ಕನ್ನಡಪ್ರಭ ವಾರ್ತೆ ಉಡುಪಿ
ಅವರು ಗುರುವಾರ ನಗರದ ಪುರಭವನದಲ್ಲಿ ಡಾ. ಪಾದೂರು ಗುರುರಾಜ ಭಟ್ ಜನ್ಮ ಶತಾಬ್ಧಿ ಪ್ರಯುಕ್ತ ಡಾ.ಪಾದೂರು ಗುರುರಾಜ ಭಟ್ ಸಂಸ್ಮರಣಾ ಟ್ರಸ್ಟ್ ವತಿಯಿಂದ ಕರ್ನಾಟಕದ ಖ್ಯಾತ ಇತಿಹಾಸಕಾರರ ಸಮಾವೇಶದಲ್ಲಿ ಪಾದೂರು ಗುರುರಾಜ ಭಟ್ ಜನ್ಮ ಶತಾಬ್ಧಿ ಪ್ರಶಸ್ತಿ - 2025 ಸ್ವೀಕರಿಸಿ ಮಾತನಾಡಿದರು.
ಹಿಂದೆ ಆಗಿರುವ ತಪ್ಪುಗಳಿಗೆ ಇಂದಿನ ಜನಾಂಗ ಹೊಣೆ ಅಲ್ಲ, ಆದ್ದರಿಂದ ಹಿರಿಯರು ಮಾಡಿದ ತಪ್ಪಿಗೆ ಇಂದಿನವರು ಅವಮಾನಿತರಾಗಬೇಕಾಗಿಲ್ಲ ಎಂದ ಅವರು, ಚರಿತ್ರೆಯ ಸತ್ಯ ಮತ್ತು ಸುಳ್ಳುಗಳನ್ನು ತಿಳಿದುಕೊಳ್ಳುವ ಹಕ್ಕು ಇಂದಿನ ಜನಾಂಗಕ್ಕೆ ಇದೆ ಎಂದರು.ಟಿಪ್ಪು ಸುಲ್ತಾನ್‌ಗೆ ನಮ್ಮ ಚರಿತ್ರೆಯಲ್ಲಿ ಉನ್ನತ ಸ್ಥಾನ ಇದೆ ನಿಜ, ಆದರೆ ಸರ್ಕಾರವೇ ಆತನ ಜಯಂತಿಯನ್ನು ಆಚರಿಸಿದರೆ, ಆತನಿಂದ ದೌರ್ಜನ್ಯಕ್ಕೊಳಗಾದ ಮಂಗಳೂರಿನ ಕ್ರೈಸ್ತರು, ಕೊಡಗಿನ ಜನರು, ಶ್ರೀರಂಗಪಟ್ಟಣದ ಅಯ್ಯಂಗಾರರಿಗೆ ಹೇಗನ್ನಿಸಬೇಡ ಎಂದವರು ಪ್ರಶ್ನಿಸಿದರು.
ಪಾದೂರು ಅವರ ಶಿಷ್ಯ ಡಾ. ಮಾಲತಿ ಮೂರ್ತಿ, ಪಾದೂರರ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯ ಪುರಾತತ್ವ ತಜ್ಞ ಕೆ.ಕೆ. ಮುಹಮ್ಮದ್, ದೇವಾಲಯಗಳ ತಜ್ಞ ಸುರೇಂದ್ರನಾಥ ಬೊಪ್ಪರಾಜು ಉಪಸ್ಥಿತರಿದ್ದರು. ಪ್ರೊ. ರವಿಶಂಕರ ಅವರು ಕಾರ್ಯಕ್ರಮ ನಿರೂಪಿಸಿದರು.----------------
ಬ್ರಿಟಿಷರು ಬರುವ ಮೊದಲೇ ಭಾರತವಿತ್ತು...ಬ್ರಿಟಿಷರು ಬರುವ ಮೊದಲು ಭಾರತವೇ ಇರಲಿಲ್ಲ, ಭಾರತ ಬ್ರಿಟಿಷರ ಕೊಡುಗೆ ಎನ್ನುವುದು ಸುಳ್ಳು. ವಿಷ್ಣು ಪುರಾಣದಲ್ಲಿ ಭರತ ಖಂಡ, ಭಾರತ ವರ್ಷ ಎಂದು ದೇಶದ ಗಡಿಗಳನ್ನು ಹೇಳಲಾಗಿದೆ. ಭಾರತ ಚರಿತ್ರೆ ಎಂದರೆ ಅದು ನಿರಂತರ ಸೋಲುಗಳ ಕಥನ ಎಂಬುದು ಸರಿಯಲ್ಲ, ಭಾರತದ ಅನೇಕ ರಾಜರು ವಿರೋಚಿತ ಗೆಲವುಗಳನ್ನು ಸಾಧಿಸಿದ್ದಾರೆ. ಚರಿತ್ರೆಯ ಕೆಲವು ಘಟನೆಗಳು ಸಾಮರಸ್ಯಕ್ಕೆ ಅಡ್ಡಿಯಾಗುತ್ತವೆ ಎಂಬುದು ಸರಿಯಲ್ಲ, ಇದ್ದದ್ದನ್ನು ಇದ್ದ ಹಾಗೇ ಹೇಳುವುದೇ ಚರಿತ್ರೆ ಎಂದು ವಿಕ್ರಮ್ ಸಂಪತ್ ಹೇಳಿದರು.