ಘಟನೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಮಾಜದ ಮುಖಂಡರ ಮೇಲೆಯೇ ಪ್ರಕರಣ ದಾಖಲಿಸಿರುವುದು ವಿಪರ್ಯಾಸವಾಗಿದ್ದು, ಇದಕ್ಕೆ ಯಾವ ರೀತಿಯ ಒತ್ತಡಗಳು ಕಾರಣವೆಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು. ನಿಜವಾದ ಆರೋಪಿಗಳನ್ನು ಬಿಟ್ಟು, ನ್ಯಾಯಕ್ಕಾಗಿ ಹೋರಾಡಿದವರನ್ನೇ ಗುರಿಯಾಗಿಸಿರುವುದು ಕಾನೂನು ವ್ಯವಸ್ಥೆಯ ಮೇಲಿನ ವಿಶ್ವಾಸ ಕುಗ್ಗಿಸುವಂತಾಗಿದೆ ಎಂದು ಕಿಡಿಕಾರಿದರು. ಈ ಸಂಬಂಧ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಮಾಜದ ಪ್ರತಿಭಟನೆಯನ್ನು “ದೊಂಬರಾಟ” ಎಂದು ಕರೆದಿರುವುದನ್ನು ತೀವ್ರವಾಗಿ ಖಂಡಿಸಿದ ಅವರು ಕೂಡಲೇ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ ಇತ್ತೀಚಿಗೆ ನಡೆದ ಗಲಾಟೆ ಹಾಗೂ ನಂತರದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಹಿಂದೂ ಮುಖಂಡ ಟಿ.ವಿ. ಅರುಣ್ ಕುಮಾರ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯವು ಕ್ರಿಮಿನಲ್ ಪಿಟೀಷನ್ ತಡೆ ನೀಡಿರುವುದು “ಸತ್ಯಕ್ಕೆ ಸಂದ ಜಯ” ಎಂದು ಹಿಂದೂ ಮಹಾಸಂಗಮ ಆಯೋಜನಾ ಸಮಿತಿ ಘೋಷಿಸಿದೆ.ನಗರದ ವಿ.ಜೆ.ಆರ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಕೀಲರಾದ ವಿವೇಕ್ ಮಾತನಾಡಿ, ಕಳೆದ ತಿಂಗಳು ಬಿ. ಎಚ್. ರಸ್ತೆ ಟ್ರೆಂಡ್ಸ್ ಮತ್ತು ಎಪಿಎಂಸಿ ಗೇಟ್ ನಡುವಿನ ಪ್ರದೇಶದಲ್ಲಿ ಸೂಫಿಯನ್ ಸಮೀವುಲ್ಲಾ ಹಾಗೂ ಆತನ ಸಹಚರರು ನಡೆಸಿದ ಗೂಂಡಾಗಿರಿ, ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಉಲ್ಲೇಖಿಸಿದರು. ದಿನದ ಹೊತ್ತಲ್ಲೇ ನಡೆದ ಈ ಘಟನೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದುಕೊಟ್ಟಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ತೋರಿದ ಪೊಲೀಸ್ ಇಲಾಖೆ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಘಟನೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಮಾಜದ ಮುಖಂಡರ ಮೇಲೆಯೇ ಪ್ರಕರಣ ದಾಖಲಿಸಿರುವುದು ವಿಪರ್ಯಾಸವಾಗಿದ್ದು, ಇದಕ್ಕೆ ಯಾವ ರೀತಿಯ ಒತ್ತಡಗಳು ಕಾರಣವೆಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು. ನಿಜವಾದ ಆರೋಪಿಗಳನ್ನು ಬಿಟ್ಟು, ನ್ಯಾಯಕ್ಕಾಗಿ ಹೋರಾಡಿದವರನ್ನೇ ಗುರಿಯಾಗಿಸಿರುವುದು ಕಾನೂನು ವ್ಯವಸ್ಥೆಯ ಮೇಲಿನ ವಿಶ್ವಾಸ ಕುಗ್ಗಿಸುವಂತಾಗಿದೆ ಎಂದು ಕಿಡಿಕಾರಿದರು.ಈ ಸಂಬಂಧ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಮಾಜದ ಪ್ರತಿಭಟನೆಯನ್ನು “ದೊಂಬರಾಟ” ಎಂದು ಕರೆದಿರುವುದನ್ನು ತೀವ್ರವಾಗಿ ಖಂಡಿಸಿದ ಅವರು ಕೂಡಲೇ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು. 2012ರಲ್ಲಿ ನಡೆದ ಗಣಪತಿ ಗಲಾಟೆಯನ್ನು “ಸಣ್ಣ ಘಟನೆ” ಎಂದು ಹೇಳಿರುವುದನ್ನೂ ವಿರೋಧಿಸಿ, ಆ ಘಟನೆಯಿಂದ ನಗರದ ಪ್ರಸಿದ್ಧ ಉತ್ಸವದ ಗೌರವ ಕುಗ್ಗಿದ ಸಂಗತಿಯನ್ನು ಮರೆಯಬಾರದು ಎಂದು ಟೀಕಿಸಿದರು.2012ರ ಗಣಪತಿ ಗಲಾಟೆಯಲ್ಲಿ ನೂರಾರು ಮಂದಿ ದೀರ್ಘಕಾಲ ನ್ಯಾಯಾಲಯದ ಸುತ್ತಾಟಕ್ಕೆ ಒಳಗಾದ ವಿಚಾರವನ್ನು ಉಲ್ಲೇಖಿಸಿ, ಆ ಸಂದರ್ಭದಲ್ಲಿ ರಾಜಕೀಯ ಒತ್ತಡಗಳು ಕೆಲಸ ಮಾಡಿದ್ದವೆಯೇ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು. ಆ ಸಂದರ್ಭದಲ್ಲಿ ಗಣಪತಿ ಮಂಡಳಿಯ ಅಧ್ಯಕ್ಷರಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮುಖಂಡ ಕೃಷ್ಣ ಹುಳಿಯಾರು ರಸ್ತೆಯಲ್ಲಿ ಹಿಂದೂ ಮೆರವಣಿಗೆಗೆ ಅವಕಾಶ ನೀಡದಿರುವ ವಿಚಾರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದು ಸಂವಿಧಾನದ ಸಮಾನ ಹಕ್ಕುಗಳ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಎಲ್ಲಾ ಮೆರವಣಿಗೆಗಳಿಗೆ ಸಮಾನ ಅವಕಾಶ ಕಲ್ಪಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.ವಕೀಲರಾದ ಶಿವರಾಜ್ ಕೆಂಪುಸಾಗರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅರಸೀಕೆರೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆಯ ವೈಫಲ್ಯದಿಂದ ಪುಂಡಾಟಿಕೆ ಹೆಚ್ಚಾಗಿದೆ ಎಂದು ಆರೋಪಿಸಿದರು.ಕಾಲೇಜುಗಳ ಸುತ್ತ ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳಲ್ಲಿ ಸಂಚರಿಸುವ ಯುವಕರಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಿಶೇಷವಾಗಿ ಯುವತಿಯರ ಮೇಲೆ ಪ್ರಭಾವ ಬೀರುವ ಘಟನೆಗಳು ಹೆಚ್ಚುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದರು. ಇದನ್ನು ತಕ್ಷಣ ನಿಯಂತ್ರಿಸದಿದ್ದರೆ ಮತ್ತೊಮ್ಮೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು. ಇನ್ನೂ, ಹಿಂದೂ ಮಹಾಸಂಗಮ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ನ್ಯಾಯಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿರುವುದನ್ನೂ ಉಲ್ಲೇಖಿಸಿದ ಅವರು, ಸಮಾಜದ ಧಾರ್ಮಿಕ ಕಾರ್ಯಕ್ರಮಗಳಿಗೂ ಅಡ್ಡಿಗಳು ಎದುರಾಗುತ್ತಿರುವುದು ದುರಂತಕರ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಜಿ.ವಿ.ಟಿ ಬಸವರಾಜ್, ಶಿವನಂಜೇಗೌಡ, ಹಿರಿಯ ಮುಖಂಡರಾದ ನವಲಗುಂದ್, ಶೇಖರ್, ಜಯಶ್ರೀ , ಗಿರೀಶ್. ಹರ್ಷವರ್ಧನ್ ಪುರುಷೋತ್ತಮ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.