ನಾಳೆ ಪಾವಗಡದ ಹಿಂದೂ ಮಹಾಗಣಪತಿ ವಿಸರ್ಜನೆ

KannadaprabhaNewsNetwork |  
Published : Sep 27, 2025, 12:00 AM IST
ಫೋಟೋ 26ಪಿವಿಡಿ1.26ಪಿವಿಜಿ1.ಪಾವಗಡ,ಇದೇ ಸೆ.28ಕ್ಕೆ ನಗರದ ಹಿಂದೂ ಮಹಾಗಣಪತಿ ಬೃಹತ್‌  ವಿಸರ್ಜನಾ ಕಾರ್ಯಕ್ರಮದ ಸಿದ್ದತೆ ಕುರಿತು ಹಿಂದೂ ಪರ ಸಂಘಟನೆಯ ಪದಾಧಿಕಾರಿಗಳು ಪತ್ರಿಕಾಗೋಷ್ಟಿಯಲ್ಲಿ ವಿವರಿಸಿದರು. | Kannada Prabha

ಸಾರಾಂಶ

28ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಮಧುಗಿರಿ ಊರುಬಾಗಿಲು, ಬ್ರಹ್ಮಣರ ಬೀದಿಯಲ್ಲಿ ಪ್ರತಿಷ್ಟಾಪಿಸಲಾದ ಹಿಂದೂ ಮಹಾ ಗಣಪತಿಯ 3ನೇ ವರ್ಷದ ಬೃಹತ್‌ ಶೋಭಾಯಾತ್ರೆ ಮಹೋತ್ಸವ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕಾವಲಗೆರೆ ರಾಮಾಂಜಿನಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ

28ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಮಧುಗಿರಿ ಊರುಬಾಗಿಲು, ಬ್ರಹ್ಮಣರ ಬೀದಿಯಲ್ಲಿ ಪ್ರತಿಷ್ಟಾಪಿಸಲಾದ ಹಿಂದೂ ಮಹಾ ಗಣಪತಿಯ 3ನೇ ವರ್ಷದ ಬೃಹತ್‌ ಶೋಭಾಯಾತ್ರೆ ಮಹೋತ್ಸವ ವಿಸರ್ಜನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಕಾವಲಗೆರೆ ರಾಮಾಂಜಿನಪ್ಪ ತಿಳಿಸಿದ್ದಾರೆ.

ಹಿಂದೂ ಮಹಾಗಣಪತಿ ಸನ್ನಿಧಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಹಿಂದೂ ಮಹಾ ಗಣಪತಿ ಸಮಿತಿ, ಬಜರಂಗದಳ, ಶ್ರೀರಾಮಸೇನಾ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ಹಾಗೂ ಇತರೆ ಎಲ್ಲಾ ಹಿಂದೂಪರ ಸಂಘಟನೆಗಳ ವತಿಯಿಂದ ನಗರದ ಮಧುಗಿರಿ ಊರುಬಾಗಿಲಿನಲ್ಲಿ ಪ್ರತಿಷ್ಟಾಪಿಸಲಾದ ಹಿಂದೂ ಮಹಾ ಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ದತೆ ಕೈಗೊಂಡಿದ್ದು, ಶಿಸ್ತು ಬದ್ಧ ಹಾಗೂ ಶಾಂತಿ ರೀತಿಯ ಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರಿಸಲು ತೀರ್ಮಾನಿಸಲಾಗಿದೆ. ಹಿಂದೂ ಮಹಾಗಣಪತಿ ಸಮಿತಿಯ ಪದಾಧಿಕಾರಿಗಳು ಭೇಟಿಯಾಗಿ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸಕಾರತ್ಮಕ ಸ್ಪಂದನೆ ಸಿಕ್ಕಿದ್ದು, ಈ ಸಂಬಂಧ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹಾಗೂ ಶಾಸಕರಾದ ಬಸವರಾಜ್‌ ಪಾಟೀಲ್‌ ಯತ್ನಾಳ್‌, ಮಾಜಿ ಸಚಿವ ಸಿ.ಟಿ.ರವಿ, ಸಂಸದ ಗೋವಿಂದ ಕಾರಜೋಳ, ಶಾಸಕ ಪ್ರತಾಪ್‌ ಸಿಂಹ,ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಪಾವಗಡ ಶಾಸಕ ಎಚ್‌.ವಿ.ವೆಂಕಟೇಶ್‌ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಗಣ್ಯರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದಾಗಿ ಹೇಳಿದರು.

ಅಲಂಕೃತ ಬೆಳ್ಳಿ ರಥದಲ್ಲಿ ಬೃಹತ್‌ ಗಣಪತಿ ವಿಗ್ರಹದೊಂದಿಗೆ ಬೆಳಿಗ್ಗೆ 11ಗಂಟೆಗೆ ನಗರದಲ್ಲಿ ಮೆರವಣಿಗೆ ಪ್ರಾರಂಭವಾಗಲಿದ್ದು, ಹೊರವಲಯದ ಶ್ರೀ ಕಣಿವೇ ಲಕ್ಷ್ಮೀ ನರಸಿಂಹ ದೇವಸ್ಥಾನದ ವರೆವಿಗೆ ಮೆರವಣಿಗೆಯಲ್ಲಿ ಸಾಗಿ ಅಲ್ಲಿನ ಸಮೀಪದ ಶುದ್ಧ ನೀರಿನ ಕಲ್ಯಾಣಿ ಬಾವಿಯಲ್ಲಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿಲ್ಲಾಡಳಿತ ಆದೇಶನ್ವಯ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಘೋರ ವೇಷಧಾರಿಗಳು ಸೇರಿದಂತೆ ದೊಳ್ಳು ಕುಣಿತ, ವೀರಗಾಸೆ,ಬೊಂಬೆ ಕುಣಿತ, ಡ್ರಮ್‌ ಸೆಟ್‌ಗಳ ವಾದನ, ಯಕ್ಷಗಾನದ ಪಾತ್ರದ ಅಭಿನಯ ಇತರೆ 20ಕ್ಕಿಂತ ಹೆಚ್ಚಿನ ಕಲಾ ತಂಡಗಳು ಗಣಪತಿ ವಿಸರ್ಜನೆ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. 12ರಿಂದ 15 ಸಾವಿರ ಜನ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅತ್ಯಂತ ಯಶಸ್ವಿ ವಿಸರ್ಜನಾ ಕಾರ್ಯಕ್ರಮಕ್ಕೆ ಹಿಂದೂ ಮಹಾ ಗಣಪತಿ ಹಾಗೂ ಅಪಾರ ಸಂಖ್ಯೆಯ ಭಕ್ತರಿಂದ ಕಾರ್ಯಕ್ರಮದ ಸಿದ್ದತೆ ಕೈಗೊಳ್ಳಲಾಗಿದೆ.ಯಾವುದೇ ಆಹಿತಕರ ಘಟನೆಗಳಿಗೆ ಅವಕಾಶವಿಲ್ಲದ್ದಂತೆ ಸಿದ್ದತೆ ನಡೆಸಿದ್ದು, ಈ ಸಂಬಂಧ ಸೂಕ್ತ ಬಂದೋಬಸ್ತಿಗಾಗಿ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಲಾಗಿದೆ ಎಂದರು. ಇದೇ ವೇಳೆ ಮುಖಂಡರು ಹಾಗೂ ಭಕ್ತರಾದ ಅಲ್ಕುಂದ್‌ರಾಜ್‌, ರಘು, ಭಗವನ್‌, ರಾಮಚರಣ್‌, ನಂಜುಂಡಿ, ಮನೋಜ್‌ಕುಮಾರ್‌, ಹರ್ಷ, ರವಿತೇಜ, ಮಧು, ಮಂಜುನಾಥ್‌ ಹಾಗೂ ಇತರೆ ಅನೇಕ ಮಂದಿ ಹಿಂದೂ ಮಹಾ ಗಣಪತಿ ಸಮಿತಿ ಸದಸ್ಯರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ