ಮುಂದಿನ ಹೋರಾಟದ ಚೈತನ್ಯಕ್ಕೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ: ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ, ಲಿಂಗಾಯತ ಉಪ ಸಮಾಜಗಳ ಕೇಂದ್ರದ ಒಬಿಸಿ ಮೀಸಲಾತಿಗೆ ಶಿಫಾರಸ್ಸು ಮಾಡಲು ಒತ್ತಾಯಿಸಿ ನ.10ರಂದು ನಗರದ ಹೊರ ವಲಯದ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮುಂಭಾಗ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಹೆದ್ದಾರಿ ತಡೆ ಹೋರಾಟ ಹಮ್ಮಿಕೊಂಡಿರುವುದಾಗಿ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10ರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡಿ, ಹೆದ್ದಾರಿ ತಡೆ ಹೋರಾಟ ಆರಂಭಿಸಲಿದ್ದು, ಕಳೆದ 3 ವರ್ಷದಿಂದಲೂ ಹೋರಾಟ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ನಮ್ಮ ಬೇಡಿಕೆ ಈಡೇರಿಸಬೇಕಿದೆ. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟಕ್ಕೂ ಸಜ್ಜಾಗಿದ್ದೇವೆ. ನ.10ರ ನಂತರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜದ ನಿಲುವು ಏನೆಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.ಬಸವನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶೆಪ್ಪನವರ್, ಅರವಿಂದ ಬೆಲ್ಲದ್ ಸೇರಿ ಅನೇಕ ನಾಯಕರು ಹೋರಾಟದಲ್ಲಿ ಭಾಗವಹಿಸುವರು.
ಎಲ್ಲಾ ತಾಲೂಕಿನಲ್ಲೂ ಜಾಗೃತಿ:
ರಾಜಕೀಯ ದೃಷ್ಟಿಯಿಂದ, ಚುನಾವಣೆ ಹಿನ್ನೆಲೆಯಲ್ಲಿ ಸಮಾಜ ಸಂಘಟನೆ ಮಾಡುತ್ತಿಲ್ಲ. ಸಮಾಜದ ಭವಿಷ್ಯವಾದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಮೀಸಲಾತಿಗಾಗಿ ಹೋರಾಟ ನಡೆದಿದೆ. ಸ್ವಾಮೀಜಿ ಕೆಲಸವೆಂದರೆ ಮನೆಗಳಿಗೆ ಹೋಗಿ ಪಾದಪೂಜೆ, ಕಾಣಿಕೆ ಪಡೆಯುವುದಲ್ಲ. ಸಮಾಜಕ್ಕಾಗಿ 718 ಕಿಮೀ ಪಾದಯಾತ್ರೆ ಕೂಡಲ ಸಂಗಮದ ಶ್ರೀ ಮಾಡಿದ್ದಾರೆ. ನಮ್ಮ ಹೋರಾಟ ಸ್ವಾರ್ಥಕ್ಕಲ್ಲ. ಪರಿಷ್ಕರಣೆ ಮಾಡಿ, ಎಲ್ಲ ಸಮುದಾಯಗಳಿಗೆ ಮೀಸಲಾತಿ ಕೊಡಬೇಕು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಕೆಲ ಸಮಾಜಗಳಿಗೆ ಶಿಫಾರಸ್ಸು ಮಾಡಿದ್ದು, ಪಂಚಮಸಾಲಿ, ಲಿಂಗಾಯತ ಉಪ ಸಮಾಜಗಳಿಗೂ ಮಾಡಲಿ ಎಂದು ಒತ್ತಾಯಿಸಿದರು.
ಅಭಿ ಕಾಟನ್ಸ್ ಮಾಲೀಕ ನ್ಯಾಮತಿ ಬಕ್ಕೇಶ್, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಅಶೋಕ ಗೋಪನಾಳ್, ಎಸ್.ಓಂಕಾರಪ್ಪ, ಮಂಜುನಾಥ ಪೈಲ್ವಾನ್, ಈಶ್ವರಪ್ಪ, ಮಾಲತೇಶ ಇತರರಿದ್ದರು....................... ಪಂಚಮಸಾಲಿ ಸಮಾಜ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕ ಪ್ರಯತ್ನ ಮಾಡದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಸಮಾಜದ ನಿಲುವು ಕಾಣಬಹುದು. 2 ಎ ಮೀಸಲಾತಿಗೆ ಕಾನೂನು ತಜ್ಞರ ಸಲಹೆ, ಸೂಚನೆ ತಡವಾದರೆ ಕೇಂದ್ರದ ಒಬಿಸಿಗಾದರೂ ಶಿಫಾರಸ್ಸು ಮಾಡಲಿ. ನಮ್ಮ ಸಮಾಜಕ್ಕಷ್ಟೇ ಎಲ್ಲಾ ಸಮಾಜಕ್ಕೂ
ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಪೀಠ, ಕೂಡಲ ಸಂಗಮ.
........... ದಲಿತ ಸಿಎಂ ಆಗಲಿ, ಆ ಸಮಾಜಕ್ಕೂ ನ್ಯಾಯ ಸಿಗಲಿದಲಿತ ಸಿಎಂ ಆಗಬೇಕು. ಆ ಸಮಾಜಕ್ಕೂ ನ್ಯಾಯ ಸಿಗಬೇಕು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ದಲಿತ ಸಿಎಂ ಕೂಗಿಗೆ ಧ್ವನಿಗೂಡಿಸಿದ್ದಾರೆ. ದಲಿತ ಸಿಎಂ ಮಾಡುವುದು ಆಯಾ ಪಕ್ಷಗಳ ನಿರ್ಧಾರಕ್ಕೆ ಬಿಟ್ಟ ವಿಚಾರ. ಆಯಾ ಸಮಾಜಕ್ಕೆ ನ್ಯಾಯ ಸಿಗಬೇಕು. ಲಿಂಗಾಯತ, ಒಕ್ಕಲಿಗರು ಹೇಗೆ ಮುಖ್ಯಮಂತ್ರಿ ಆದರೋ, ಅದೇ ರೀತಿ ದಲಿತರೂ ಮುಖ್ಯಮಂತ್ರಿ ಆಗಬೇಕು ಎಂದರು.