ಕನ್ನಡಪ್ರಭ ವಾರ್ತೆ ಬೆಂಗಳೂರು
ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಕೆನಡಾದ ಟೊರಾಂಟೋದಲ್ಲಿ ನೆಲೆಸಿರುವ ಸಬುಜ್ ಪಾಲ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಪೀಠ, ಪತ್ನಿ ನಿರ್ದಿಷ್ಟ ಆರೋಪ ಮಾಡಿದ್ದಾರೆ. ಗೃಹ ಹಿಂಸೆ ತಡೆ ಕಾಯ್ದೆ, ನೊಂದ ಮಹಿಳೆಯರ ರಕ್ಷಣೆಗೆ ಜಾರಿಗೆ ತಂದಿರುವ ಕಲ್ಯಾಣ ಶಾಸನ. ಪತ್ನಿ ಮೇಲೆ ದೌರ್ಜನ್ಯ ನಡೆದಿದೆಯೇ ಅಥವಾ ಇಲ್ಲವೇ ಎಂಬುದು ಸಾಕ್ಷ್ಯಾಧಾರಗಳ ಮೂಲಕ ವಿಚಾರಣಾ ನ್ಯಾಯಾಲಯದಲ್ಲೇ ವಿಚಾರಣೆ ನಡೆದು ನಿರ್ಧಾರವಾಗಬೇಕಾದ ಸಂಗತಿ ಎಂದು ಸ್ಪಷ್ಟಪಡಿಸಿದೆ.
ಒಂದು ವರ್ಷ ನಾಲ್ಕುತಿಂಗಳ ಕಾಲ ತಡವಾಗಿ ಪತ್ನಿ ದೂರು ದಾಖಲಿಸಿದ್ದಾರೆ ಎಂಬ ಪತಿಯ ವಾದವನ್ನು ಒಪ್ಪದ ಪೀಠ, ಗೃಹ ಹಿಂಸೆ ತಡೆ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳು ಅಪರಾಧ ಪ್ರಕ್ರಿಯಾ ಸಂಹಿತೆ-1973 (ಸಿಆರ್‌ಪಿಸಿ) ಸೆಕ್ಷನ್ 2(ಡಿ) ಅಡಿಯ ದಾಖಲಾದ ಕ್ರಿಮಿನಲ್ ದೂರುಗಳಲ್ಲ. ಹೀಗಾಗಿ ಇಲ್ಲಿ ಕಾಲಮಿತಿಯ ಪ್ರಶ್ನೆ ಕೇವಲ ಕಾನೂನಿಗೆ ಮಾತ್ರ ಸೀಮಿತವಾಗಿರದೆ, ಘಟನೆಗಳ ಸತ್ಯಾಸತ್ಯತೆಗೆ ಸಂಬಂಧಿಸಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೈಕೋರ್ಟ್ ತನಗಿರುವ ಅಸಾಧಾರಣ ಅಧಿಕಾರ ಬಳಸಿ ಪತಿಯ ವಿರುದ್ಧದ ವಿಚಾರಣೆಯನ್ನು ಆರಂಭಿಕ ಹಂತದಲ್ಲೇ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.ಪ್ರಕರಣದ ವಿವರ:
ಈ ವಿಷಯ ತಿಳಿದು ಭಾರತಕ್ಕೆ ಬಂದು, ಪತ್ನಿಯನ್ನು ಕರೆದುಕೊಂಡು ಹೋಗುವುದಾಗಿ ಪತಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಭರವಸೆ ನೀಡಿ ಆ ಕುರಿತು ಆದೇಶ ಪಡೆದಿದ್ದರು. ಅದರ ಪ್ರತಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿ, ಪತ್ನಿಯ ಅರ್ಜಿ ವಜಾಗೊಳಿಸಲು ಕೋರಿದ್ದರು. ಆ ಮನವಿ ಹಾಗೂ ಪತ್ನಿ ಅರ್ಜಿಯಲ್ಲಿನ ಪ್ರತಿವಾದಿ ಪಟ್ಟಿಯಿಂದ ತನ್ನ ತಾಯಿ ಮತ್ತು ತಂದೆಯನ್ನು ಕೈಬಿಡಲು ಕೋರಿದ್ದ ಕೋರಿಕೆಯನ್ನು ತಿರಸ್ಕರಿಸಿತ್ತು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿ, ತನಗೆ ಮತ್ತು ಕುಟುಂಬದವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪತ್ನಿ ಪ್ರಕರಣ ದಾಖಲಿಸಿದ್ದು, ಅದನ್ನು ರದ್ದುಪಡಿಸುವಂತೆ ಕೋರಿದ್ದರು.