ಚಿಕ್ಕ ಹಾಲಿವಾಣದಲ್ಲಿ ವೀರಭದ್ರೇಶ್ವರ ಗುಗ್ಗುಳ ಸಂಪನ್ನ

KannadaprabhaNewsNetwork |  
Published : Feb 04, 2026, 01:30 AM IST
ಹೊನ್ನಾಳಿ ಫೋಟೋ 3ಎಚ್ಎಲ್.ಐ2. ತಾಲೂಕಿನ ಚಿಕ್ಕಹಾಲಿವಾಣ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ಗುಗ್ಗುಳ ಮಹೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನ ಚಿಕ್ಕ ಹಾಲಿವಾಣ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗುಳ ಮಹೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಚಿಕ್ಕ ಹಾಲಿವಾಣ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗುಳ ಮಹೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ನೆರವೇರಿತು.

ಗುಗ್ಗುಳದಲ್ಲಿ ರಾಣೇಬೆನ್ನೂರಿನ ಪುರುವಂತರ ಸಂಗಡಿಗರಿಂದ ಶಸ್ತ್ರಗಳನ್ನು ಬಾಯಿಗೆ ಹಾಗೂ ದೇಹದ ಇತರ ಭಾಗಗಳಿಗೆ ಹಾಕಿಸಿಕೊಳ್ಳತ್ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು. ಖಡ್ಗ ಪ್ರದರ್ಶನ ನಡೆಯಿತು, ವಿವಿಧ ದೇವರುಗಳ ಉತ್ಸವ ಮೂರ್ತಿಗಳು ಪಲ್ಲಕ್ಕಿಯಲ್ಲಿ ಪ್ರದಕ್ಷಿಣೆ ಹಾಕಿದ ನಂತರ ಕೆಂಡದರ್ಚನೆ ನಡೆಯಿತು. ನೂರಾರು ಭಕ್ತರು ಕೆಂಡ ಹಾಯ್ದರು. ಹರಕೆ ಹೊತ್ತ ಮಹಿಳೆಯರು ಕೆಂಡ ಹಾಯ್ದ ಪಕ್ಕದಲ್ಲಿ ಒಣ ಕೊಬರಿ ಸುಟ್ಟು ಭಕ್ತಿ ಸಲ್ಲಿಸಿದರು. ಬಳಿಕ ಮಹಾಪ್ರಸಾದ ನಡೆಯಿತು.

ಗುಗ್ಗುಳ ಮಹೋತ್ಸವದಲ್ಲಿ ಹರಿಹರ ತಾಲೂಕಿನ ಹಿರೇಹಾಲಿವಾಣದ ಶ್ರೀ ಹಾಲೇಶ್ವರ ಸ್ವಾಮಿ, ಶ್ರೀ ಕರಿಯಮ್ಮ ದೇವಿಯರ ಉತ್ಸವ ಮೂರ್ತಿಗಳು ಪಾಲ್ಗೊಂಡಿದ್ದವು. ಹಿರೇಹಾಲಿವಾಣದ ಶ್ರೀ ಹಾಲೇಶ್ವರ ಸ್ವಾಮಿ ಹಾಗೂ ಚಿಕ್ಕಹಾಲಿವಾಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಉತ್ಸವ ಮೂರ್ತಿಗಳು ಗುಗ್ಗುಳ ಮಹೋತ್ಸವ ಮತ್ತು ಕೆಂಡದರ್ಚನೆ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವು.

ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆವರೆಗೆ ಜವುಳ ಕಾರ್ಯಕ್ರಮ ನಡೆಯಿತು. ರಾತ್ರಿ 7 ರಿಂದ 10 ಗಂಟೆವರೆಗೆ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿತು. ಅನ್ನ ದಾಸೋಹಕ್ಕೆ ದೇವಸ್ಥಾನಕ್ಕೆ ಅಕ್ಕಿ ಸಮರ್ಪಿಸಲಾಯಿತು. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಅಪಾರ ಭಕ್ತರು ಪಾಲ್ಗೊಂಡರು.

ಹರಿಹರ ತಾಲೂಕಿನ ಹಿರೇಹಾಲಿವಾಣ ಗ್ರಾಮದ ಅನೇಕ ಮುಖಂಡರು, ಹೊನ್ನಾಳಿ ಪಟ್ಟಣ ಸೇರಿದಂತೆ ತಾಲೂಕಿನ ಯರೇಹಳ್ಳಿ, ಹತ್ತೂರು ಯಕ್ಕನಹಳ್ಳಿ, ಕೂಲಂಬಿ, ಕುಂದೂರು, ಚಿಕ್ಕೆರೇಹಳ್ಳಿ, ದೊಡ್ಡೆರೇಹಳ್ಳಿ, ಹರಿಹರ ತಾಲೂಕಿನ ಮಲೇಬೆನ್ನೂರು, ಹರಳಹಳ್ಳಿ ಗ್ರಾಮಗಳ ಜನತೆ, ಶ್ರೀ ವೀರಭದ್ರೇಶ್ವರಸ್ವಾಮಿ ಒಕ್ಕಲಿನ ಕುಟುಂಬಸ್ಥರು ಆಗಮಿಸಿ ಪೂಜೆ ಸಲ್ಲಿಸಿದರು.

ಶ್ರೀ ವೀರಭದ್ರೇಶ್ವರ ದೇವರ ಮುಖಕ್ಕೆ ಬೆಳ್ಳಿ ಕವಚವನ್ನು ಹಾಕಿ ವಿವಿಧ ಹೂವುಗಳೀಂದ ಅಲಂಕರಿಸಿ ವಿಶೇಪೂಜಾ ಕೈಂಕರ್ಯ ನಡೆಸಲಾಯಿತು. ಜಾತ್ರೆಗೆ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

- - -

-3ಎಚ್ಎಲ್.ಐ2:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಡ್ಯ ಜಿಲ್ಲೆ: ಗ್ರಾಪಂನ ೫೯೦ ನೌಕರರಿಗೆ ಉದ್ಯೋಗ ಭದ್ರತೆ
ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾನವೀಯ ಮೌಲ್ಯ, ಸಂಸ್ಕಾರ ಕಲಿಕೆ: