ಮೋಟಾರ್‌, ಪಂಪ್‌ಗಳ ತುಳಿದು ನಾಶ ಮಾಡಿದ ಕಾಡಾನೆ ಹಿಂಡು

KannadaprabhaNewsNetwork |  
Published : Aug 22, 2026, 01:30 AM IST
21ಎಚ್ಎಸ್ಎನ್10  :ಬಿಕ್ಕೋಡು ಹೋಬಳಿಯ ಸೋಮನಹಳ್ಳಿಯ.  ಮನೋಹರ್ ಮೆಂಡೋನ್ಸಾ ಅವರ ತೋಟಕ್ಕೆ ಸುಮಾರು 25  ಕಾಡಾನೆಗಳ ಹಿಂಡು ದಾಳಿ ನಡೆಸಿ  ಕಾಫಿ ಗಿಡ ಹಾಗೂ ಪೈಪು, ಮೋಟಾರುಗಳನ್ನು ತುಳಿದು ನಾಶಪಡಿಸಿದೆ. | Kannada Prabha

ಸಾರಾಂಶ

ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿರುವ ಹಿನ್ನೆಲೆಯಲ್ಲಿ ತೋಟದ ಮಾಲೀಕರು ಹಾಗೂ ಕಾರ್ಮಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸೋಮನಹಳ್ಳಿ ಮನೋಹರ್ ಮೆಂಡೋನ್ಸಾ ತೋಟಕ್ಕೆ 25 ಕಾಡಾನೆಗಳ ಹಿಂಡು ದಾಳಿ

ಕನ್ನಡಪ್ರಭವಾರ್ತೆ, ಬೇಲೂರು

ಬಿಕ್ಕೋಡು ಹೋಬಳಿ ಸೋಮನಹಳ್ಳಿ ಮನೋಹರ್ ಮೆಂಡೋನ್ಸಾ ಅವರ ತೋಟಕ್ಕೆ ಸುಮಾರು 25 ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾಫಿ ಗಿಡ ಹಾಗೂ ನೀರಿನ ಪೈಪು, ಮೋಟಾರುಗಳನ್ನು ತುಳಿದು ನಾಶಪಡಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮನಹಳ್ಳಿಯ ಮನೋಹರ್ ಮೆಂಡೋನ್ಸಾ ಅವರ ತೋಟಕ್ಕೆ ಸುಮಾರು 25 ಕಾಡಾನೆಗಳ ಹಿಂಡು ಕಾಡಾನೆಗಳು ತೋಟಕ್ಕೆ ನುಗ್ಗಿ ಹಾನಿ ಮಾಡುತ್ತಿರುವ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಇಟಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿ ತಕ್ಷಣ ಸ್ಥಳಕ್ಕೆ ಬಂದು ಕಾಡಾನೆಗಳನ್ನು ಓಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿರುವ ಹಿನ್ನೆಲೆಯಲ್ಲಿ ತೋಟದ ಮಾಲೀಕರು ಹಾಗೂ ಕಾರ್ಮಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಾಡಾನೆಗಳು ತೋಟದಲ್ಲಿ ಸಂಚರಿಸುತ್ತಿರುವುದರಿಂದ ಬೆಳೆಗಳಿಗೆ ಹಾನಿಯಾಗುವುದರ ಜೊತೆಗೆ, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸುರಕ್ಷತೆಯ ಬಗ್ಗೆಯೂ ಆತಂಕ ಎದುರಾಗಿದೆ.ಸರ್ಕಾರದ ಗಮನಕ್ಕೆ ತರಲು ಆಗ್ರಹ:

ಸೋಮನಹಳ್ಳಿ ಸೇರಿದಂತೆ ಬಿಕ್ಕೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಶಾಶ್ವತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಡಲು ಅಗತ್ಯ ಸಿಬ್ಬಂದಿ ನಿಯೋಜಿಸುವುದರ ಜೊತೆಗೆ, ತುರ್ತು ಸಂದರ್ಭದಲ್ಲಿ ರೈತರಿಂದ ಬರುವ ಕರೆಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂಟೇಸ್ವಾಮಿ ಕ್ಷೇತ್ರದ ವರಮಹಾಲಕ್ಷ್ಮಿ ಹಬ್ಬಕ್ಕೆ ಧನ ಸಹಾಯ
ನರ್ತಕಿಯರ ಮೇಕಪ್‌ ಕೊಠಡಿಯಾದ ಸಾರ್ವಜನಿಕ ಆಸ್ಪತ್ರೆ..!