ಮುಂದಿನ ಹಂಗಾಮಿಗೆ ಅತ್ತಿಹಳ್ಳಿ ಕೆರೆಗೆ ಹೇಮಾವತಿ ನೀರು

KannadaprabhaNewsNetwork |  
Published : Mar 02, 2026, 01:45 AM IST
1ಎಚ್ಎಸ್ಎನ್16 :     ಅತಿಹಳ್ಳಿ ಗ್ರಾಮದ ಶುದ್ಧ ನೀರು ಘಟಕವನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಅತಿಹಳ್ಳಿ ಗ್ರಾಮದ ಶುದ್ಧ ನೀರು ಘಟಕ ಉದ್ಘಾಟಿಸಿ ಮಾತನಾಡಿದರು. 72 ಕೋಟಿ ರು. ವೆಚ್ಚದಲ್ಲಿ 25 ಕೆರೆಗಳಿಗೆ ನೀರು ಹರಿಸುವ ಈ ಯೋಜನೆಯಿಂದ ನುಗ್ಗೇಹಳ್ಳಿ ಹೋಬಳಿಯ 20 ಕೆರೆಗಳಿಗೆ ಮುಂದಿನ ಹಂಗಾಮಿನಲ್ಲಿ ನೀರು ಹರಿಸಲಾಗುವುದು ಎಂದರು. ಅರಳಾಪುರ ಗ್ರಾಮದ ಹತ್ತಿರ ಬಾಕಿ ಉಳಿದಿರುವ 900 ಮೀಟರ್‌ ಕಾಮಗಾರಿ ಪೂರ್ಣಗೊಳಿಸಲು ರೈತ ಸಂಘದ ಅಧ್ಯಕ್ಷ ಮಂಜೇಗೌಡ ಅವರ ಮನವೊಲಿಸಿ ಕಾಮಗಾರಿಗೆ ಭೂಮಿ ಬಿಡಿಸಲಾಗಿದೆ ಎಂದರು.

ನುಗ್ಗೇಹಳ್ಳಿ: ತೋಟಿ ನೀರಾವರಿ ಯೋಜನೆ ಮೂಲಕ ಅತ್ತಿಹಳ್ಳಿ ಕೆರೆಗೆ ಮುಂದಿನ ಹಂಗಾಮಿನಲ್ಲಿ ಹೇಮಾವತಿ ನದಿ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಭಾನುವಾರ ತಿಳಿಸಿದರು.

ಹೋಬಳಿಯ ಅತಿಹಳ್ಳಿ ಗ್ರಾಮದ ಶುದ್ಧ ನೀರು ಘಟಕ ಉದ್ಘಾಟಿಸಿ ಮಾತನಾಡಿದರು. 72 ಕೋಟಿ ರು. ವೆಚ್ಚದಲ್ಲಿ 25 ಕೆರೆಗಳಿಗೆ ನೀರು ಹರಿಸುವ ಈ ಯೋಜನೆಯಿಂದ ನುಗ್ಗೇಹಳ್ಳಿ ಹೋಬಳಿಯ 20 ಕೆರೆಗಳಿಗೆ ಮುಂದಿನ ಹಂಗಾಮಿನಲ್ಲಿ ನೀರು ಹರಿಸಲಾಗುವುದು ಎಂದರು. ಅರಳಾಪುರ ಗ್ರಾಮದ ಹತ್ತಿರ ಬಾಕಿ ಉಳಿದಿರುವ 900 ಮೀಟರ್‌ ಕಾಮಗಾರಿ ಪೂರ್ಣಗೊಳಿಸಲು ರೈತ ಸಂಘದ ಅಧ್ಯಕ್ಷ ಮಂಜೇಗೌಡ ಅವರ ಮನವೊಲಿಸಿ ಕಾಮಗಾರಿಗೆ ಭೂಮಿ ಬಿಡಿಸಲಾಗಿದೆ ಎಂದರು.

ಹೋಬಳಿಯ 90% ಎಲ್ಲಾ ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ವೃದ್ದಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಿರಿಯಣ್ಣಗೌಡ, ರಾಜ್ಯ ರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್, ಮುಖಂಡರಾದ ಸಂಪತ್ ಕುಮಾರ್, ನಾಗರಾಜ್, ಎಲ್ ಐ ಸಿ ಕುಮಾರ್, ಎಚ್. ಕೆ. ಅಶೋಕ್, ಕೇಬಲ್ ನಾಗರಾಜ್, ಅನಿತಾ ಮಹೇಶ್, ನಾಗೇಂದ್ರ, ಲೋಕೇಶ್, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಚಂದ್ರೇಗೌಡ, ಮಂಜಚಾರ್, ಹೇಮಂತ್, ಶೇಖರ್ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದುಬೈನಲ್ಲಿ ಸಿಲುಕಿದ ಅರಸೀಕೆರೆ ಮತ್ತು ಅಂಗಡಿಹಳ್ಳಿ ಜನರು
ಶ್ರೀ ರೇಣುಕಾಚಾರ್ಯ, ಪಂಚಾಚಾರ್ಯರ ಸ್ಮರಿಸಿದರೆ ಪಾಪ ನಾಶ: ಶಿವಕುಮಾರ ಸ್ವಾಮಿ