ವಿದ್ಯಾರ್ಥಿಗಳಾದ ನೀವು ಶಿಕ್ಷಕರು, ಪಾಲಕ-ಪೋಷಕ ವರ್ಗದವರ ಮಾರ್ಗದರ್ಶನಪಡೆಯಿರಿ. ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ.
ಕನ್ನಡಪ್ರಭ ವಾರ್ತೆ ಕಲಬುರಗಿ
ನಮ್ಮ ಭಾಗದವಿದ್ಯಾರ್ಥಿಗಳು ನಮ್ಮಿಂದ ಅಸಾಧ್ಯವೆಂಬ ತಮ್ಮಲ್ಲಿನ ಕೀಳರಿಮೆ ತೊರೆದು ನಿರಂತರವಾದ ಪ್ರಯತ್ನ ಮಾಡಬೇಕು. ಇಂದು ತೀವ್ರ ಸ್ಪರ್ಧಾತ್ಮಕತೆಯನ್ನುಎದುರಿಸಬೇಕಾಗಿರುವುದರಿಂದ ನಿರಂತರವಾದ ಅಧ್ಯಯನ ಮಾಡಿದರೆ, ಉನ್ನತವಾದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆಎಂದು ಸಿಬಿಸಿ ಉಪಾಧ್ಯಕ್ಷರ ವೀಂದ್ರಕುಮಾರ ವೈ.ಕೋಳಕೂರ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾಲೇಜಿನ ವಾರ್ಷಿಕೋತ್ಸವ, ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಪ್ರತಿಭಾ ಪುರಸ್ಕಾರಸ ಮಾರಂಭವನ್ನುಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚಾರ್ಯ ಬಸವರಾಜ ಬಿರಾಜಾದಾರ ಮಾತನಾಡಿ, ವಿದ್ಯಾರ್ಥಿಗಳಾದ ನೀವು ಶಿಕ್ಷಕರು, ಪಾಲಕ-ಪೋಷಕ ವರ್ಗದವರ ಮಾರ್ಗದರ್ಶನಪಡೆಯಿರಿ. ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರ ವೀಂದ್ರಕುಮಾರ ಬಟಗೇರಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರೀಶೈಲ್ ಮತ್ತು ಮುಸ್ಕಾನ್ ಅವರಿಗೆ ಸತ್ಕರಿಸಲಾಯಿತು. ಎನ್.ಎಸ್.ಎಸ್. ಅಧಿಕಾರಿ ಎಚ್.ಬಿ. ಪಾಟೀಲ ಮಾತನಾಡಿ, ವಾರ್ಷಿಕ ವರದಿ ಮಂಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.