ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸಹಕರಿಸಿ: ಶಾಸಕ ಗಾಲಿ ಜನಾರ್ದನ್‌ ರೆಡ್ಡಿ

KannadaprabhaNewsNetwork |  
Published : Mar 09, 2025, 01:45 AM IST
5646465 | Kannada Prabha

ಸಾರಾಂಶ

ಸಮ್ಮೇಳನಕ್ಕೆ ಅವಶ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು. ಸಮ್ಮೇಳನದ ಅಧ್ಯಕ್ಷರ ಆಯ್ಕೆ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಣ್ಯರನ್ನು ಮಾಡುವಂತೆ ಶಾಸಕ ಗಾಲಿ ಜನಾರ್ದನ್‌ ರೆಡ್ಡಿ ಸಲಹೆ ನೀಡಿದರು.

ಗಂಗಾವತಿ:

ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಎಲ್ಲರು ಸಹಕರಿಸಿ ಎಂದು ಶಾಸಕ ಗಾಲಿ ಜನಾರ್ದನ್‌ ರೆಡ್ಡಿ ಹೇಳಿದರು.

ಇಲ್ಲಿಯ ತಾಲೂಕು ಸಾಹಿತ್ಯ ಭವನದಲ್ಲಿ ಸಮ್ಮೇಳನದ ಲಾಂಛನ ಹಾಗೂ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಸಮ್ಮೇಳನಕ್ಕೆ ಅವಶ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು. ಸಮ್ಮೇಳನದ ಅಧ್ಯಕ್ಷರ ಆಯ್ಕೆ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಣ್ಯರನ್ನು ಮಾಡುವಂತೆ ಸಲಹೆ ನೀಡಿದ ಅವರು, ಸಮ್ಮೇಳನ ಮುಗಿದ ನಂತರ ಆನೆಗೊಂದಿ ಉತ್ಸವದ ಸಿದ್ಧತೆ ನಡೆಸೋಣ ಎಂದರು.

ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಗಂಗಾವತಿ ನಗರ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿ ರಾಜ್ಯಕ್ಕೆ ಮಾದರಿಯಾಗಿದೆ. ಆದರಿಂದ ಎಲ್ಲರೂ ಸಮ್ಮೇಳನ ಯಶಸ್ಸಿಗೆ ಸಹಕರಿಸಬೇಕು ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ನಗರವು ಸಾಹಿತ್ಯ ಸಂಗೀತಕ್ಕೆ ಪ್ರಸಿದ್ಧಿ ಪಡೆದಿದೆ. ಕನ್ನಡದ ಮನುಸುಗಳು ಸಮ್ಮೇಳನದ ಯಶಸ್ವಿಗೆ ಕಾರಣರಾಗಬೇಕೆಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣೇಗೌಡ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆ ಮೇಲೆ ನಗರಸಭೆ ಅಧ್ಯಕ್ಷ ಮೌಲಾಸಾಬ್‌, ಉಪಾಧ್ಯಕ್ಷೆ ಪಾರ್ವತಿ ದುರಗೇಶ, ರಮೇಶ ಚೌಡ್ಕಿ, ತಾಲೂಕು ಕಸಾಪ ಅಧ್ಯಕ್ಷ ರುದ್ರೇಶ ಆರಾಳ, ನಬೀಸಾಬ್‌,ರಮೇಶ ಕುಲಕರ್ಣಿ, ಮಹಿಬೂಬು, ಶಿವಾನಂದ ತಿಮ್ಮಾಪುರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!