ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಜೈ ಭಾರತ ಟವರ್ಸ್ ಸಭಾಂಗಣದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಫೆಬ್ರವರಿ 14 ಪ್ರೇಮಿಗಳ ದಿನವಲ್ಲ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸುವ ದಿನವಾಗಬೇಕು ಎಂಬ ಸಂದೇಶ ಸಾರುವ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಸಂಸ್ಕೃತಿ, ಆಚಾರವಿಚಾರಗಳಲ್ಲಿ ವಿಶೇಷ ಮಹತ್ವವಿದೆ. ಇಂತಹ ಸಂಸ್ಕೃತಿಯನ್ನು ಪ್ರತಿಯೊಬ್ಬ ಹಿಂದೂ ಅಳವಡಿಸಿಕೊಂಡು ಆಚರಿಸಬೇಕು. ಪ್ರೇಮಿಗಳ ದಿನವಾಗಿ ಆಚರಣೆ ಮಾಡುವುದನ್ನು ಬಿಟ್ಟು ದೇಶ ಕಾಯುವ ಯೋಧರನ್ನು ಗೌರವಿಸುವ ಕಾರ್ಯಕ್ರಮವಾಗಬೇಕು ಎಂದು ತಿಳಿಸಿದರು.ನಿವೃತ್ತ ಯೋಧರ ಸಮನ್ವಯ ಸಮಿತಿ ಪ್ರಮುಖರಾದ ನಾಗರಾಜು ಮಾತನಾಡಿ, ದೇಶ ರಕ್ಷಣೆ ಕೇವಲ ಯೋಧರ ಕೆಲಸವಲ್ಲ, ಪ್ರತಿಯೊಬ್ಬ ಭಾರತೀಯ ಪ್ರಜೆಯ ಜವಾಬ್ದಾರಿ. ದೇಶದ ಆಂತರಿಕ ಸಮಸ್ಯೆಗಳು ಹಾಗೂ ದೇಶವನ್ನು ಕಾಡುತ್ತಿರುವ ಹೊರಗಿನ ಸಮಸ್ಯೆಗಳು ನಿವಾರಣೆ ಆಗಬೇಕೆಂದರೆ ಎಲ್ಲಾ ಹಿಂದೂಗಳೂ ಒಂದಾಗಿ ದೇಶ ರಕ್ಷಣೆಗೆ ಸಂಕಲ್ಪ ಮಾಡಬೇಕು. ಹಿಂದೂಗಳ ಒಗ್ಗಟ್ಟಿನ ಶಕ್ತಿಯಿಂದ ಜಗತ್ತಿನ ಭಯೋತ್ಪಾದನೆ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೇಶ ರಕ್ಷಣೆಯ ಸೇವೆ ಮಾಡುತ್ತಾ ಹುತಾತ್ಮರಾದ ವೀರ ಯೋಧರಿಗೆ ಈ ವೇಳೆ ಗೌರವ ನಮನ ಸಲ್ಲಿಸಲಾಯಿತು. ೧೫ಕ್ಕೂ ಹೆಚ್ಚು ಮಂದಿ ನಿವೃತ್ತ ಯೋಧರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಹಿಂದೂ ಕಾರ್ಯಕರ್ತರ ಅಭ್ಯಾಸವರ್ಗ ನಡೆಸಲಾಯಿತು.