ಹೊಸಕೋಟೆ: 11 ದಿನದ ಬಾಣಂತಿ ಪತ್ನಿಯನ್ನು ಪೇದೆಯೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ನಡೆದಿದೆ.
ಪ್ರತಿಭಾ(23) ಕೊಲೆಯಾದ ಮಹಿಳೆ. ಚಾಮರಾಜನಗರ ಜಿಲ್ಲೆಯ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿಶೋರ್ (30) ಕೊಲೆ ಆರೋಪಿ.ಪೇದೆ ಕಿಶೋರ್ ಮೂಲತಃ ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ವೀರಾಪುರ ಗ್ರಾಮದವನು. 11 ತಿಂಗಳ ಹಿಂದಷ್ಟೇ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದ ಸುಬ್ರಹ್ಮಣಿ ಅವರ ಮಗಳು ಪ್ರತಿಭಾಳನ್ನು ಮದುವೆಯಾಗಿದ್ದ. ಇತ್ತೀಚೆಗೆ ಕಿಶೋರ್ ತಾಯಿ ವರದಕ್ಷಿಣೆ ಸರಿಯಾಗಿ ಕೊಟ್ಟಿಲ್ಲ ಎಂದು ತಕರಾರು ಮಾಡುತ್ತಿದ್ದರೆನ್ನಲಾಗಿದೆ. ಕಿಶೋರ್ ತನ್ನ ಹೆಂಡತಿ ಪ್ರತಿಭಾಳಿಗೆ ಪ್ರತಿ ದಿನ ಮಾನಸಿಕ ಹಿಂಸೆ ನೀಡುತ್ತಿದ್ದ. ಪ್ರತಿಭಾಳ ಸೀಮಂತ ಸಮಾರಂಭದಲ್ಲಿ ಕಿಶೋರ್ ಮನೆಯವರಿಗೆ ಸರಿಯಾಗಿ ಆತಿಥ್ಯ ನೀಡಿಲ್ಲ ಎಂದೂ ಕಿರುಕುಳ ನೀಡುತ್ತಿದ್ದ ಎಂದು ಪ್ರತಿಭಾಳ ತಂದೆ ಸುಬ್ರಹ್ಮಣಿ ಆರೋಪಿಸಿದ್ದಾರೆ.
ಉಸಿರುಗಟ್ಟಿಸಿ ಕೊಲೆ:ಪ್ರತಿಭಾ ಬಾಣಂತನಕ್ಕೆ ತವರಿಗೆ ಬಂದಿದ್ದಳು. ಪ್ರತಿಭಾ ಮನೆಗೆ ಬಂದಿದ್ದ ಕಿಶೋರ್ ಮನೆಯಲ್ಲಿ ರೂಮಿನ ಬಾಗಿಲು ಹಾಕಿಕೊಂಡು ತನ್ನ ಹೆಂಡತಿಯನ್ನು ತಲೆ ದಿಂಬಿನಿಂದ ಉಸಿರಗಟ್ಟಿಸಿ ಕೊಲೆ ಮಾಡಿದ್ದಾನೆ. ಪ್ರತಿಭಾ ಅವರ ತಾಯಿ ರೂಮಿನ ಬಾಗಿಲು ತೆಗೆಯಲು ಎಷ್ಟು ಕಿರುಚಾಡಿದರೂ ಬಿಟ್ಟಿಲ್ಲ. ಕೊಲೆ ಮಾಡಿದ ಬಳಿಕ ಬಾಗಿಲು ತೆಗೆದು, ನಿಮ್ಮ ಮಗಳನ್ನು ಸಾಯಿಸಿದ್ದೇನೆ ಹೋಗಿ ನೋಡಿಕೊಳ್ಳಿ ಎಂದು ಓಡಿಹೋಗಿದ್ದಾನೆ. ಇವನಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಮೃತಳ ತಾಯಿ ವೆಂಕಟಕ್ಷಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಘಟನೆ ನಂತರ ಆರೋಪಿ ಕಿಶೋರ್ ಸ್ವಂತ ಗ್ರಾಮ ವೀರಾಪುರಕ್ಕೆ ಹೋಗಿ ವಿಷ ಕುಡಿದಿದ್ದೇನೆಂದುದು ನಾಟಕವಾಡಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾನೆ. ವಿಷಯ ತಿಳಿದ ಹೊಸಕೋಟೆ ಪೊಲೀಸರು ಆತನನ್ನು ಕರೆತಂದು ಹೊಸಕೋಟೆ ಎಂವಿಜೆ ಆಸ್ಪತ್ರೆಯಲ್ಲಿ ದಾಖಲಿಸಿದ್ದು ತನಿಖೆ ಕೈಗೊಂಡಿದ್ದಾರೆ. (ಮಗ್‌ಶಾಟ್ ಪೋಟೋಸ್ ಮಾತ್ರ)ಪೋಟೋ : 7 ಹೆಚ್‌ಎಸ್‌ಕೆ 4 - ಮೃತ ಪ್ರತಿಭಾ.
ಪೋಟೋ : 7 ಹೆಚ್‌ಎಸ್‌ಕೆ 5 - ಕೊಲೆ ಆರೋಪಿ ಪೇದೆ ಕಿಶೋರ್