ಬೆಳಕು ಚೆಲ್ಲದ ಹೈಮಾಸ್ಕ್‌ ದೀಪ, ಕತ್ತಲಲ್ಲಿ ಜನರು

KannadaprabhaNewsNetwork | Published : Feb 19, 2024 1:33 AM

ಸಾರಾಂಶ

ಪಟ್ಟಣದಲ್ಲಿರುವ ಎಲ್ಲಾ ಹೈಮಾಸ್ಕ್ ದೀಪಗಳು ಕೆಟ್ಟು ಹೋಗಿದೆ.

ಕನ್ನಡಪ್ರಭ ವಾರ್ತೆ ಯಳಂದೂರುಪಟ್ಟಣದಲ್ಲಿರುವ ಮಿನಿ ಹೈಮಾಸ್ಕ್‌ ದೀಪಗಳು ಕೆಟ್ಟು ಹೋಗಿದ್ದು, ದುರಸ್ಥಿ ಪಡಿಸಲು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ವಿಫಲವಾಗಿದೆ. ೨೦೧೬-೧೭ ನೇ ಸಾಲಿನಲ್ಲಿ ಎಸ್ಎಫ್‌ಸಿ ವಿಶೇಷ ಅನುದಾನದಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ೨೦ ಲಕ್ಷ ರು. ವೆಚ್ಚದಲ್ಲಿ ಪಟ್ಟಣದ ಪ್ರಮುಖ ಸ್ಥಳಗಳಾದ ಬಳೇಪೇಟೆ, ನಾಡಮೇಗಲಮ್ಮ ದೇವಾಲಯದ ಬಳಿ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಇತರೆ ಕಡೆ ಮಿನಿ ಹೈಮಾಸ್ಕ್‌ ದೀಪಗಳನ್ನು ಅಳವಡಿಸಿ ಅಂದಿನ ಶಾಸಕರಾಗಿದ್ದ ಎಸ್.ಜಯಣ್ಣ ಹೈಮಾಸ್ಕ್‌ ದೀಪಗಳಿಗೆ ಸಾಂಕೇತಿಕವಾಗಿ ಚಾಲನೆ ಕೊಡಿಸಲಾಗಿತ್ತು. ಆದರೆ, ಒಂದು ದಿನವೊ ಹೈಮಾಸ್ಕ್‌ ದೀಪ ರಾತ್ರಿ ಪಾಳಿಯಲ್ಲಿ ಬೆಳಕು ಕಂಡಿಲ್ಲ ಇದರಿಂದ ಲಕ್ಷಾಂತರ ರು. ಸಾರ್ವಜನಿಕರ ಹಣ ಪೋಲಾಗುತ್ತಿದೆ.

ರೋಗಿಗಳಿಗೆ ತೊಂದರೆ :

ಪಟ್ಟಣದಲ್ಲಿರುವ ಎಲ್ಲಾ ಹೈಮಾಸ್ಕ್ ದೀಪಗಳು ಕೆಟ್ಟು ಹೋಗಿದೆ. ಹಗಲು ಮುಗಿಸಿ ಸೂರ್ಯ ಕಣ್ಮರೆಯಾಗುತ್ತಿದಂತೆ ಕತ್ತಲು ಅವರಿಸಿದರೂ ಹೈಮಾಸ್ಕ್‌ ದೀಪಗಳು ಬೆಳಕು ಚೆಲ್ಲುತ್ತಿಲ್ಲ. ಈ ಕೆಟ್ಟು ಹೋಗಿರುವ ದೀಪ ದುರಸ್ಥಿ ಪಡಿಸಲು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು ಯಾರು ಕೊಡಾ ದೀಪಗಳ ದುರಸ್ಥಿ ಬಗ್ಗೆ ಕಾಳಜಿವಹಿಸದೆ ಇರುವುದು ಆಡಳಿತ ವೈಖರಿಯ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಕನ್ನಡಿಯಾಗಿದೆ. ಒಟ್ಟಿನಲ್ಲಿ ಇನ್ನಾದರೂ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿವರ್ಗ ಕೆಟ್ಟಿರುವ ಹೈಮಾಸ್ಕ್ ದೀಪ ದುರಸ್ಥಿಪಡಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ನೆರವಾಗಬೇಕಾಗಿದೆ.

ಪಟ್ಟಣದ ವ್ಯಾಪ್ತಿಯಲ್ಲಿ ಕೆಟ್ಟು ಹೋಗಿರುವ ಹೈಮಾಸ್ಕ್‌ ದೀಪಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದು ಕೂಂಡಿದ್ದು ಅವುಗಳ ದುರಸ್ಥಿ ಪಡಿಸಲು ಎಂಜಿನಿಯರ್‌ರಿಂದ ಅಂದಾಜು ಪಟ್ಟಿ ತಯಾರಿಸಿದ್ದು, ಟೆಂಡರ್ ಕರೆದು ಹೈಮಾಸ್ಕ್‌ ದೀಪಗಳನ್ನು ದುರಸ್ಥಿ ಪಡಿಸಲಾಗುವುದು.ಮಹೇಶ್ ಕುಮಾರ್, ಮುಖ್ಯಾಧಿಕಾರಿ, ಪಪಂ ಯಳಂದೂರು.

ಪಟ್ಟಣದಲ್ಲಿ ತುಂಬಾ ವರ್ಷಗಳಿಂದ ಹೈಮಾಸ್ಕ್‌ ದೀಪಗಳು ಕೆಟ್ಟು ಹೋಗಿದೆ. ಆದರೆ ಆಡಳಿತ ಯಂತ್ರ ಜನಪ್ರತಿನಿಧಿಗಳ ನಿರ್ಲಕ್ಷತೆಯಿಂದ ದೀಪ ದುರಸ್ಥಿ ಪಡಿಸುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತ ಕ್ರಮವಹಿಸಬೇಕಾಗಿದೆ.ಶ್ರೀನಿವಾಸ್‌ನಾಯಕ, ಪ.ಪಂ. ಮಾಜಿ ಸದಸ್ಯರು ಯಳಂದೂರು

Share this article