ವಿವಿಧ ಇಲಾಖೆಯ ಅಧಿಕಾರಿಗಳು ಗೈರು, ಕ್ರಮಕ್ಕೆ ಶಿಫಾರಸ್ಸು

KannadaprabhaNewsNetwork |  
Published : Nov 09, 2025, 01:15 AM IST
66 | Kannada Prabha

ಸಾರಾಂಶ

ಸಂವಿಧಾನದ 73ನೇ ತಿದ್ದುಪಡಿಯ ಆಶೋತ್ತರಗಳಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನ

ಕನ್ನಡಪ್ರಭ ವಾರ್ತೆ ಭೇರ್ಯ ಗ್ರಾಪಂ ಅಧಿಕಾರ ವಿಕೇಂದ್ರಿಕರಣದಲ್ಲಿ ಸ್ಥಳೀಯ ಗ್ರಾಪಂ ಮಹತ್ವದ ಹೆಜ್ಜೆ ಇಟ್ಟಿದ್ದು, ಇಂದು ನಡೆದ ಪ್ರಗತಿ ಪರಿಶೀಲನಾ ‌(ಕೆಡಿಪಿ) ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗುವ ಮೂಲಕ ಪಂಚಾಯಿತಿಯ ಸಮಗ್ರ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳುವುದಿಲ್ಲ, ಆದ್ದರಿಂದ ಗೈರಾದ ಇಲಾಖೆಯ ಅಧಿಕಾರಿಗಳಿಗೆ ಕೂಡಲೇ ನೋಟಿಸ್ ನೀಡಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾಪಂ ಅಧ್ಯಕ್ಷೆ ಹೇಮಲತಾ ನಾಗರಾಜ್ ತಿಳಿಸಿದರು.ಮೇಲೂರು ಗ್ರಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ‌ಮಾತನಾಡಿದರು.ಕರ್ನಾಟಕ ಅಭಿವೃದ್ಧಿ ಕಾರ್ಯಕ್ರವನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) 2025-26ನೇ ಸಾಲಿನ 2ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳು ಅಸಕ್ತಿ ವಹಿಸ ಬೇಕಿದೆ ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಿದರೆ ಗ್ರಾಮ ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದರು.ಬಳಿಕ ಪಿಡಿಓ ಅನಿತಾ ಮಾತನಾಡಿ, ಸಂವಿಧಾನದ 73ನೇ ತಿದ್ದುಪಡಿಯ ಆಶೋತ್ತರಗಳಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಬ್ದಾರಿಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸಲಾಗಿರುತ್ತದೆ. ಈ ನಿಟ್ಟಿನ್ನಲ್ಲಿ ಕೆಡಿಪಿ ಸಭೆಯ ಮಹತ್ವ ಬಹಳಷ್ಟಿದೆ ಎಂದು ಕೆಡಿಪಿ ಸಭೆಯ ಮಹತ್ವದ ಬಗ್ಗೆ ಸಭೆಗೆ ತಿಳಿಸಿದರು.ಸಭೆಗೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ರೇಷ್ಮೆ ಇಲಾಖೆ,ಪಶುಪಾಲನೆ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಆಹಾರ ಇಲಾಖೆ, ಶಾಲಾ ಮುಖ್ಯಸ್ಥರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿ ತಮ್ಮ ಅನುಪಾಲನಾ ವರದಿ ಮಂಡಿಸಿದರು.ಕೃಷಿ, ಮೀನುಗಾರಿಕೆ, ಆಹಾರ, ಕೆಇಬಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ, ಅರಣ್ಯ ಸಣ್ಣ ನೀರಾವರಿ, ಸಮಾಜ ಕಲ್ಯಾಣ, ಗ್ರಾಮೀಣಾ ರಸ್ತೆಗಳು ಇಲಾಖೆಯ ಅಧಿಕಾರಿಗಳ ಗೈರುಹಾಜರಾಗಿದ್ದು, ಈ ಬಗ್ಗೆ ಅಧ್ಯಕ್ಷೆ ಹೇಮಲತಾ ನಾಗರಾಜ್ ತೀವ್ರ ಆಕ್ಷಪಣೆ ವ್ಯಕ್ತಪಡಿಸಿ ಗೈರು ಹಾಜರಾದ ಇಲಾಖೆ ಅಧಿಕಾರಿಗಳ ಬಗ್ಗೆ ಕ್ರಮಕೈಗೊಳ್ಳಲು ಅಗತ್ಯ ಕ್ರಮವಹಿಸುವಂತೆ ತಾಪಂ ಇಒ ಪರವಾಗಿ ಹಾಜರಿದ್ದ ಲೆಕ್ಕಾಧಿಕಾರಿ ಶಿವಕುಮಾರ್‌ಅವರಿಗೆ ಸೂಚಿಸಿದರು.ನಂತರ ಗ್ರಾಪಂ ನಿವೃತ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು.ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ನಿವೃತ್ತಿ ಹೊಂದಿದವರಿಗೆ ಉಪಧನದ ಚೆಕ್ ವಿತರಿಸಿದರು.ಉಪಾಧ್ಯಕ್ಷೆ ಲೀಲಾವತಿ ಲಿಂಗರಾಜ ನಾಯಕ, ಸದಸ್ಯರಾದ ನರೇಂದ್ರ ಕುಮಾರ್‌, ಮಧು, ಗವಿರಂಗೇಗೌಡ, ಮಹದೇವಮ್ಮ, ಕುಮಾರ್ , ಕೆ.ವಿ. ಕುಮಾ‌ರ್, ವಿಜಯ ರಾಮಕೃಷ್ಣಗೌಡ, ದೀಪಿಕಾರಘು, ವೆಂಕಟೇಶ, ಪ್ರೇಮ ನಾಗೇಶ, ಪ್ರಭಾಕರ್, ಪುಟ್ಟಸ್ವಾಮೀಗೌಡ, ಭಾರತಿ ವಿಶ್ವನಾಥ್, ಕಾರ್ಯದರ್ಶಿ ಚೆಲುವೇಗೌಡ, ಬಿಲ್ ಕಲೆಕ್ಟರ್ ಪ್ರಸನ್ನ, ಡಿಇಓ ಮಹೇಶ, ಅಟೆಂಡರ್ ಶಿವಕುಮಾ‌ರ್ ಇದ್ದರು.--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ