ಅನಾಥ ಹಾಗೂ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಶ್ರೇಷ್ಠವಾದದ್ದು

KannadaprabhaNewsNetwork |  
Published : Jun 17, 2025, 01:18 AM IST
ಅನಾಥ ಹಾಗೂ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದು ಶ್ರೇಷ್ಟ ದಾನ : ರಂಗಾಪುರ ಶ್ರೀಗಳು | Kannada Prabha

ಸಾರಾಂಶ

ಬರವಣಿಗೆಗೆ ಅವಶ್ಯವಾಗುವಂತಹ ಪರಿಕರಗಳು ಮತ್ತು ವಸ್ತುಗಳನ್ನು ದಾನ ಮಾಡಿ ನೆರವಾಗುವುದು ಉತ್ತಮ ಹಾಗೂ ಶ್ರೇಷ್ಠ ದಾನ ಎನಿಸಿಕೊಳ್ಳಲಿದೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಎಲ್ಲಾ ದಾನಗಳಿಗಿಂತ ಅನಾಥ ಹಾಗೂ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತ ನೋಟ್‌ಬುಕ್, ಪುಸ್ತಕ, ಬರವಣಿಗೆಗೆ ಅವಶ್ಯವಾಗುವಂತಹ ಪರಿಕರಗಳು ಮತ್ತು ವಸ್ತುಗಳನ್ನು ದಾನ ಮಾಡಿ ನೆರವಾಗುವುದು ಉತ್ತಮ ಹಾಗೂ ಶ್ರೇಷ್ಠ ದಾನ ಎನಿಸಿಕೊಳ್ಳಲಿದೆ ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಕೆರೆಗೋಡಿ-ರಂಗಾಪುರದ ಶ್ರೀ ಪರದೇಶಿಕೇಂದ್ರ ವಿದ್ಯಾಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸುಕ್ಷೇತ್ರದ ಹಿರಿಯ ವಿದ್ಯಾರ್ಥಿಗಳ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಉಚಿತ ನೋಟ್‌ಬುಕ್ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಇಲ್ಲಿನ ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಮಕ್ಕಳಿಗೆ ದಾನದ ರೂಪದಲ್ಲಿ ನೋಟ್‌ಬುಕ್, ಲೇಖನ ಸಾಮಗ್ರಿಗಳನ್ನು ವಿತರಿಸುತ್ತಿರುವುದು ಸಂತಸ ತಂದಿದೆ. ತಮ್ಮ ವಿದ್ಯಾರ್ಥಿ ಜೀವನದ ಕಷ್ಟಕಾಲದಲ್ಲಿ ತಾವು ವಿದ್ಯೆ ಕಲಿತ ಅನಾಥಾಲಯಗಳು, ಶಾಲೆ, ಮಠಗಳ ನೆನಪಿಸಿಕೊಂಡು ತಮ್ಮಿಂದ ಆಗುವ ಸಹಾಯವನ್ನು ಮಾಡುವ ಈ ಅಪರೂಪದ ಕೆಲಸ ಶ್ರೇಷ್ಟವಾದುದು. ತಮ್ಮ ವಿದ್ಯಾಭ್ಯಾಸದ ಅವಧಿಯ ಕಷ್ಟದ ದಿನಗಳನ್ನು ಮರೆಯದೆ ನಮ್ಮಂತೆಯೆ ಇತರೆ ವಿದ್ಯಾರ್ಥಿಗಳು ಸಹ ಭವಿಷ್ಯದಲ್ಲಿ ಉತ್ತಮ ಜೀವನ ಕಟ್ಟಿಕೊಳ್ಳಲಿ ಎಂಬ ಕಾಳಜಿಯಿಂದ ಹಿರಿಯ ವಿದ್ಯಾರ್ಥಿಗಳು ಅನಾಥಾಲಯದ ಮಕ್ಕಳಿಗೆ ವಸ್ತ್ರ, ನೋಟ್ ಬುಕ್‌ಗಳನ್ನು ವಿತರಿಸಿ ಬಹುದೊಡ್ಡ ಮಾನವೀಯತೆ ತೋರುತ್ತಿರುವುದು ಎಲ್ಲರಿಗೂ ಆದರ್ಶವಾಗಿದೆ. ಇಲ್ಲಿನ ಮಕ್ಕಳು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಓದಿನತ್ತ ಆಸಕ್ತಿ ವಹಿಸಬೇಕು. ತಂದೆ ತಾಯಿಯ ಕಷ್ಟ ಅರಿತು ಸಂಸ್ಕಾರ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆಚಾರ, ವಿಚಾರವಂತರಾಗಿ ಉತ್ತಮ ಬದುಕನ್ನು ಕಟ್ಟಿಕೊಂಡು ಸ್ವಾವಲಂಬಿಗಳಾಗಿ ಶ್ರೀಮಠಕ್ಕೆ ಕೀರ್ತಿ ತರಬೇಕೆಂದ ಶ್ರೀಗಳು ಹಿರಿಯ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀ ಶಂಕರೇಶ್ವರ ಸ್ವಾಮಿಯವರಿಗೆ ಮತ್ತು ಗದ್ದುಗೆಗಳಿಗೆ ಅಭೀಷಕ ಏರ್ಪಡಿಸಲಾಗಿತ್ತು. ನಂತರ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ನೋಟ್‌ಬುಕ್ ಹಾಗೂ 50 ಜಾಮಿಟ್ರಿ ಬಾಕ್ಸ್, ಎರಡು ಸಾವಿರ ಪೆನ್ನುಗಳು, 400 ವಿದ್ಯಾರ್ಥಿಗಳಿಗೆ ಪ್ರಾರ್ಥನ ಸಮವಸ್ತ್ರ (ಪಂಚೆ ವಸ್ತ್ರ) ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಬೆಂಗಳೂರು ಘಟಕದ ಅಧ್ಯಕ್ಷ ರಾಜಾನಾಯ್ಕ್, ಕಾರ್ಯದರ್ಶಿ ಸತೀಶ್‌ಕುಮಾರ್, ಹಿರಿಯ ವಿದ್ಯಾರ್ಥಿಗಳ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಅಧ್ಯಕ್ಷ ಯು.ಕೆ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಉಂಡಿಗನಾಳು ಬಸವರಾಜು, ಸಹಕಾರ್ಯದರ್ಶಿ ಕೆ.ಆರ್.ಶಂಕರಪ್ಪ, ಆಡಳಿತಾಧಿಕಾರಿ ಲೋಕೇಶ್, ಆರ್. ಉಮೇಶ್, ಮಲ್ಲಿಕಾರ್ಜುನ್, ಎಂ.ಬಿ. ಪ್ರಸನ್ನ, ಶಿವಾನಂದ್, ಕುಮಾರ್, ಪ್ರದೀಪ್, ಶಂಕರಮಣಿ, ಶಿವಮೊಗ್ಗದ ಹಿರಿಯ ವಿದ್ಯಾರ್ಥಿಗಳಾದ ಎಚ್.ಆರ್. ಬಸವರಾಜು, ದೇವರಹೊಸಹಳ್ಳಿ ಮಾಂತೇಶ್, ಮುರುಗನ್, ಶ್ರೀಧರ್ ರುದ್ರೇಶ್, ಬಿ.ಜಿ.ಮೋಹನ್, ಎಂ.ಸಿ. ಮಲ್ಲಿಕಾರ್ಜುನ, ಭಕ್ತರಾದ ವಿಶ್ವನಾಥ್, ಬೆಂಗಳೂರಿನ ವೈದ್ಯ ದಂಪತಿಗಳಾದ ಅನಿತಾರಮೇಶ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''