ಕನ್ನಡಪ್ರಭ ವಾರ್ತೆ ಹಾಸನ
ಕಂಪನಿಯಲ್ಲಿ ಸ್ಪಿನ್ನಿಂಗ್ ವಿಭಾಗದ ಕಾರ್ಮಿಕರಿಗೆ ಬೇಗನೆ ವೇತನ ಪಾವತಿಯಾಗುತ್ತಿದ್ದರೂ, ಗೈಡೆಕ್ಸ್ ಹಾಗೂ ವೀವಿಂಗ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಸಂಬಳ ಪಾವತಿ ವಿಳಂಬವಾಗುತ್ತಿದೆ. ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳನ್ನು ಹೇಳಿ ವೇತನ ನೀಡುವುದನ್ನು ಮುಂದೂಡಲಾಗುತ್ತಿದೆ ಎಂದು ದೂರಿದರು.
ಕಳೆದ ಒಂಬತ್ತು ಹತ್ತು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆನಂದ್ ಎಂಬ ಕಾರ್ಮಿಕರು ಮಾತನಾಡಿ, ಕಳೆದ ಆರು ತಿಂಗಳಿಂದ ಸಂಬಳದ ಸಮಸ್ಯೆ ಎದುರಿಸುತ್ತಿದ್ದೇವೆ. ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಅಂಗಡಿಗಳಲ್ಲಿ ದಿನಸಿ ಸಾಮಗ್ರಿಗಳನ್ನು ಸಾಲವಾಗಿ ಕೇಳಿದರೆ, ಹಿಂದಿನ ಬಾಕಿ ಹಣ ಪಾವತಿಸುವಂತೆ ಹೇಳುತ್ತಿದ್ದಾರೆ. ದಿನಬಳಕೆಯ ವಸ್ತುಗಳ ಬೆಲೆ ಹಾಗೂ ಪ್ರಯಾಣದ ವೆಚ್ಚ ಹೆಚ್ಚಾಗಿದ್ದು, ಸಂಬಳವಿಲ್ಲದೆ ಜೀವನ ನಿರ್ವಹಣೆ ಮಾಡುವುದು ದುಸ್ತರವಾಗಿದೆ. ಬಾಡಿಗೆ ಮನೆ ಮಾಲೀಕರು ಪದೇಪದೇ ಬಾಡಿಗೆ ಕೇಳುತ್ತಿದ್ದು, ಸಂಬಳವೇ ಕೈ ಸೇರದಿರುವಾಗ ಹಣ ಎಲ್ಲಿಂದ ತರಬೇಕು? ಕುಟುಂಬ ನಿರ್ವಹಣೆ ಮಾಡುವುದೂ ಕಷ್ಟವಾಗಿದೆ. ವೇತನ ಪಾವತಿಯಾಗುವವರೆಗೂ ಕೆಲಸ ಮುಂದುವರಿಸುವುದು ಹೇಗೆ ಎಂಬ ಆತಂಕ ಎದುರಾಗಿದೆ. ಆದ್ದರಿಂದ ಕಂಪನಿ ಆಡಳಿತ ಮಂಡಳಿ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಸಂಬಳ ಪಾವತಿ ವಿಳಂಬದಿಂದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಂಪನಿ ಆಡಳಿತ ಮಂಡಳಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೆಲಸ ಮಾಡುವ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸ್ತೆ ಮಧ್ಯೆ ಕುಳಿತು ಕೆಲ ಸಮಯ ಪ್ರತಿಭಟಿಸುವಾಗ ಪೊಲೀಸರು ಆಗಮಿಸಿ ಕಾರ್ಮಿಕರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದರು. ಕಳೆದ ತಿಂಗಳು ಕೂಡ ಕಾರ್ಮಿಕರು ಇದೇ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು.ಫೋಟೋ: