ಹಿಂದೂ ಸಮಾಜ ಸಾಮರಸ್ಯದ ಬದುಕು ಕಾಣಬೇಕು: ಟಿ.ಸಿ.ಚಂದ್ರನ್‌

KannadaprabhaNewsNetwork |  
Published : Feb 08, 2026, 03:15 AM IST
ನಾಪೋಕ್ಲು ಶ್ರೀಗುರು ಪೊನ್ನಪ್ಪ ಸಭಾಂಗಣದಲ್ಲಿ ಆಯೋಜಿಸಿದ ಹಿಂದೂ ಸಂಗಮ ಕಾರ್ಯಕ್ರಮ. | Kannada Prabha

ಸಾರಾಂಶ

ಹಿಂದೂ ಸಮಾಜ ಪರಸ್ಪರ ಸಾಮರಸ್ಯದಿಂದ ಬದುಕು ಕಾಣುವಂತಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕುಟುಂಬ ಪ್ರಮೋದನ್ ಪ್ರಮುಖ್‌ ಟಿ.ಸಿ. ಚಂದ್ರನ್ ಹೇಳಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಹಿಂದೂ ಸಮಾಜ ಪರಸ್ಪರ ಸಾಮರಸ್ಯದಿಂದ ಬದುಕು ಕಾಣುವಂತಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕುಟುಂಬ ಪ್ರಮೋದನ್ ಪ್ರಮುಖ್‌ ಟಿ.ಸಿ. ಚಂದ್ರನ್ ಹೇಳಿದರು.

ಇಲ್ಲಿನ ಶ್ರೀ ಗುರು ಪೊನ್ನಪ್ಪ ಸಭಾಂಗಣದಲ್ಲಿ ಆಯೋಜಿಸಿದ ಹಿಂದೂ ಸಂಗಮ ಕಾರ್‍ಯಕ್ರಮದಲ್ಲಿ ಹಿಂದೂ ಸಮಾಜದ ಜಾಗೃತಿ ಮತ್ತು ರಾಷ್ಟ್ರೀಯ ಸುರಕ್ಷತೆ ಬಗ್ಗೆ ಅವರು ಮಾತನಾಡಿದರು.ಕ್ಷೀಣಿಸುತ್ತಿರುವ ಕುಟುಂಬ ಪದ್ದತಿ ಬಲವರ್ಧನೆಗೊಳಿಸುವುದರೊಂದಿಗೆ ನಾಗರಿಕ ಶಿಷ್ಟಾಚಾರ ಪಾಲಿಸಬೇಕು ಎಂದು ಹೇಳಿದರು.

ಇನ್ನೊಬ್ಬ ಅತಿಥಿ, ಉಪನ್ಯಾಸಕ ಶಿವಚಾಳಿಯಂಡ ನಿತ್ಯ ಕಾರ್ಯಪ್ಪ ಮಾತನಾಡಿ, ಹಿಂದೂ ಸಮಾಜದ ಸ್ತ್ರೀಯರು ಸಮಾಜದ ಅಳಿವು ಮತ್ತು ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹೆಣ್ಣು ಮಕ್ಕಳು ಲವ್‌ ಜಿಹಾದ್ ನಂತಹ ಷಡ್ಯಂತರಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದರು.

ಬಿಲ್ಲವ ಸಮಾಜದ ನಾಪೋಕ್ಲು ಹೋಬಳಿ ಅಧ್ಯಕ್ಷ ಬಿ.ಎಂ. ಪ್ರತೀಪ ಮಾತನಾಡಿ, ಹಿಂದೂ ಧರ್ಮದ ಭದ್ರತೆಗೆ ಜಾತಿ ವ್ಯವಸ್ತೆ ಪೂರಕವಾಗಿರಬೇಕು ಮತ್ತು ಎಲ್ಲ ಜಾತಿಗಳು ಒಂದಾಗಿ ಹಿಂದುತ್ವದಡಿಯಲ್ಲಿದ್ದರೆ ಮಾತ್ರ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಮಾತನಾಡಿ, ಹಿಂದುತ್ವಕ್ಕಾಗಿ ಬದುಕ ಬೇಕು, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮನಮ್ಮನ್ನು ರಕ್ಷಿಸುತ್ತದೆ ಎಂದರು.

ಸರಸ್ವತಿ ಮನೋಹರಿ ಪ್ರಾರ್ಥಿಸಿದರು. ಜಾಲಿ ಪೂವಪ್ಪ ಸ್ವಾಗತಿಸಿದರು. ಶಿವಚಾಳಿಯಂಡ ಜಗದೀಶ್

ವಂದಿಸಿದರು.

ಗುರು ಪೊನ್ನಪ್ಪ ಸಭಾಂಗಣದಲ್ಲಿ ಆಯೋಜಿಸಿದ ಹಿಂದೂ ಸಂಗಮ ಕಾರ್ಯಕ್ರಮ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ