ವೇದಿಕೆ ಮಹಿಳಾ ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕಾರ ನೀಡಬೇಕು ಎಂದು ಶ್ರೀಗಂಧ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ಟಿ.ಎನ್.ವಿಶುಕುಮಾರ್ ಹೇಳಿದ್ದಾರೆ.

ಶ್ರೀಗಂಧ ರಕ್ಷಣಾ ವೇದಿಕೆಯಿಂದ ಸಮೀಪದ ಗಂಧದ ಗುಡಿ-5 ಕಲ್ಲತ್ತಿಗಿರಿ ಸರ್ಕಲ್.ನಲ್ಲಿ ನಡೆದ ಮಹಿಳಾ ಘಟಕದ ನೂತನ ಪದಾದಿಕಾರಿಗಳ ಪದಗ್ರಹಣ, ಕಾಡು ಪ್ರಾಣಿಗಳಿಗೆ ಮತ್ತು ಜೇನುನೊಣಗಳಿಗೆ ನೀರನ್ನೊದಗಿಸಲು ನಿರ್ಮಿಸಿರುವ ಕುಡಿಯುವ ನೀರಿನ ತೊಟ್ಟಿಗೆ ನೀರು ತುಂಬಿಸುವ ಮತ್ತು ಸ್ವಚ್ಛಾತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರೀಗಂಧ ರಕ್ಷಣ ವೇದಿಕೆ ಈಗಾಗಲೇ ಹಲವಾರು ಬಾರಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುವ ಮೂಲಕ ಶ್ರೀ ಕ್ಷೇತ್ರ ಕಲ್ಲತ್ತಿ ಗಿರಿ, ಕೆಮ್ಮಣ್ಣಗುಂಡಿ ಗಿರಿಧಾಮ, ಹೆಬ್ಬೆ ಫಾಲ್ಸ್ ಭಾಗಗಳಿಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿರುವ ಪ್ರಾಸ್ಟಿಕ್ ಬ್ಯಾಗ್, ನೀರಿನ ಬಾಟಲಿ ಮುಂತಾದ ತ್ಯಾಜ್ಯ ವಸ್ತುಗಳನ್ನು ಸ್ವಚ್ಛತಾ ಅಭಿಯಾನದ ಮೂಲಕ ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಹೇಳಿದರು.

ಗಂಧದ ಗುಡಿ ಭಾಗದ 5ರ ಬಳಿ ಶ್ರೀಗಂಧ ರಕ್ಷಣಾ ವೇದಿಕೆಯಿಂದ ಹೋಂ ಸ್ಟೇಗಳನ್ನು ನಿರ್ಮಾಣ ಮಾಡಲಾಗಿದ್ದು ತಲಾ 1 ಕೆ.ಜಿ ತೂಕದಷ್ಟು ಪ್ಲಾಸ್ಟಿಕ್ ತ್ಯಾಜ್ಯ ವಸ್ತು ತಂದು ಕೊಡುವ ಪ್ರವಾಸಿಗರಿಗೆ 1 ರಾತ್ರಿ ತಂಗಲು ಉಚಿತ ವ್ಯವಸ್ಥೆ ಮಾಡಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಶ್ರೀ ಗಂಧ ರಕ್ಷಣ ವೇದಿಕೆ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಮಂಜುಳ ವಿಜಯಕುಮಾರ್, ಪದಾಧಿಕಾರಿಗಳಾಗಿ ರೋಹಿಣಿ ಎನ್ ಮೂರ್ತಿ, ನಾಗವೇಣಿ ಹರಳಪ್ಪ, ಸಿನೀಯರ್ ಚೇಂಬರ್ ಇಂಟರ್‌ನ್ಯಾಷನಲ್ ತರೀಕೆರೆ ಪುರಸಭೆಯಿಂದ ಕಲ್ಪನಾ ಸುಧಾಮ್, ನ್ಯಾಷನಲ್ ಕೋ-ಅರ್ಡಿನೇಟರ್‌ನ ಅಧ್ಯಕ್ಷೆ ಆಶಾ ಬೋಸ್ಲೆ, ಕಾರ್ಯದರ್ಶಿ ರಾಜೇಶ್ವರಿ ಸೀತಾರಾಮು ಮುಂತಾದವರು ಹಾಜರಿದ್ದು ಶ್ರೀಗಂಧ ರಕ್ಷಣಾ ವೇದಿಕೆ ಮಹಿಳಾ ಘಟಕದ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕಾರ ಮಾಡಿ ಪ್ರವಾಸಿ ತಾಣಗಳಲ್ಲಿದ್ದ ಪ್ಲಾಸ್ಟಿಕ್ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು.ತಿಗಡ ಗ್ರಾಪಂ ಅಧ್ಯಕ್ಷೆ ನೀಲ್ಲಮ್ಮ ಸುಧೀಪ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-

17ಕೆಟಿಆರ್.ಕೆ.2ಃ ತರೀಕೆರೆ ಸಮೀಪದ ಕಲ್ಲತ್ತಗಿರಿ ಸರ್ಕಲ್ ಬಳಿ ಇರುವ ಗಂಧದ ಗುಡಿ ಭಾಗ -5- ರ ಬಳಿ ನಡೆದ ಶ್ರೀ ಗಂಧ ರಕ್ಷಣ ವೇದಿಕೆ ನೂತನ ಮಹಿಳಾ ಘಟಕದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುಳ, ವಿಜಯಕುಮಾರ್, ವೇದಿಕೆ ಸಂಸ್ಥಾಪಕ ಅಧ್ಯಕ್ಷ ಟಿ.ಎನ್ ವಿಶುಕುಮಾರ್ ಹಾಗೂ ಮಹಿಳಾ ಪದಾಧಿಕಾರಿಗಳು, ಕಾಡು ಪ್ರಾಣಿ ಗಳು ಕುಡಿಯಲು ವ್ಯವಸ್ಥೆ ಮಾಡಿರುವ ನೀರಿನ ತೊಟ್ಟಿಗೆ ನೀರು ತುಂಬಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭದ್ರೆಗೆ ಹಣ ನೀಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರ ಉದಾಸೀನ
ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ