ಹೇಮಗಿರಿ ಜಾನುವಾರು ಜಾತ್ರೆ, ಶ್ರೀಕಲ್ಯಾಣ ವೆಂಕಟರಮಣ ಬ್ರಹ್ಮರಥೋತ್ಸವ

KannadaprabhaNewsNetwork |  
Published : Dec 10, 2024, 12:30 AM IST
9ಕೆಎಂಎನ್ ಡಿ19 | Kannada Prabha

ಸಾರಾಂಶ

ನಾಡಿನ ಅತ್ಯಂತ ಸುಪ್ರಸಿದ್ಧ ದನಗಳ ಜಾತ್ರೆಯಲ್ಲಿ ಹೇಮಗಿರಿ ಜಾತ್ರೆ ಮಹತ್ವ ಪಡೆದುಕೊಂಡಿದೆ. ಜನವರಿಯಿಂದ ಜಾನುವಾರು ಜಾತ್ರೆ ಹಾಗೂ ಫೆಬ್ರವರಿ 5ರಂದು ಶ್ರೀಕಲ್ಯಾಣ ವೆಂಕಟರಮಣ ಬ್ರಹ್ಮರಥೋತ್ಸವ ನಡೆಯಲಿದೆ. ರಾಜ್ಯದಲ್ಲಿಯೇ ಹೆಸರಾಗಿರುವ ಹೇಮಗಿರಿ ಜಾತ್ರೆಯಲ್ಲಿ ಯಾವುದೇ ಲೋಪವಾಗದಂತೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪುರಾಣ ಪ್ರಸಿದ್ಧ ಐತಿಹಾಸಿಕ ತಾಲೂಕಿನ ಹೇಮಗಿರಿಯಲ್ಲಿ ಜಾನುವಾರು ಜಾತ್ರೆ ಹಾಗೂ ಶ್ರೀಕಲ್ಯಾಣ ವೆಂಕಟರಮಣ ಬ್ರಹ್ಮ ರಥೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ಆಚರಿಸಲು ಕ್ರಮ ವಹಿಸುವಂತೆ ಶಾಸಕ ಎಚ್.ಟಿ. ಮಂಜು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಹೇಮಾವತಿ ಜಾತ್ರೆ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಾತ್ರೆ, ಬ್ರಹ್ಮ ರಥೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ, ಬರುವ ರೈತರು, ಜನರಿಗೆ ಅಗತ್ಯ ಸೌಲಬ್ಯ ಕಲ್ಪಿಸಲು ಮುಂದಾಗಬೇಕು ಎಂದರು.

ನಾಡಿನ ಅತ್ಯಂತ ಸುಪ್ರಸಿದ್ಧ ದನಗಳ ಜಾತ್ರೆಯಲ್ಲಿ ಹೇಮಗಿರಿ ಜಾತ್ರೆ ಮಹತ್ವ ಪಡೆದುಕೊಂಡಿದೆ. ಜನವರಿಯಿಂದ ಜಾನುವಾರು ಜಾತ್ರೆ ಹಾಗೂ ಫೆಬ್ರವರಿ 5ರಂದು ಶ್ರೀಕಲ್ಯಾಣ ವೆಂಕಟರಮಣ ಬ್ರಹ್ಮರಥೋತ್ಸವ ನಡೆಯಲಿದೆ. ರಾಜ್ಯದಲ್ಲಿಯೇ ಹೆಸರಾಗಿರುವ ಹೇಮಗಿರಿ ಜಾತ್ರೆಯಲ್ಲಿ ಯಾವುದೇ ಲೋಪವಾಗದಂತೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಎಲ್ಲಾ ಇಲಾಖೆ ಮುಖ್ಯಸ್ಥರ ಸಭೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಬೇಕು. ದನ ಕಟ್ಟುವ ಸ್ಥಳಕ್ಕೆ ವಿದ್ಯುತ್ ವ್ಯವಸ್ಥೆ, ಸಂಚಾರಿ ನೀರಿನ ಟ್ಯಾಂಕ್, ಕಿರು ನೀರು ಸರಬರಾಜು ಘಟಕಗಳ ಮೂಲಕ ಜನ ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲು. ಮಂದಗೆರೆ ಎಡದಂಡೆ ಮತ್ತು ಹೇಮಗಿರಿ ಕಾಲುವೆಗಳಿಗೂ ನೀರನ್ನು ಹರಿಸಲು ಹೇಮಾವತಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.

ಜಾತ್ರೆಯಲ್ಲಿ ಎಲ್ಲಾ ಇಲಾಖೆಗಳಿಂದ ಮಳಿಗೆ ತೆರೆದು ಇಲಾಖೆಯಿಂದ ಸಿಗುವ ಸೌಲಭ್ಯದ ಬಗ್ಗೆ ಜನರಿಗೆಮಾಹಿತಿ ನೀಡಲಾಗುತ್ತದೆ. ತಾತ್ಕಾಲಿಕ ಪೊಲೀಸ್ ಠಾಣೆ, ಪಶು ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆ ತೆರೆಯಲಾಗುತ್ತದೆ ಒಂದು ಮಾಹಿತಿ ಕೇಂದ್ರ ತೆರೆದು ಜಾತ್ರೆಗೆ ಬರುವ ಜನ, ಜಾನುವಾರಿಗಳಿಗೆ ಸಣ್ಣ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಜಾತ್ರೆಗೆ ಬರುವ ರೈತರು ರಥೋತ್ಸವದ ವರೆಗೂ ಇದ್ದು ಜಾತ್ರೆ ಮೆರುಗು ಹೆಚ್ಚಿಬೇಕು. ಪ್ರತಿ ವರ್ಷಕ್ಕೂ ಜಾತ್ರಾ ಮಹೋತ್ಸವದಲ್ಲಿ ವಿಶೇಷತೆ ಇರಬೇಕೆಂದು ಪೌರಾಣಿಕ ನಾಟಕ ಪ್ರದರ್ಶನ ಏರ್ಪಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಜಾತ್ರಾ ಮಹೋತ್ಸವದಲ್ಲಿ ತೊಡಕಾಗುವ ಕೆಲ ಸಣ್ಣಪುಟ್ಟ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಬಗೆಹರಿಸುತ್ತಿಲ್ಲ ಎಂದು ಕೆಲವು ರೈತರು ಸಭೆಯಲ್ಲಿ ದೂರಿದರು. ರೈತರ ದೂರನ್ನು ಆಲಿಸಿದ ಶಾಸಕರು ದೇವಾಲಯದ ಸಮಸ್ಯೆಗಳ ಶೀಘ್ರವೇ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್, ತಾಪಂ ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು, ಪಶುಪಾಲನೆ ಇಲಾಖೆ ಸಹಾಯ ನಿರ್ದೇಶಕ ಡಾ.ಎಚ್.ಎಸ್.ದೇವರಾಜು, ಪಿಡಬ್ಲ್ಯೂಡಿ ಎಂಜಿನಿಯರ್ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಎನ್.ಜಯಲಕ್ಷ್ಮಿ ಅಣ್ಣಪ್ಪ, ಮುಖಂಡ ಬಂಡಿಹೊಳೆ ರಾಮೇಗೌಡ, ಯಜಮಾನ್ ದೇವರಸೇಗೌಡ, ಕಾಯಿ ಮಂಜೇಗೌಡ, ತಾಲೂಕು ಆರೋಗ್ಯ ಅಧಿಕಾರಿ ಡಾ.ಅಜಿತ್, ವಲಯ ಅರಣ್ಯ ಇಲಾಖೆ ಅನಿತಾ, ಅಬಕಾರಿ ಅಧಿಕಾರಿ ದೀಪಕ್, ಪಿಡಿಒ ಶಿವಕುಮಾರ್, ಕಸಬಾ ಹೋಬಳಿ ರಾಜಸ್ವ ನಿರಕ್ಷಕ ಜ್ಞಾನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌