ಮೈತ್ರಿ ಅಭ್ಯರ್ಥಿಗಳ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತೆ ಎಂದ ಸಚಿವ ಕ್ರಿಶನ್ ಪಾಲ್

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಮುಂಬರುವ ಲೋಕಾಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ೨೮ ಸೀಟ್ ಗೆಲುವ ವಿಶ್ವಾಸ ವ್ಯಕ್ತಪಡಿಸಿದ ಕೇಂದ್ರ ಸಚಿವ ಕ್ರಿಶನ್ ಪಾಲ್, ಕೇಂದ್ರ ಹೈಕಮಾಂಡ್ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಏನು ಅನ್ನೋದರ ಬಗ್ಗೆ ತೀರ್ಮಾನ ಮಾಡುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ವಿಚಾರ ದೇಶದಲ್ಲಿ ಮೋದಿಯವರ ಗ್ಯಾರೆಂಟಿ ಬಗ್ಗೆ ವಿಶ್ವಾಸವಿದೆ. ಬೇರೆ ಗ್ಯಾರೆಂಟಿಗಳ ಬಗ್ಗೆ ವಿಶ್ವಾಸ ಇಲ್ಲ. ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರ ಇಲ್ಲಿ ಯಾವುದೇ ಭಿನ್ನಾಭಿಪ್ರಾಗಳಿಲ್ಲ ಎಲ್ಲರೂ ಒಂದಾಗಿ ಹೋಗ್ತಾರೆ ಮತ್ತೆ ಮೋದಿಯವರಿಗೆ ಅಧಿಕಾರ ಕೊಡೋ ನಿರ್ಣಯ ಮಾಡಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜಕೀಯ ಪರಿಸ್ಥಿತಿಯಲ್ಲಿ ಶಾಶ್ವತ ಶತ್ರುಗಳು ಮತ್ತು ಶಾಶ್ವತ ಮಿತ್ರರು ಯಾರೂ ಇಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಮೈತ್ರಿ ಆಗುತ್ತದೆ. ಮುಂದೆ ನಡೆಯುವ ಎಂಪಿ ಚುನಾವಣೆಯ ಅಭ್ಯರ್ಥಿಗಳನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಕೇಂದ್ರ ವಿದ್ಯುತ್ ಮತ್ತು ಭಾರಿ ಕೈಗಾರಿಕಾ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಹೇಳುವ ಮೂಲಕ ಹಾಸನ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎಂಬ ಘೋಷಣೆಗೆ ಅಡ್ಡಗಾಲು ಬಿದ್ದಂತಾಗಿದೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆ ಹಾಸನಕ್ಕೆ ಬಂದಿದ್ದು, ಡಿ.೧೫ ರಿಂದ ಪ್ರಧಾನಿ ಮೋದೀಜಿಯವರು ಭಾರತ್ ಸಂಕಲ್ಪ ಯಾತ್ರಾ ಹಮ್ಮಿಕೊಂಡಿದ್ದಾರೆ ಎಂದರು.

ಮೋದೀಜಿಯವರ ಗ್ಯಾರೆಂಟಿಯ ಗಾಡಿ ದೇಶದ ಮೂಲೆ ಮೂಲೆಗೆ ಸಂಚರಿಸಿ ೨೦೨೪ ಜನವರಿ ೨೫ರವರೆಗೂ ಮುಂದುವರಿಯಲಿದೆ. ಈ ಯಾತ್ರೆಯ ಸದುದ್ದೇಶ ಎಂದ್ರೆ ಮೋದಿ ಸರ್ಕಾರದ ಜನ ಕಲ್ಯಾಣ ಯೋಜನೆ ದೇಶದ ಪ್ರತಿ ಗ್ರಾಮಗಳಿಗೂ ತಲುಪಿಸುವುದು. ದೇಶದ ಕಟ್ಟ ಕಡೆಯೇ ವ್ತಕಿಗೂ ಈ ಯೋಜನೆ ತಲುಪಬೇಕು ಅನ್ನೋದು ಕೇಂದ್ರ ಸರ್ಕಾರದ ಉದ್ದೇಶ ಎಂದರು. ಕೇಂದ್ರದ ಹಲವು ಜನಪ್ರಿಯ ಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಹಿಂದಿನ ಒಂಭತ್ತು ವರ್ಷಗಳಲ್ಲಿ ದೇಶ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸದೃಢವಾಗಿದೆ. ಭಾರತ ಆರ್ಥಿಕ ವ್ಯವಸ್ಥೆ ಇದೀಗಾ ವಿಶ್ವದ ಟಾಪ್ ಐದು ರಾಷ್ಟ್ರಗಳ ಪಟ್ಟಿಯಲ್ಲಿದೆ. ಇನ್ನೂ ಮೂರು ನಾಲ್ಕು ವರ್ಷಗಳಲ್ಲಿ ವಿಶ್ವದ ಟಾಪ್ ಮೂರರ ಪಟ್ಟಿಗೇರೊದರಲ್ಲಿ ಅನುಮಾನವಿಲ್ಲ. ಆರ್ಥಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಪ್ರಗತಿ ಸಾಧಿಸುತ್ತಿದೆ. ಮೂರನೇಯ ಬಾರಿಯು ಮತ್ತೆ ದೇಶದ ಪ್ರಧಾನಿ ಮೋದಿಯವರು ಆಗಬೇಕು ಅನ್ನೋ ನಿಶ್ಚಯ ದೇಶದ ಜನರು ಮಾಡಿದ್ದಾರೆ ಎಂದು ಹೇಳಿದರು.

ಸಂಸತ್ ಮೇಲೆ ದಾಳಿ ಪ್ರಕರಣದ ಹಿಂದೆ ಯಾರಿದ್ದಾರೆಂಬ ತನಿಖೆ ನಡೆಯುತ್ತಿದೆ. ಇದು ರಾಜಕೀಯ ಚರ್ಚಾ ವಿಷಯ ಆಗಬಾರದು. ಲೋಕಸಭಾ ಅಧ್ಯಕ್ಷರು ಕಮಿಟಿ ಮಾಡಿದ್ದು, ನಿಷ್ಪಕ್ಷಪಾತ ತನಿಖೆಯಾಗುತ್ತದೆ. ತಪ್ಪಿತಸ್ಥರು ಯಾರು ಅನ್ನೋದು ತಿಳಿಯುತ್ತೆ ಸಂಸತ್ ಗೆ ಇನ್ನು ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದರು.ರಾಜ್ಯದಲ್ಲಿ ೨೮ ಸ್ಥಾನಗಳಲ್ಲೂ ಗೆಲುವು: ಮುಂಬರುವ ಲೋಕಾಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ೨೮ ಸೀಟ್ ಗೆಲುವ ವಿಶ್ವಾಸ ವ್ಯಕ್ತಪಡಿಸಿದ ಕೇಂದ್ರ ಸಚಿವರು,ಕೇಂದ್ರ ಹೈಕಮಾಂಡ್ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಏನು ಅನ್ನೋದರ ಬಗ್ಗೆ ತೀರ್ಮಾನ ಮಾಡುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರೆಂಟಿ ವಿಚಾರ ದೇಶದಲ್ಲಿ ಮೋದಿಯವರ ಗ್ಯಾರೆಂಟಿ ಬಗ್ಗೆ ವಿಶ್ವಾಸವಿದೆ. ಬೇರೆ ಗ್ಯಾರೆಂಟಿಗಳ ಬಗ್ಗೆ ವಿಶ್ವಾಸ ಇಲ್ಲ. ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರ ಇಲ್ಲಿ ಯಾವುದೇ ಭಿನ್ನಾಭಿಪ್ರಾಗಳಿಲ್ಲ ಎಲ್ಲರೂ ಒಂದಾಗಿ ಹೋಗ್ತಾರೆ ಮತ್ತೆ ಮೋದಿಯವರಿಗೆ ಅಧಿಕಾರ ಕೊಡೋ ನಿರ್ಣಯ ಮಾಡಿದ್ದಾರೆ ಎಂದರು.ಯತ್ನಾಳ್ ಪಕ್ಷ ವಿರೋಧಿ ಹೇಳಿಕೆ ವಿಚಾರ ಇದು ಕೇಂದ್ರ ನಾಯಕರ ಗಮದಲ್ಲಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ. ಜೆಡಿಎಸ್ ನೊಂದಿಗೆ ಬಿಜಿಪಿಯ ಮೈತ್ರಿ ವಿಚಾರ ಯಾವಾಗಲೂ ಮೈತ್ರಿ ಮಾಡಿಕೊಂಡಾಗ ಲಾಭ ಹೆಚ್ಚು ನಷ್ಟ ಕಮ್ಮಿ. ಎರಡು ಪಕ್ಷಗಳಿಗೂ ಲಾಭ ಆಗಲಿದೆ. ಹಿಂದಿನ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿಚಾರ ಆಗಿನ ರಾಜಕೀಯ ಪರಿಸ್ಥಿತಿ ಬೇರೆ ಈಗಿನದು ಬೇರೆ ರಾಜಕಾರಣದಲ್ಲಿ ಶಾಶ್ವತ ಶತ್ರುಗಳ ಮತ್ತು ಶಾಶ್ವತ ಮಿತ್ರರು ಇಲ್ಲ. ಸಮಯ ಮತ್ತು ಪರಿಸ್ಥಿತಿಯ ಅನುಗುಣವಾಗಿ ಮೈತ್ರಿ ಆಗುತ್ತದೆ ಎಂದು ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಮೊಮ್ಮಗನೇ ಮುಂದಿನ ಎಂಪಿ ಚುನಾವಣೆಯ ಅಭ್ಯರ್ಥಿ ಎಂದು ಘೋಷಣೆ ಮಾಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್, ಶಾಸಕ ಸಿಮೆಂಟ್ ಮಂಜು, ಮಾಜಿ ಸಚಿವ ವಿಜಯಶಂಕರ್, ಜಿಲ್ಲಾ ಉಸ್ತುವಾರಿ ಸಚ್ಚಿದಾನಂದ ಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಎಸ್.ಡಿ. ಚಂದ್ರು, ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷೆ ರತ್ನಪ್ರಕಾಶ್, ಜಿಲ್ಲಾ ಮಾಧ್ಯಮ ವಕ್ತಾರ ಐನೆಟ್ ವಿಜಿಕುಮಾರ್, ಗೋಪಾಲ್, ಇತರರು ಉಪಸ್ಥಿತರಿದ್ದರು.

Share this article