ಧಾರ್ಮಿಕ ಚಿಂತನೆಯ ಸ್ಫೂರ್ತಿ ಹೇಮರೆಡ್ಡಿ ಮಲ್ಲಮ್ಮ

KannadaprabhaNewsNetwork |  
Published : May 11, 2025, 01:17 AM IST
10ಕೆಪಿಡಿವಿಡಿ01: | Kannada Prabha

ಸಾರಾಂಶ

ದೇಶದಲ್ಲಿ ಶಾಂತಿ, ನೆಮ್ಮದಿಯಾಗಿ ಬಾಳಬೇಕಾದರೆ ಹೇಮರೆಡ್ಡಿ ಮಲ್ಲಮ್ಮ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಿಕೊಂಡು ನಡೆದರೆ ಮಾತ್ರ ಒಳಿತು.

ದೇವದುರ್ಗ: ಧಾರ್ಮಿಕ ಚಿಂತನೆಯ ಸ್ಫೂರ್ತಿಯ ಚಿಲುಮೆಯಾಗಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರು ಅಗಿದ್ದರು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.ಅವರು ಶನಿವಾರ ಪಟ್ಟಣದಲ್ಲಿರುವ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಾಲಯದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ 603ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು.ದೇಶದಲ್ಲಿ ಶಾಂತಿ, ನೆಮ್ಮದಿಯಾಗಿ ಬಾಳಬೇಕಾದರೆ ಹೇಮರೆಡ್ಡಿ ಮಲ್ಲಮ್ಮ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಿಕೊಂಡು ನಡೆದರೆ ಮಾತ್ರ ಒಳಿತು. ಇಲ್ಲವಾದರೆ, ಕಷ್ಟ ಅನುಭವಿಸಬೇಕಾಗುತ್ತೆ. ನಿತ್ಯ ಜೀವನಲ್ಲಿ ಪ್ರತಿಯೊಬ್ಬರು ಶ್ರಮವಹಿಸಿ ದುಡಿದು ಕುಟುಂಬ ನಿರ್ವಹಣೆ ಮಾಡಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಪಕ್ಷದ ಮುಖಾಂಡರದ ಶಿಖರೇಶ್ ಪಾಟೀಲ್ ಜೋಳದಹೇಡಗಿ, ನಾಗರಾಜ್ ಪಾಟೀಲ್ ಗೌರಂಪೇಟ್, ಈಸಾಕ್ ಮೇಸ್ತ್ರಿ, ಹನುಮಯ್ಯ ಗಾಲಿ ಅರೆಕೇರ, ಅಮರೇಶ್ ಗೌಡ, ಯುವ ಮುಖಂಡರಾದ ರವಿ ದೇಸಾಯಿ, ವೀರೇಶ ಸಾಹು ರಾಮದುರ್ಗ, ಮಹೇಶ್ ಸಾಹು ಖೇಣೆದ, ಇತರರು ಉಪಸ್ಥಿತರಿದ್ದರು.-----10ಕೆಪಿಡಿವಿಡಿ01: ದೇವದುರ್ಗ ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ 603ನೇ ಜಯಂತಿ ಆಚರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ