ಧಾರವಾಡ:
ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದ ಸಭಾಂಗಣದಲ್ಲಿ ಗುರುವಾರ ಜರುಗಿದ ಮುದ್ರಣ ಮಾಧ್ಯಮ ಕುರಿತ ಕಾರ್ಯಾಗಾರದಲ್ಲಿ ಪತ್ರಿಕಾ ಬರವಣಿಗೆ ಕುರಿತು ಮಾತನಾಡಿದ ಅವರು, ಪತ್ರಕರ್ತನ ಸುದ್ದಿಯು ವಿಶ್ವಾಸಾರ್ಹತೆಯಿಂದ ಕೂಡಿರಬೇಕು. ನೇರ, ದಿಟ್ಟ ಹಾಗೂ ಸ್ಪಷ್ಟತೆಯಿಂದ ಕೂಡಿದ ಸುದ್ದಿಗೆ ಹೆಚ್ಚು ಮೌಲ್ಯವಿದೆ. ವಿದ್ಯಾರ್ಥಿಗಳು ಸುಂದರ ಭಾಷೆ ಮತ್ತು ಸಂಕ್ಷಿಪ್ತ ವಾಕ್ಯರಚನೆಯಿಂದ ಸುದ್ದಿ ಕಟ್ಟಿಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಮಾತೃಭಾಷೆಯ ಮಹತ್ವದ ಕುರಿತು ವಿವರಿಸಿದ ಅವರು, ಒಂದು ಉತ್ತಮ ವರದಿಗೆ ವಿಶೇಷ ಅಂಕಣ, ಅಗ್ರ ಲೇಖನ, ಕಥೆ, ಕಾದಂಬರಿ ಹಾಗೂ ಸಿನಿಮಾವಾಗಿ ಪರಿವರ್ತನೆ ಹೊಂದುವ ಶಕ್ತಿಯಿದೆ. ಯಶಸ್ವಿ ವರದಿಗಾರನಾಗಲು ನಿಷ್ಪಕ್ಷಪಾತ, ನಿಷ್ಠುರ ಬರವಣಿಗೆ ಅತೀ ಅವಶ್ಯ. ಹೃದಯಸ್ಪರ್ಶಿ ಶಬ್ಧಗಳ ಬಳಕೆ ಅಗತ್ಯ ಎಂದು ಹೇಳಿದರು.ಪತ್ರಿಕಾ ಬರವಣಿಗೆಯಲ್ಲಿ ಯಥಾಸ್ಥಿತಿ ಮತ್ತು ವಾಸ್ತವಿಕತೆ ಅಗತ್ಯ. ಸುದ್ದಿಯ ಖಚಿತತೆ ಪ್ರಮುಖವಾಗಿದ್ದು, ಊಹೆಗಳಿಗೆ ಅವಕಾಶ ಇರುವುದಿಲ್ಲ. ಪತ್ರಕರ್ತನ ಭಾಷೆ ಸುಂದರವಾಗಿರಬೇಕು ಎಂದ ಅವರು, ಸಾಹಿತಿಗಳ ಬರವಣಿಗೆ ಜನರಿಗೆ ತಲುಪಿಸುವಲ್ಲಿ ಪತ್ರಿಕೋದ್ಯಮದ ಪಾತ್ರ ಅನನ್ಯ. ಆಧಾರ ರಹಿತ ಸುದ್ದಿಗಳ ಪ್ರಸಾರಕ್ಕೆ ಇಲ್ಲಿ ಅವಕಾಶವಿಲ್ಲ. ದೃಢೀಕರಿಸಿದ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಹೇಳಿದರು.
ಈ ವೇಳೆ ವಿಭಾಗದ ಮುಖ್ಯಸ್ಥ ಪ್ರೊ. ಜೆ.ಎಂ. ಚಂದುನವರ ಅಧ್ಯಕ್ಷತೆ ವಹಿಸಿದ್ದರು. ಶೈನಾಜ್ ನಿರೂಪಿಸಿದರು.