ಲಕ್ಷ್ಮೇಶ್ವರ: ಹಿಂದೂ ವಿರೋಧಿ ಕಾನೂನು, ದ್ವೇಷ ಭಾಷಣ ತಡೆ ಮಸೂದೆಗೆ ಹಿಂದೂ ಜನಜಾಗೃತಿ ವಿರೋಧಿಸುತ್ತದೆ. ಮಸೂದೆಗೆ ಅನುಮೋದನೆ ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕ ಗುರುಪ್ರಸಾದಗೌಡ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷ ಅಪರಾಧಗಳ(ತಡೆ) ವಿಧೇಯಕ- 2025ಕ್ಕೆ ರಾಜ್ಯಪಾಲರು ಅನುಮೋದನೆ ನೀಡಬಾರದು. ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ವಿಧೇಯಕವು ಸ್ಪಷ್ಟತೆಯಿಲ್ಲದ ಹಾಗೂ ಸಂವಿಧಾನಕ್ಕೆ ವಿರುದ್ಧವಾದ ಕಾನೂನಾಗಿದ್ದು, ಜನರ ಮಾತಿನ ಸ್ವಾತಂತ್ರ್ಯ ಮತ್ತು ಧಾರ್ಮಿಕ ಆಚರಣೆಗಳಿಗೆ ದೊಡ್ಡ ಅಪಾಯವಾಗುತ್ತದೆ.ವೇದಶಾಸ್ತ್ರ ಉಲ್ಲೇಖ, ಧರ್ಮಪ್ರಚಾರ, ಧಾರ್ಮಿಕ ಚರ್ಚೆಗಳು ಮತ್ತು ಮತೀಯವಾದ ಟೀಕೆಗಳಂತಹ ಸಾಮಾನ್ಯ ಧಾರ್ಮಿಕ ಚಟುವಟಿಕೆಗಳೇ ಸಮಸ್ಯೆಗೆ ಒಳಗಾಗುವ ಭೀತಿ ಇದೆ. ಸಾಧು- ಸಂತರ, ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತರ ಕಿರುಕುಳಕ್ಕೆ ಕಾರಣವಾಗಬಹುದು. ಜನರ ವಾಕ್ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಪೂರ್ಣ ರಕ್ಷಣೆ ಒದಗಿಸುವುದು ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯೊಂದಿಗೆ ಮರುಪರಿಶೀಲನೆ ನಡೆಸುವ ಉದ್ದೇಶದಿಂದ ಇದನ್ನು ವಿಧಾನಸಭೆಗೆ ಹಿಂದಿರುಗಿಸಬೇಕು ಎಂದು ಅಗ್ರಹಿಸಿದರು.
ಈ ವೇಳೆ ವಕೀಲ ಮಲ್ಲೇಶಪ್ಪ ಬಾಡಗಿ, ಎನ್.ಸಿ. ಬೆಲ್ಲದ, ರವಿಕಾಂತ ಅಂಗಡಿ, ಮಂಜುನಾಥ ಮಾಗಡಿ, ಶಂಕರ ಬ್ಯಾಡಗಿ, ಈರಣ್ಣ ಪೂಜಾರ, ಹೊನ್ನಪ್ಪ ವಡ್ಡರ, ಪ್ರವೀಣ ಯರ್ಲಗಟ್ಟಿ, ಅಮಿತ ಗುಡಗೇರಿ, ಬಸವರಾಜ ಮೆಣಸಿನಕಾಯಿ, ದಶರಥ ಕೋಟೆಗೌಡ್ರ, ಯಲ್ಲಪ್ಪ ಶಿರಬಡಗಿ, ಅಭಿಷೇಕ ಉಮಚಗಿ, ಅರುಣ ಕಳ್ಳಿಹಾಳ, ಪ್ರಕಾಶ ಗುತ್ತಲ, ಕೊಟ್ರೇಶ ಅಳವಂಡಿ, ಮಹಾದೇವಪ್ಪ ಕುಂದಗೋಳ, ಕಲ್ಯಾಣಿ ತಟ್ಟಿ, ಶೋಭಾ ಇಟಗಿ, ಬೇಬಿ ರುದ್ರಶೆಟ್ಟಿ ಅನೇಕರು ಇದ್ದರು.ಇಂದು ವಿಶೇಷ ತರಬೇತಿ ಶಿಬಿರ
ಗದಗ: ರಾಜ್ಯ ಸಹಕಾರ ಮಹಾ ಮಂಡಳ, ಗದಗ ಜಿಲ್ಲಾ ಸಹಕಾರ ಯುನಿಯನ್, ದಿ. ಕೆಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸಹಕಾರ ವರ್ಷ- 2025 ಗದಗ ಹಾಗೂ ನರಗುಂದ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರ ಡಿ. 31ರಂದು ಬೆಳಗ್ಗೆ 10.30ಕ್ಕೆ ನಗರದ ಪಾಳಾ ಬಾದಾಮಿ ರಸ್ತೆ ಗಾಂಧಿ ಸರ್ಕಲ್ ಹತ್ತಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ವಹಿಸುವರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಫ್. ಕಲಗುಡಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ಪಾಟೀಲ ಅವರು ಸಹಕಾರಿ ಪಿತಾಮಹ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.