ನಾಳೆ ಹಿಂದೂ ಸಂಗಮ ಕಾರ್ಯಕ್ರಮ: ಅಧ್ಯಕ್ಷ

KannadaprabhaNewsNetwork |  
Published : Feb 04, 2026, 01:45 AM IST
೩ ಜೆ ಎಲ್ ಆರ್ ಚಿತ್ರ ೩ ಎ: ಜಗಳೂರು ಪಟ್ಟಣದಲ್ಲಿ ಆರ್ ಎಸ್‌ ಎಸ್‌  ಮುಖಂಡರು ಹಿಂದೂ ಸಂಗಮ ಕುರಿತು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

'ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು' ಘೋಷವಾಕ್ಯದಡಿ ಮೊದಲ ಬಾರಿಗೆ ಪಟ್ಟಣದ ದೊಡ್ಡ ಮಾರಿಕಾಂಬ ದೇವಸ್ಥಾನ ಆವರಣದಲ್ಲಿ ಫೆ.೫ರಂದು ಗುರುವಾರ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಮನೋಹರ್ ರೆಡ್ಡಿ ಹೇಳಿದರು.

- ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಶ್ರೀ, ವಚನಾನಂದ ಸ್ವಾಮೀಜಿ ಸಾನ್ನಿಧ್ಯ- - -

ಕನ್ನಡಪ್ರಭ ವಾರ್ತೆ ಜಗಳೂರು

''ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು'' ಘೋಷವಾಕ್ಯದಡಿ ಮೊದಲ ಬಾರಿಗೆ ಪಟ್ಟಣದ ದೊಡ್ಡ ಮಾರಿಕಾಂಬ ದೇವಸ್ಥಾನ ಆವರಣದಲ್ಲಿ ಫೆ.೫ರಂದು ಗುರುವಾರ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಮನೋಹರ್ ರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಹಾಗೂ ಹರಪೀಠ ಹರಿಹರದ ವಚನಾನಂದ ಮಹಾಸ್ವಾಮೀಜಿ ವಹಿಸಲಿದ್ದಾರೆ. ಆರ್‌ಎಸ್‌ಎಸ್‌ ಪ್ರಮುಖರಾದ ನವೀನ್ ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿ ಮಾತನಾಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು, ಸರ್ವ ಸಮಾಜ, ಮಾತೃಶಕ್ತಿ, ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ. ಮನೆ ಮನೆ ಸಂಪರ್ಕವನ್ನು ಸಹ ಮಾಡಲಾಗಿದ್ದು, ಸಾಮರಸ್ಯ, ಕುಟುಂಬ ಪ್ರಬೋಧನೆ, ಸ್ವದೇಶಿಭಾವ, ನಾಗರಿಕ ಕರ್ತವ್ಯ ಎಂಬ ಪಂಚ ಪರಿವರ್ತನೆಯ ಮೂಲದ ಉದ್ದೇಶವಾಗಿದೆ ಎಂದರು.

ಆರ್‌ಎಸ್‌ಎಸ್‌ ತಾಲೂಕು ಮುಖಂಡ ಜಿ.ವಿ. ನಾಗರಾಜ್ ಮಾತನಾಡಿ, ೧೯೨೫ ರಲ್ಲಿ ಸಂಘ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ವಿಜಯ ದಶಮಿಯಂದು ಸ್ಥಾಪನೆಗೊಂಡಿದೆ. ಈಗ ಸಂಘ ನೂರು ವರ್ಷ ಪೂರೈಸಿದೆ. ರಾಷ್ಟ್ರ ನಿರ್ಮಾಣವೇ ಧ್ಯೇಯವಾಗಿದ್ದು, ಎಲ್ಲರೂ ದೇಶ ಕಟ್ಟುವ ಕಾಯಕ ಮಾಡೋಣ ಎಂದರು.

ವಕೀಲ ಹನುಮಂತಪ್ಪ ಮಾತನಾಡಿ, ಮಧ್ಯಾಹ್ನ ೨ ಗಂಟೆಯಿಂದ ಮಹಿಳೆಯರಿಂದ ಕುಂಭಮೇಳ ಜೊತೆಗೆ ಬೃಹತ್ ಶೋಭಾಯಾತ್ರೆ, ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳ ಮೂಲಕ ದೊಡ್ಡ ಮಾರಿಕಾಂಬ ದೇವಸ್ಥಾನದ ಹೊರಗೆ ಶೋಭಯಾತ್ರೆ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಹೊಸಕೆರೆ ಮುಕುಂದ, ರೇವಣ್ಣ, ಶ್ರೀಧರ ಮಾರುತಿ, ಉಮೇಶ್ ಇತರರು ಇದ್ದರು.

- - -

-೩ಜೆಎಲ್‌ಆರ್‌ಚಿತ್ರ೩ಎ:

ಜಗಳೂರು ಪಟ್ಟಣದಲ್ಲಿ ಆರ್‌ಎಸ್‌ಎಸ್‌ ಮುಖಂಡರು ಹಿಂದೂ ಸಂಗಮ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ