15ಕ್ಕೆ ಹೈಡ್ ಅಂಡ್ ಸೀಕ್ ಚಿತ್ರ ರಾಜ್ಯಾದ್ಯಂತ ಬಿಡುಗಡೆ

KannadaprabhaNewsNetwork |  
Published : Mar 10, 2024, 01:32 AM IST
ಕ್ಯಾಪ್ಷನಃ9ಕೆಡಿವಿಜಿ37ಃಹೈಡ್ ಅಂಡ್ ಸೀಕ್ ಚಿತ್ರದ ಬಿಡುಗಡೆ ಕುರಿತು ದಾವಣಗೆರೆಯಲ್ಲಿ ಚಿತ್ರದ ನಿರ್ದೇಶಕ ಪುನೀತ್ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. | Kannada Prabha

ಸಾರಾಂಶ

ಹೈಡ್ ಅಂಡ್ ಸೀಕ್ ಚಿತ್ರದ ಬಿಡುಗಡೆ ಕುರಿತು ದಾವಣಗೆರೆಯಲ್ಲಿ ಚಿತ್ರದ ನಿರ್ದೇಶಕ ಪುನೀತ್ ನಾಗರಾಜ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸುನೇರಿ ಆರ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಿಸಿರುವ ‘ಹೈಡ್ ಅಂಡ್ ಸೀಕ್’ ಚಿತ್ರ ಇದೇ ಮಾ.15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಪುನೀತ್ ನಾಗರಾಜ್ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ನನ್ನ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಇದು ಒಂದು ಸಸ್ಪೆನ್ಸ್ ಥಿಲ್ಲರ್ ಸಿನಿಮಾ ಆಗಿದೆ. ಆರ್ಗನೈಜೇಷನ್ ಮೂಲಕ ಹೈ ಪ್ರೊಫೈಲ್ ಕಿಡ್ನಾಪ್‌ಗಳು ಹೇಗೆ ನಡೆಯುತ್ತಿವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೈಡ್ ಅಂಡ್ ಸೀಕ್ ಚಿತ್ರದಲ್ಲಿ ನಾಯಕನೇ ಕಿಡ್ನಾಪರ್ ಆಗಿದ್ದು, ಹೆಚ್ಚು ಮಾತನಾಡದೇ ಯಾವುದನ್ನೂ ಎಕ್ಸ್ಪ್ರೆಸ್ ಮಾಡದ ವ್ಯಕ್ತಿಯ ಪಾತ್ರವಾಗಿದೆ ಎಂದರು.

ಒಬ್ಬ ಬಿಸಿನೆಸ್ ಮ್ಯಾನ್ ಮಗಳಾಗಿರುವ ನಾಯಕಿ ಕಿಡ್ನಾಪ್ ಆದಾಗ ಆಕೆ ಎದುರಿಸುವ ಪರಿಸ್ಥಿತಿ ಎಂತಹದ್ದು, ಕಿಡ್ನಾಪರ್ ಉದ್ದೇಶ, ಹಿನ್ನೆಲೆ ಏನು ಎಂಬುವುದು ಈ ಸಿನಿಮಾದ ಸಾರಾಂಶವಾಗಿದೆ ಎಂದು ತಿಳಿಸಿದರು.

ಬೆಂಗಳೂರು, ಮಾಗಡಿ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಕಥೆ, ಚಿತ್ರಕಥೆ ನಾನೇ ಬರೆದಿದ್ದು, ವಸಂತರಾವ್ ಎಂ. ಕುಲಕರ್ಣಿ ಮತ್ತು ಪುನೀತ್ ನಾಗರಾಜು ನಿರ್ಮಾಪಕರಾಗಿದ್ದಾರೆ. ಛಾಯಾಗ್ರಹಣ ರಿಜೋ ಪಿ ಜಾನ್ ಅವರು ಛಾಯಾಗ್ರಹಣ ಚಿತ್ರಕ್ಕಿದೆ. ಸಂಗೀತ ನಿರ್ದೇಶನ ಸ್ಯಾಂಡೀ ಅದ್ದಂಕಿ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.ನಾಯಕ ಅನೂಪ್ ರೇವಣ್ಣ ಮಾತನಾಡಿ, ಇದು ನನ್ನ 4ನೇ ಚಿತ್ರವಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಮಾರ್ಚ್ 15ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಎಲ್ಲರೂ ಚಿತ್ರ ವೀಕ್ಷಿಸಿ, ಯುವ ಕಲಾವಿದರಿಗೆ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ನಾಯಕಿ ಧನ್ಯ ರಾಮ್‌ಕುಮಾರ್ ಮಾತನಾಡಿ, ನಿರ್ದೇಶಕ ಪುನೀತ್ ನಾಗರಾಜ್ ತುಂಬಾ ಪ್ಯಾಶನೇಟ್ ನಿರ್ದೇಶಕರಾಗಿದ್ದು, ರಿವರ್ಸ್ ಸ್ಕ್ರೀನ್ ಪ್ಲೇ ಮೆಥೆಡ್‌ನಲ್ಲಿ ಚಿತ್ರ ಮಾಡಿದ್ದಾರೆ. ಸಸ್ಪೆನ್ಸ್ ಚಿತ್ರದ ಕೊನೆಯವರೆಗೂ ಗಟ್ಟಿಯಾಗಿ ನಿಲ್ಲಲಿದೆ. ಹಾಗೂ ತಮ್ಮ ತಾಯಿ ಪೂರ್ಣಿಮಾ ಅವರು ಸದಾ ನನ್ನೊಂದಿಗಿದ್ದು ಸಪೋರ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಚಿತ್ರದಲ್ಲಿ ಅರವಿಂದ್‌ ರಾವ್, ರಾಜೇಶ್ ನಟರಂಗ, ಕೃಷ್ಣ ಹೆಬ್ಬಾಳೆ, ಬಲರಾಜವಾಡಿ, ರಕ್ಷಾ ಉಮೇಶ್, ಸೂರಜ್ (ಕಾಮಿಡಿ ಕಿಲಾಡಿ), ಮೈತ್ರಿ ಜಗ್ಗಿ ಇನ್ನಿತರರು ಅಭಿನಯಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಧನ್ಯ ಅವರ ತಾಯಿ ಪೂರ್ಣಿಮಾ ರಾಮ್ ಕುಮಾರ್, ಎಚ್.ಬಿ.ಮಂಜಪ್ಪ, ಡಿ.ಬಸವರಾಜ್, ದಿನೇಶ್ ಶೆಟ್ಟಿ, ಗಿರೀಶ್ ಇತರರು ಇದ್ದರು.

ಶಾಮನೂರು ನಿವಾಸಕ್ಕೆ ವರನಟನ ಪುತ್ರಿ ಪೂರ್ಣಿಮಾ

ದಾವಣಗೆರೆ: ವರನಟ ಡಾ.ರಾಜಕುಮಾರಿ ಪುತ್ರಿ ಪೂರ್ಣಿಮಾ ರಾಮಕುಮಾರ ಹಾಗೂ ಮೊಮ್ಮಗಳು ಧನ್ಯ ರಾಮಕುಮಾರ ಹಾಗೂ ನಟ ಸೂರಜ್ ರೇವಣ್ಣ ನಗರದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ನಿವಾಸ ಶಿವ ಪಾರ್ವತಿಗೆ ಶನಿವಾರ ಭೇಟಿ ನೀಡಿದ್ದ ವೇಳೆ ಎಸ್ಸೆಸ್ ಕೇರ್ ಟ್ರಸ್ಟ್‌ನ ಡಾ.ಪ್ರಭಾ ಮಲ್ಲಿಕಾರ್ಜುನ ಆತ್ಮೀಯವಾಗಿ ಸ್ವಾಗತಿಸಿದರು.

ಕನ್ನಡ ಚಿತ್ರರಂಗದ ಮೇರು ಪರ್ವತ ಡಾ.ರಾಜಕುಮಾರರ ಪುತ್ರಿ ಪೂರ್ಣಿಮಾ ರಾಮಕುಮಾರ ಹಾಗೂ ಮೊಮ್ಮಗಳು ಧನ್ಯಾ ರಾಮಕುಮಾರ ಬಂದಿದ್ದಾರೆಂದು ಕುತೂಹಲದಿಂದ ವೀಕ್ಷಿಸುತ್ತಿದ್ದ ತಮ್ಮ ಮನೆಯ ಕೆಲಸದ ಮಹಿಳೆಯರನ್ನೆಲ್ಲಾ ಕರೆಸಿದ ಡಾ.ಪ್ರಭಾ ಮಲ್ಲಿಕಾರ್ಜುನ ಎಲ್ಲರಿಗೂ ಪರಿಚಯ ಮಾಡಿಸಿಕೊಟ್ಟರು. ಅಲ್ಲದೇ, ಪೂರ್ಣಿಮಾ, ಧನ್ಯಾರ ಜೊತೆಗೆ ನಿಂತು ತಮ್ಮ ಮನೆಯ ಕೆಲಸದವರೊಂದಿಗೆ ಗುಂಪು ಫೋಟೋ ತೆಗೆಸುವ ಮೂಲಕ ತಮ್ಮ ಸಿಬ್ಬಂದಿ ಮೊಗದಲ್ಲಿ ಮಂದಹಾಸ ಮೂಡಿಸಿದರು.ಸುಮಾರು ಹೊತ್ತು ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಪೂರ್ಣಿಮಾ ರಾಮಕುಮಾರ, ಧನ್ಯಾ ರಾಮಕುಮಾರರ ಜೊತೆಗೆ ಚರ್ಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1.7 ಕೋಟಿಯ ಮೊಬೈಲ್‌ಗಳುಮರಳಿ ಮಾಲಿಕರಿಗೆ ಹಸ್ತಾಂತರ
ಕೆಲಸಕ್ಕಿದ್ದ ಉದ್ಯಮಿ ಮನೆಯಲ್ಲಿ43 ಲಕ್ಷದ ಆಭರಣ ಕದ್ದ ದಂಪತಿ