ವಿದ್ಯುತ್ ಕಂಬ ಬೀಳುವ ಪರಿಸ್ಥಿತಿಯಲ್ಲಿ ಇದ್ದರೂ ಅಧಿಕಾರಿಗಳು ಮೌನ
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದ1857ರಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪಟ್ಟಣದ ವೀರ ಬಾಬಾಸಾಹೇಬ ಭಾವೆಯವರ ಅರಮನೆ ಪಕ್ಕದಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಂದೆ ಇರುವ ವಿದ್ಯುತ್ ಕಂಬ ಶಿಥಿಲಗೊಂಡು ಸುಮಾರು ವರ್ಷ ಗತಿಸಿದರೂ ಸಹ ಹೆಸ್ಕಾಂ ಕಂಬ ಬದಲಾವಣೆ ಮಾಡಿಲ್ಲ. ಅಧಿಕಾರಿಗಳು ಈ ಮೂಲಕ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ಶಿಕ್ಷಕರು ಮೌನ ಏಕೆ?:
ಪ್ರತಿ ಬಡಾವಣೆಗೆ ಒಬ್ಬರಿಂದ ಇಬ್ಬರು ಲೈನ್‌ಮನ್ ಇರುತ್ತಾರೆ. ಅವರ ಮೇಲೆ ಸೂಪರ್‌ವೈಸರ್ ಇದ್ದರೂ ಈ ಕಂಬಗಳನ್ನು ಸರಿಪಡಿಸಲು ಯಾಕೆ ಸಾಧ್ಯವಾಗಿಲ್ಲ. ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಇಂಥ ಸಮಸ್ಯೆ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಶಾಲೆಯ ಮುಖ್ಯೋಪಾಧ್ಯಾಯರು ಜೂನ್ ತಿಂಗಳಲ್ಲಿಯೇ ಕಂಬ ಮತ್ತು ತಂತಿಗಳನ್ನು ಸರಿಪಡಿಸಬೇಕೆಂದು ಹೆಸ್ಕಾಂಗೆ ಹೇಳಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ಹೆಸ್ಕಾಂ ಅಧಿಕಾರಿಗಳು ತುರ್ತು ಕ್ರಮಕೈಗೊಂಡು ಜೀವ ಬಲಿ ಪಡೆಯುವ ಮೊದಲು ಈ ಕಂಬವನ್ನು ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಹೆಸ್ಕಾಂ ಅಧಿಕಾರಿಗಳು ಹೊಣೆಯಾಗಬೇಕಾದೀತು.
ಎಸ್.ಬಿ. ಹರಿಯಣ್ಣವರ, ಶಾಲೆಯ ಮುಖ್ಯೋಪಾಧ್ಯಾಯಿನಿ
ಎಚ್.ಎಂ. ಖುದವಂದ, ಹೆಸ್ಕಾಂ ಅಧಿಕಾರಿ
ಬಸವರಾಜ ತಾವರೆ, ಜಿಲ್ಲಾ ಜಯ ಕರ್ನಾಟಕ ಸಂಘಟನೆ ಮುಖಂಡ