ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕರ್ನಾಟಕ ಅರ್ಬನ್ ವಾಟರ್ ಸಪ್ಲೆ ಇಲಾಖೆಯಿಂದ ಪಟ್ಟಣದ ವಾಟರ್ ಗೇಟ್ ಬಳಿ ಕಾವೇರಿ ನದಿ ತೀರದಲ್ಲಿ ನದಿ ನೀರಿಗೆ ತ್ಯಾಜ್ಯ ನೀರು ಸೇರುವ ಸ್ಥಳವೆಂದು ಗುರುತಿಸಿ ಒಂದು ಚಿಕ್ಕ ತಡೆ ಗೋಡೆ ನಿರ್ಮಿಸುವ ಸಂಬಂಧ ಅಧಿಕಾರಿಗಳು ಭಾನುವಾರ ಕಾಮಗಾರಿ ಆರಂಭಿಸಿದ ಹಿನ್ನೆಲೆ ಹಿಂದು ಜಾಗರಣಾ ವೇದಿಕೆ ಸಂಚಾಲಕ ಚಂದನ್ ನೇತೃತ್ವದಲ್ಲಿ ಕಾರ್ಯಕರ್ತರು ತಡೆದರು.
ಪುರಸಭೆಗಿಂತಲೂ ಮುಂಚೆ ಪಟ್ಟಣದಲ್ಲಿ ಯಾವುದೇ ಕಾಮಗಾರಿ ನಡೆಸಲು ಭಾರತೀಯ ಪುರಾತತ್ವ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳಿಂದ ಮೊದಲು ಪರವಾನಿಗೆ ಪಡೆಯಬೇಕು ಎಂಬ ನಿಯಮ ಇದ್ದುದ್ದರಿಂದ ಏಕಾಏಕಿ ಚೆಕ್ ಡ್ಯಾಂ ನಿರ್ಮಿಸಲು ಅವಕಾಶ ವಿರುವುದಿಲ್ಲ ಎಂದು ಈಗಾಗಲೇ ಪಟ್ಟಣ ನಾಗರಿಕರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಪುರಾತತ್ವ ಇಲಾಖೆಯಿಂದ ಪರವಾನಿಗೆ ತೆಗೆದುಕೊಳ್ಳಲು ಆಗ್ರಹಿಸಿದರು.ಕರ್ನಾಟಕ ಅರ್ಬನ್ ವಾಟರ್ ಸಪ್ಲೆ ಇಲಾಖೆ ಎಇಇ ಬಾಬುಸಾಬ್ ಮಾತನಾಡಿ, ತ್ಯಾಜ್ಯ ನೀರು ನದಿಗೆ ಹೋಗುವ ವಿಚಾರದಲ್ಲಿ ಉಪ ಲೋಕಾಯುಕ್ತರು ಇಲ್ಲಿನ ಸ್ಥಳ ಪರಿಶೀಲಿಸಿ ನಮಗೆ ಸೂಚನೆ ನೀಡಿದ್ದರು.
ಕರ್ನಾಟಕ ಅರ್ಬನ್ ವಾಟರ್ ಸಪ್ಲೆ ಇಲಾಖೆ ಎಇ ಭಾಗ್ಯ, ಹಿಂದು ಜಾಗರಣಾ ವೇದಿಕೆ ಬಾಲರಾಜು ಸೇರಿದಂತೆ ಇತರೆ ಕಾರ್ಯಕರ್ತರು, ಸ್ಥಳೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಇದ್ದರು.