ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು
ಕಾವೇರಿ ನದಿಯಲ್ಲಿ ಪೂಜೆ ನಡೆಸಿ ಪೂರ್ಣ ಕಳಸದೊಂದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಅಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೆರವಣಿಗೆ ಸಂದರ್ಭ ಭಜನೆ ಕುಣಿತ ಎಲ್ಲರ ಗಮನ ಸೆಳೆಯಿತು, ನೆಲ್ಲಿಹುದಿಕೇರಿಯ ಸುಜಾತಾ ಮತ್ತು ವನಿತಾ ಮತ್ತು ಅವರ ತಂಡದ 40 ಮಂದಿ ಮೆರವಣಿಗೆಗೆ ಮೆರಗು ತಂದರು. ದಾರಿಯುದ್ದಕ್ಕೂ ಕುಣಿಯುತ್ತಾ ಸಾಗಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡ್ಡೆಹೊಸುರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಎಂ.ಸಾಗರ್ ವಹಿಸಿದ್ದರು.ಮಂಗಳೂರು ವಿಭಾಗದ ಎ.ಬಿ.ವಿ.ಪಿ.ಸಂಘಟನಾ ಸಂಯೋಜಕರಾದ ಕೇಶವ ಬಂಗೇರಾ ಹಾಜರಿದ್ದು ಕಾರ್ಯಕ್ರಮದ ಬಗ್ಗೆ ಮಾತನಾಡಿ ಹಿಂದೂ ಸಂಗಮ ಕಾರ್ಯಕ್ರಮ ಯಾರ ವಿರುದ್ಧವು ಅಲ್ಲ. ಅದು ಧರ್ಮದ ಸಂಘಟನೆಗೆ 100 ವರ್ಷ ತುಂಬಿದ ಹಿನ್ನಲೆಯಲ್ಲಿ ಇಡೀ ದೇಶಾದ್ಯಂತ ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ವೇದಿಕೆಯಲ್ಲಿ ಬಸವನಹಳ್ಳಿಯ ದೇವಸ್ಥಾನಕ್ಕೆ ಸ್ಥಳ ದಾನ ನೀಡಿದ ಕಾಳಯ್ಯ, ಯೋಗ ಶಿಕ್ಷಕಿ ಪಾರ್ವತಿ, ಗ್ರಾ.ಪಂ.ವಾಹನ ಚಾಲಕ ವಿಜಯ್, ನಾಟಿ ವೈದ್ಯೆ ಕಮಲ ಹಾಜರಿದ್ದರು. ಈ ಸಂದರ್ಭ ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇಂದಿನ ಈ ಯುಗದಲ್ಲಿ ಆರೋಗ್ಯವೇ ಅತೀ ಮುಖ್ಯ ಈ ಬಗ್ಗೆ ಯೋಗದೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡುವ ಬಗ್ಗೆ ಪಾರ್ವತಿ ವಿವರಿಸಿದರು.
ನಿರೂಪಿಸಿದರು. ಅಶ್ವಿನಿ ಸ್ವಾಗತಿಸಿ ವಂದಿಸಿದರು.