ರಾಷ್ಟ್ರೀಯ ನಾಟಕೋತ್ಸವದ 6 ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಪಂಡಿತಾರಾಧ್ಯ ಶ್ರೀ ಕಳವಳ
ಕನ್ನಡಪ್ರಭವಾರ್ತೆ ಹೊಸದುರ್ಗಮೌಢ್ಯಗಳನ್ನು ಸೃಷ್ಟಿ ಮಾಡುವ ಕೇಂದ್ರಗಳು ನಾಡಿನಲ್ಲಿ ಹೆಚ್ಚುತ್ತಿವೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 6 ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮನಸುಗಳ ನಡುವೆ ಸಂಘರ್ಷ ನಡೆಯುವುದು ಸಹಜ. ಆದರೆ ಅದನ್ನೇ ಬೆಳಸಿಕೊಂಡು ಹೋದರೆ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಮಂದಿರ, ಮಸೀದಿ, ಚರ್ಚಗಳಿಂದ ನೆಮ್ಮದಿ ಸಿಗಲು ಸಾಧ್ಯವಿಲ್ಲ. ನೆಮ್ಮದಿಯನ್ನು ನಮ್ಮ ಅಂತರಂಗದಲ್ಲಿಯೇ ಕಂಡುಕೊಳ್ಳಬೇಕು ಎಂದರು. ಇಂದು ಸತ್ಯವನ್ನು ಸಾಯಿಸಿ ಸುಳ್ಳನ್ನು ವಿಜೃಂಭಿಸುವ ಶಕ್ತಿ ಗಳು ಎಲ್ಲಾ ಕಡೆ ವಿಸ್ತರಿಸುತ್ತಿವೆ. ಹುಲಿಯ ಕರುಣೆ, ಗೋವಿನ ಸತ್ಯ ಎರಡು ಬೇಕು. ನಾವು ಸತ್ಯ ಬಿಟ್ಟು ಮೌಢ್ಯಗಳ ದಾರಿಯಲ್ಲಿ ಸಾಗುತ್ತಿದ್ದೇವೆ ಎಂದರು. ಸರ್ಕಾರಗಳು ಕಲಾವಿದರನ್ನು ಕಡೆ ಗಣಿಸುವುದು ಒಳ್ಳೆಯದಲ್ಲ. ಗ್ರಾಮೀಣ ಕಲಾವಿದರನ್ನು ಬೆಳೆಸದಿದ್ದರೆ ಗ್ರಾಮೀಣ ಕಲೆಗಳು ನಶಿಸಿಹೋಗುತ್ತವೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.ವೇದಿಕೆಯಲ್ಲಿ ಹೂವಿನಹಡಗಲಿಯ ಗವಿಸಿದ್ದೇಶ್ವರ ಮಠದ ಡಾ.ಹಿರೇಶಾಂತವೀರ ಸ್ವಾಮೀಜಿ, ಗುಡ್ಡದ ಅನ್ವೆರಿ ಮಠದ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಲಾವಿದರ ಸ್ಥಿತಿಗತಿ ಎಂಬ ವಿಷಯದ ಕುರಿತು ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ ಸ್ವಚ್ಛ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಲಾವಿದರ ಸ್ಥಿತಿ ಸಂಕಷ್ಟದಲ್ಲಿದೆ. ಆರ್ಕೆಸ್ಟ್ರಾ ಕಲಾವಿದರು ಕಾರ್ಯಕ್ರಮ ಕೊಟ್ಟರೆ ಲಕ್ಷ ಹಣ ಕೊಡುತ್ತಾರೆ. ಅದೇ ಗ್ರಾಮೀಣ ಜಾನಪದ ಕಲಾವಿದರು ನಗರಕ್ಕೆ ಬಂದು ಕಾರ್ಯಕ್ರಮ ಕೊಟ್ಟರೆ 15 ಸಾವಿರ ಕೊಡುತ್ತಾರೆ. ಈ ನಗರ ಹಾಗೂ ಗ್ರಾಮೀಣ ಕಲಾವಿದರ ನಡುವೆ ಇರುವ ತಾರತಮ್ಯವನ್ನು ಹೋಗಲಾಡಿಸಬೇಕು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಗ್ರಾಮೀಣ ಜಾನಪದ ಕಲಾವಿದರನ್ನು ಬೆಳೆಸಿ ಪೋಷಿಸಿ ಬೆಳಸಿದಿದ್ದರೆ ಸಮಾಜ ವಿಕೃತಿಗೆ ಹೋಗುತ್ತದೆ ಎಂದರು.ಸಂಸ್ಕೃತಿಯ ಸಂರಕ್ಷಣೆ, ಮಠಪೀಠಗಳ ಹೊಣೆ ಎಂಬ ವಿಷಯದ ಕುರಿತು ಚಿಂತಕ ಚಟ್ನಳ್ಳಿ ಮಹೇಶ್ ಮಾತನಾಡಿ, ರಾಜ್ಯದಲ್ಲಿನ ಅನೇಕ ಮಠ ಪೀಠಗಳು ಅನ್ನ ಅರಿವು ಶಿಕ್ಷಣವನ್ನು ಅಸಂಖ್ಯಾತ ಮಕ್ಕಳಿಗೆ ನೀಡುವ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿವೆ. ಇಂತಹ ಕಾರ್ಯಕ್ರಮಗಳಿಗೆ ತಂದೆ-ತಾಯಿಯರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿದಾಗ ಮಾತ್ರ ತುಂಬು ಕುಟುಂಬ, ಸುಖಿ ಕುಟುಂಬ ನಿರ್ಮಾಣ ಮಾಡಲು ಸಾಧ್ಯ ಎಂದರು.ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ ಮಾತನಾಡಿ, ಬರಗಾಲ ಮತ್ತು ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ರೈತರ ಬದುಕು ಶೋಚನಿಯವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕೊಡುವ 5 ಗಂಟೆಯ ವಿದ್ಯುತ್ ನ್ನು ನಿರಂತರವಾಗಿ ಕೊಡಬೇಕು ಎಂದು ಒತ್ತಾಯಿಸಿದರು.ವೇದಿಕೆಯಲ್ಲಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ದಾವಣಗೆರೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ದಾವಣಗೆರೆ ಜಿಪಂ ಸುರೇಶ್ ಬಿ ಇಟ್ನಾಳ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಾವಣಗೆರೆಯ ಜೆ.ಆರ್.ಷಣ್ಮುಖಪ್ಪ, ಬಸವರಾಜ್ ಉಮ್ರಾಣಿ ಮತ್ತಿತರರು ಹಾಜರಿದ್ದರು .ಇದೇ ವೇಳೆ ಶಿವನಕೆರೆ ಬಸವಲಿಂಗಪ್ಪ ವಿರಚಿತ ನಿತ್ಯಾನಂದಕ್ಕೆ ನೀತಿ-ಪ್ರೀತಿ ಎಂಬ ಕೃತಿ ಲೋಕಾರ್ಪಣೆಗೊಳಿಸಲಾಯಿತು. ನಂತರ ದಾವಣಗೆರೆ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷೆ ಕಿರುವಾಡಿ ಗಿರಿಜಮ್ಮ ಅವರನ್ನು ಅಭಿನಂದಿಸಲಾಯಿತು. ಪ್ರಾರಂಭದಲ್ಲಿ ಬೆಂಗಳೂರಿನ ನಾಟ್ಯ ವೇದ ತಂಡದವರಿಂದ ನೃತ್ಯ ರೂಪಕ ನಡೆಸಲಾಯಿತು----------------------------------ರಾಮ, ರಾವಣ ಕೃಷ್ಣ ಕಥೆಯ ಪಾತ್ರಧಾರಿಗಳು ರಾಮ, ಕೃಷ್ಣ ದೇವರಲ್ಲ ಕಥೆಯ ಪಾತ್ರಧಾರಿಗಳು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಹೇಳಿದರು.ಸಾಣೇಹಳ್ಳಿಯ ನಾಟಕೋತ್ಸವದಲ್ಲಿ ಮಾತನಾಡಿ ರಾಮಾಯಣ, ಮಹಾಭಾರತದಲ್ಲಿ ಬರುವ ರಾಮ, ರಾವಣ, ಕೃಷ್ಣರನ್ನು ದೇವರು ಎಂದು ತೋರಿಸಿಲ್ಲ. ಅವರನ್ನು ವ್ಯಕ್ತಿಗಳಾಗಿ ತೋರಿಸುವ ಮೂಲಕ ಅವರಲ್ಲಿ ಇದ್ದ ಸಂಸ್ಕಾರವನ್ನು ತೋರಿಸುವ ಕೆಲಸ ಮಾಡಲಾಗಿದೆ. ಹಾಗೆಯೇ ಪಂಡಿತಾರಾಧ್ಯ ಶ್ರೀಗಳು ರಂಗಭೂಮಿಯ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದರು.ರಾಜ್ಯದಲ್ಲಿರುವ 92 ವಿಶ್ವವಿದ್ಯಾಲಯ ಗಳಲ್ಲಿ. 34 ಸಾರ್ವಜನಿಕ ಕ್ಷೇತ್ರಕ್ಕೇ ಸೇರಿವೆ. ಉಳಿದವು ಖಾಸಗಿ ಕ್ಷೇತ್ರಕ್ಕೇ ಸೇರಿವೆ. ಶಿಕ್ಷಣ ವ್ಯವಸ್ಥೆ ಕುರಿತು ಜನರು ಕಾಳಜಿ ಹೊಂದಿದ್ದರೂ ಗುಣಮಟ್ಟ ಉತ್ತಮವಾಗಿಲ್ಲ. 2024ರ ವೇಳೆಗೆ ಸುಮಾರು 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ನೀರೀಕ್ಷೆಯಿದೆ. ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂದರು.