ಮಧುಗಿರಿಯಲ್ಲಿ 19ಕ್ಕೆ ಹಿಂದೂ ಸಮಾಜೋತ್ಸವ: ಡಾ. ಶ್ರೀನಿವಾಸಮೂರ್ತಿ

KannadaprabhaNewsNetwork |  
Published : Feb 17, 2026, 01:15 AM IST
ಮಧುಗಿರಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದ ಸುದ್ದಿಗೋಷ್ಠಿಯಲ್ಲಿ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಮಾತಾಡಿದರು.  | Kannada Prabha

ಸಾರಾಂಶ

ಹಿಂದೂ ಸಮಾಜೋತ್ಸವ ಪ್ರತಿ ವರ್ಷ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಯಾವುದೇ ಜಾತಿ, ಸಮಾಜ, ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಹಿಂದೂಗಳು ಎಲ್ಲರೂ ಒಂದೇ ಎಂಬ ಭಾವನೆಯಿಂದ ಈ ಕಾರ್ಯಕ್ರಮ ರೂಪಿಸಿದ್ದೇವೆ. ಬೈಕ್‌ ಮೆರಣಿಗೆ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಗುವುದು.

ಕನ್ನಡಪ್ರಭವಾರ್ತೆ, ಮಧುಗಿರಿ

ಮಧುಗಿರಿಯಲ್ಲಿ ಫೆ.19ರ ಗುರುವಾರ ಹಿಂದೂ ಸಮಾಜೋತ್ಸವ ಸಮಾವೇಶ ಆಯೋಜಿಸಿದ್ದು, ಪ್ರತಿ ಮನೆ ಹಿಂದೂಗಳು ಬೃಹತ್ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಸಮಿತಿ ಅಧ್ಯಕ್ಷ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಮನವಿ ಮಾಡಿದರು.

ಇಲ್ಲಿನ ಮಲ್ಲೇಶ್ವರಸ್ವಾಮಿ ದೇಗುಲದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 28ವರ್ಷಗಳ ಹಿಂದೆ ಮಧುಗಿರಿಯಲ್ಲಿ ಹಿಂದೂ ಸಮಾವೇಶ ಮಾಡಿದ್ದು, ಈವರೆಗೂ ಹಲವು ಕಾರಣಗಳಿಂದ ಮಾಡಿರಲಿಲ್ಲ. ಪ್ರಸ್ತುತ ಪಕ್ಷಾತೀತವಾಗಿ ಮತ್ತು ಹಿಂದು ಧರ್ಮದ ಜನರನ್ನು ಒಟ್ಟಿಗೆ ಸೇರಿಸಲು ಈ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಮುಖಂಡ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಹಿಂದೂ ಸಮಾಜೋತ್ಸವ ಪ್ರತಿ ವರ್ಷ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಯಾವುದೇ ಜಾತಿ, ಸಮಾಜ, ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಹಿಂದೂಗಳು ಎಲ್ಲರೂ ಒಂದೇ ಎಂಬ ಭಾವನೆಯಿಂದ ಈ ಕಾರ್ಯಕ್ರಮ ರೂಪಿಸಿದ್ದೇವೆ. ಬೈಕ್‌ ಮೆರಣಿಗೆ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಗುವುದು. ಪ್ರತಿ ಮನೆ ಮನೆಗೂ ಕರ ಪತ್ರ ನೀಡಿ ಆಹ್ವಾನಿಸಲಿದ್ದು, ಎಲ್ಲರೂ ತಪ್ಪದೇ ಭಾಗವಹಿಸಬೇಕು ಎಂದರು.

ನಿವೃತ್ತ ಕೆಎಎಸ್ ಅಧಿಕಾರಿ ಎಲ್‌.ಸಿ. ನಾಗರಾಜು ಮಾತನಾಡಿ, ಭಾರತದ ಮಟ್ಟಿಗೆ ಹಿಂದೂ ಸಮಾಜ ಬಹುಸಂಖ್ಯಾತರು. ಆದರೆ, ಜಾಗತಿಕ ಮಟ್ಟದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ನಾವು ಒಗ್ಗಟ್ಟು ತೋರಿಸಬೇಕಿದೆ. ಇದು ಯಾವುದೇ ಧರ್ಮದ ವಿರುದ್ಧವಲ್ಲ. ಬದಲಿಗೆ ನಮ್ಮ ಉಳಿವಿಗಾಗಿ, ಜನ ಜಾಗೃತಿ ಸಮಾವೇಶವಾಗಿದೆ ಎಂದು ಹೇಳಿದರು.ಸಂಘನೆಯ ನಟರಾಜು, ಹಿಂದೂ ಮುಖಂಡರಾದ ಚಿ.ಸೂ. ಕೃಷ್ಣಮೂರ್ತಿ , ಹನುಮಂತರೆಡ್ಡಿ, ಎಸ್‌.ಡಿ. ಕೃಷ್ಣಪ್ಪ, ಪುರವರ ಮೂರ್ತಿ, . ಟಿ. ಗೋವಿಂದರಾಜು, ಮೋಹನ್ ರಾಜ್,ರಮೇಶ್, ಎಂ.ಆರ್. ಜಗನ್ನಾಥ್, ಎಂ.ಎಲ್‌. ಗಂಗರಾಜು, ಅಭಿಷೇಖ್, ಉಮಾಮಲ್ಲೇಶ್, ಗಾಯಿತ್ರಿ ನಾರಾಯಣ್, ಸುರೇಶ್‌, ಗುಟ್ಟೇ ವೀರೇಂದ್ರ, ಲತಾ ಪ್ರದೀಪ್, ಗೋ. ಮಧುಸೂದ್, ರವಿಶಂಕರ್, ಸೇಟು ಮೋಹನ್, ರಾಮದೇವ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೋಗನಂದೀಶ್ವರಸ್ವಾಮಿ ಜೋಡಿ ರಥೋತ್ಸವಕ್ಕೆ ಚಾಲನೆ
ಇಟಲಿ ಮೇಡಂ ಮೆಚ್ಚಿಸಲು ಆರ್‌ಎಸ್‌ಎಸ್ ಟೀಕೆ: ಮಾಜಿ ಸಂಸದ ಎಸ್. ಮುನಿಸ್ವಾಮಿ