ಪೂರ್ವಿಜರ ಧರ್ಮ ಪರಂಪರೆಯಿಂದ ಹಿಂದೂ ಧರ್ಮ ಜೀವಂತಿಕೆ

KannadaprabhaNewsNetwork |  
Published : Apr 04, 2026, 04:00 AM IST
ತಾಳಿಕೋಟೆ 2 | Kannada Prabha

ಸಾರಾಂಶ

ಹಿಂದೂ ಧರ್ಮವನ್ನು ಅಳಿಸಿ ಹಾಕಲು ಸಾಕಷ್ಟು ಜನರು ದೇಶದ ಮೇಲೆ ದಾಳಿ ಮಾಡಿದರೂ ಸನಾತನ ಹಿಂದೂ ಧರ್ಮ ಜೀವಂತವಾಗಿರಲು ನಮ್ಮ ಪೂರ್ವಿಜರು ಕಾಪಾಡಿಕೊಂಡು ಬಂದಿರುವ ಧರ್ಮ ಪರಂಪರೆಯೇ ಕಾರಣ ಎಂದು ಖ್ಯಾತ ವಾಘ್ಮಿ ಕುಮಾರಿ ಹಾರಿಕಾ ಮಂಜುನಾಥ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹಿಂದೂ ಧರ್ಮವನ್ನು ಅಳಿಸಿ ಹಾಕಲು ಸಾಕಷ್ಟು ಜನರು ದೇಶದ ಮೇಲೆ ದಾಳಿ ಮಾಡಿದರೂ ಸನಾತನ ಹಿಂದೂ ಧರ್ಮ ಜೀವಂತವಾಗಿರಲು ನಮ್ಮ ಪೂರ್ವಿಜರು ಕಾಪಾಡಿಕೊಂಡು ಬಂದಿರುವ ಧರ್ಮ ಪರಂಪರೆಯೇ ಕಾರಣ ಎಂದು ಖ್ಯಾತ ವಾಘ್ಮಿ ಕುಮಾರಿ ಹಾರಿಕಾ ಮಂಜುನಾಥ ಹೇಳಿದರು.

ತಾಲೂಕಿನ ಬ.ಸಾಲವಾಡಗಿ ಗ್ರಾಮದಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ೪ನೇ ವರ್ಷದ ಶ್ರೀರಾಮನವಮಿ ಉತ್ಸವ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ಅವರು, ಹಿಂದೂಗಳಿಗೆ ಇರುವುದು ಒಂದೇ ದೇಶ, ಅದು ಭಾರತ ದೇಶವಾಗಿದೆ. ಇಂದು ದೇಶದಲ್ಲಿ 100 ಕೋಟಿ ಹಿಂದೂಗಳು ಧರ್ಮಾಚರಣೆ ಮಾಡುತ್ತಿವೆ. ಶ್ರೀರಾಮನನ್ನು ಜಪಿಸುವುದರೊಂದಿಗೆ ಧರ್ಮ ರಕ್ಷಣೆಗೆ ಟೊಂಕಕಟ್ಟಿ ನಿಂತಿವೆ. ಇದುವೇ ಹಿಂದೂ ಧರ್ಮದ ತಾಕತ್ತು ಆಗಿದೆ ಎಂದರು. ಹಳ್ಳಿ ಹಳ್ಳಿಗಳಲ್ಲೂ ರಾಮನ ಉತ್ಸವಗಳು ನಡೆಯುತ್ತಿವೆ. ನಮ್ಮ ಪೂರ್ವಜರು ಕಟ್ಟಿದ ದೇವಸ್ಥಾನಗಳ ಮೇಲೆ ಏಷ್ಟೇಬಾರಿ ದಾಳಿ ಮಾಡಿ ದ್ವಂಸ ಮಾಡಿದರೂ ಮತ್ತೇ ತಲೆ ಎತ್ತಿ ನಿಂತಿವೆ ಅಯೋಧ್ಯಯ ರಾಮ ಮಂದಿರದ ಮೇಲೆ ೫೦೦ ವರ್ಷಗಳಿಂದ ಸತತವಾಗಿ ದಾಳಿ ಮಾಡುವುದರೊಂದಿಗೆ ದಂಸಮಾಡಿದರೂ ಮತ್ತೇ ರಾಮ ಮಂದಿರವನ್ನು ಪುನರ್ ನಿರ್ಮಾಣ ಮಾಡುವಂತಹ ಕಾರ್ಯ ಮಾಡಿದ್ದೇವೆ. ಸೂರ್ಯವಂಶಿ ಶ್ರೀರಾಮನಿಗೆ ರಾಮನವಮಿಯ ದಿನದಂದು ಸೂರ್ಯ ತಿಲಕವನ್ನು ಇಡುವಂತಹ ಕಾರ್ಯ ಮಾಡಿದ್ದೇವೆ. ಇದುವೇ ನಮ್ಮಲ್ಲಿರುವ ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ತಾಕತ್ತಾಗಿದೆ ಎಂದರು.ಅಲ್ಲಮಪ್ರಭುದೇವರು, ಬಸವಣ್ಣನವರು, ಆಯ್ದಕ್ಕಿ ಲಕ್ಕಮ್ಮ, ಅಂಬಿಗೇರ ಚೌಡಯ್ಯ ಒಳಗೊಂಡು ಸಾಕಷ್ಟು ಶರಣರು ತಮ್ಮಲ್ಲಿರುವ ತಾಳೆಗೆರೆಗಳನ್ನು ಹೊತ್ತುಕೊಂಡು ದಿಕ್ಕು ದಿಕ್ಕುಗಳಿಗೆ ಹೋಗಿ ವಚನಗಳ ಮೂಲಕ ಹಿಂದೂ ಧರ್ಮದ ರಕ್ಷಣೆಗೆ, ಸಂಸ್ಕೃತಿ ರಕ್ಷಣೆಗೆ ನಿಂತರು, ಅವರು ಉಳಿಸಿಕೊಟ್ಟ ಧರ್ಮವನ್ನು ನಾವು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದರು. ಹಿಂದೂಗಳಾಗಿರುವ ನಾವುಗಳು ಜಾತಿ ವ್ಯವಸ್ಥೆಯನ್ನು ತೆಗೆದುಹಾಕಬೇಕಿದೆ. ಜಾತಿ ವ್ಯವಸ್ಥೆ ಎಂಬುವುದು ನಮ್ಮ ಮನೆಯ ಬಾಗಿಲಿನಲ್ಲಿರಬೇಕು. ಅದನ್ನು ಹೊರಗಡೆ ತರದೇ ನಾವೆಲ್ಲ ಹಿಂದೂ ನಾವೆಲ್ಲ ಒಂದು ನಾವೆಲ್ಲ ಬಂದು ಎಂಬ ಭಾವನೆ ಬರಬೇಕು. ಅಂದಾಗ ಮಾತ್ರ ನಮ್ಮ ಹಿಂದೂ ಧರ್ಮ ಗಟ್ಟಿಯಾಗಿ ನಿಲ್ಲಲಿದೆ ಎಂದರು. ಪ್ರತಿಯೊಬ್ಬರಲ್ಲಿಯೂ ಶ್ರೀರಾಮನ ಆದರ್ಶಬರಬೇಕು, ಮನೆ ಮನೆಯಿಂದ ಧರ್ಮ ಜಾಗೃತಿ ಆಗಬೇಕು. ಇದಕ್ಕೆ ಧರ್ಮಬೋಧನೆಗಳ ಮೂಲಕ ಮಕ್ಕಳಿಗೆ ಮಾಡಬೇಕಿದೆ. ಇಂದಿನ ದಿನಮಾನದಲ್ಲಿ ಹೆಣ್ಣುಮಕ್ಕಳು ಹಣೆಯ ಮೇಲೆ ತಿಲಕವನ್ನಿಡುವುದನ್ನು ಮರೆಯುತ್ತಿದ್ದಾರೆ. ಇದು ಆಗಬಾರದು. ನಮ್ಮ ಧರ್ಮ ಸಂಸ್ಕೃತಿಯಲ್ಲ ಹಿರಿಯರು ಹಾಕಿಕೊಟ್ಟ ಪದ್ಧತಿಯನ್ನು ಎಂದೂ ಮರೆಯಬಾರದು. ತಿಲಕವೆಂಬುವುದು ನಮ್ಮ ಸನಾತನ ಧರ್ಮದ ಸ್ವಾಭಿಮಾನದ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ ಹುಟ್ಟಿರುವ ನಾವುಗಳು ನಮ್ಮ ಸನಾತನ ಧರ್ಮ ಸಂಸ್ಕೃತಿ ಪರಂಪರೆ ಉಳಿಸುವಂತಹ ಕಾರ್ಯ ಮಾಡಬೇಕಿದೆ. ಇಲ್ಲದಿದ್ದರೇ ನಮ್ಮ ಮೇಲೆ ಹಿಂದಿನಂತೆ ಧರ್ಮದ ಮೇಲೆ ದಬ್ಬಾಳಿಕೆ ನಡೆಯುತ್ತ ಇರುತ್ತದೆ. ಇದನ್ನು ನಿಲ್ಲಿಸಲು ಧರ್ಮ ಸಂಸ್ಕೃತಿ ಮಕ್ಕಳಲ್ಲಿ ಕಲಿಸುವ ಕಾರ್ಯ ತಂದೆ ತಾಯಂದಿರರು ಮಾಡಬೇಕು. ಅಂತಹ ಧರ್ಮ ಸಂಸ್ಕಾರ ಬಿತ್ತುವಂತಹ ಕಾರ್ಯ ಬಿ.ಸಾಲವಾಡಗಿ ಗ್ರಾಮದ ಸಹೋದರರು ಯಶಸ್ವಿಯಾಗಿ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಗುಂಡಕನಾಳ ಬೃಹನ್ ಮಠದ ಗುರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ಮಾತನಾಡಿ, ಸನಾತನ ಹಿಂದೂ ಧರ್ಮವೆಂಬುವುದು ಎಂದಿಗೂ ಅಳಿಸಲಾಗದಂತಹ ಧರ್ಮವಾಗಿದೆ. ಸಾವಿರಾರು ವರ್ಷಗಳಿಂದಲೂ ಈ ಧರ್ಮ ನಾಶಕ್ಕೆ ಬಂದವರೇ ನಾಶವಾಗಿ ಹೋಗಿದ್ದಾರೆ. ಸನಾತನ ಧರ್ಮದ ಒಂದು ಕೊಂಡಿ ಕಳಚುವಂತಹದ್ದು. ಅವರಿಂದ ಆಗಿಲ್ಲ. ಬಿ.ಸಾಲವಾಡಗಿ ಗ್ರಾಮದ ಯುವಕರು ಶ್ರೀರಾಮನವಮಿ ಉತ್ಸವದ ಮೂಲಕ ಧರ್ಮ ಜಾಗೃತಿ ಕಾರ್ಯ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ದೇಶದಲ್ಲಿರುವ ನಮ್ಮ ಹಿಂದೂ ಧರ್ಮದ ಪರಂಪರೆಯಲ್ಲಿ ಹುಟ್ಟಿರುವ ಕೆಲವು ವಿಚಾರವಾದಿಗಳೆನ್ನಿಸಿಕೊಳ್ಳುವರು ಹಿಂದೂ ಧರ್ಮದಲ್ಲಿಯೇ ಹುಟ್ಟಿ ಧರ್ಮದ ಬಗ್ಗೆ ಟೀಕಿಸುವಂತವರಾಗಿದ್ದಾರೆ. ಇದಕ್ಕೆ ಅವರಿಗೆ ಸನಾತನ ಧರ್ಮದ ಸಂಸ್ಕೃತಿ ಪರಂಪರೆಯ ತಿಳುವಳಿಕೆಯ ಕೊರತೆಯಾಗಿದೆ. ಅದಕ್ಕಾಗಿ ಮಕ್ಕಳಲ್ಲಿ ಧರ್ಮ ಸಂಸ್ಕಾರ ಬೋಧಿಸುವಂತಹ ಕಾರ್ಯ ಮಾಡಬೇಕು, ಅಂದಾಗ ಹಿಂದೂ ಧರ್ಮ ಗಟ್ಟಿಯಾಗಿ ದೇಶದಲ್ಲಿ ನಿಲ್ಲುವದರೊಂದಿಗೆ ದೇಶ ಧರ್ಮ ರಕ್ಷಣೆಯಾಗಿ ನಿಲ್ಲಲಿದೆ. ಅಂತಹ ಸನಾತನ ಧರ್ಮ ರಕ್ಷಣೆಗೆ ಬಿ.ಸಾಲವಾಡಗಿ ಗ್ರಾಮದ ಸಹೋದರರು ರಾಮನವಮಿ ಉತ್ಸವದ ಮೂಲಕ ಮುಂದೆ ಬಂದಿರುವುದು ಅವರಲ್ಲಿರುವ ಸನಾತನ ಧರ್ಮ ಪ್ರೇಮ ಎಂತಹದ್ದೆಂಬುವುದು ಮತ್ತೊಬ್ಬರಿಗೆ ಮಾದರಿಯಾಗಿದೆ ಎಂದರು.ಕೆಸರಟ್ಟಿಯ ಸೋಮಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀರಾಮನು ಮರ್ಯಾದಪುರುಷೋತ್ತಮನಾಗಿದ್ದಾನೆ. ಅವನನ್ನು ಪೂಜಿಸಿ ಅವರ ಆದರ್ಶಗಳನ್ನು ಮಕ್ಕಳಲ್ಲಿ ತುಂಬುವಂತಹ ಕಾರ್ಯ ಪಾಲಕರಾದವರು ಮಾಡಬೇಕಿದೆ. ಸನಾತನ ಹಿಂದೂ ಧರ್ಮದ ಮೇಲೆ ಸಾವಿರಾರು ವರ್ಷಗಳಿಂದಲೂ ಅಲ್ಲದೇ ಅನೇಕ ದೇವಸ್ಥಾನಗಳ ಮೇಲೆ ದಾಳಿ ಮಾಡಿ ಧರ್ಮ ನಾಶ ಮಾಡಬೇಕೆಂದು ಬಂದವರು ಅವರೇ ನಾಶವಾಗಿ ಹೋಗಿದ್ದಾರೆ. ಹಿಂದೂ ಧರ್ಮಕ್ಕೆ ಯಾವಾಗ ಕಂಠಕ ಬರುತ್ತದೆಯೋ ಆವಾಗ ಒಬ್ಬ ಅವತಾರ ಪುರುಷ ಹುಟ್ಟುತ್ತ ಬಂದಿದ್ದಾನೆ. ಇದುವೇ ಈ ನಮ್ಮ ಸನಾತನ ಧರ್ಮದ ತಾಕತ್ತಾಗಿದೆ. ಭಾರತ ದೇಶ 140 ಕೋಟಿ ಭಾರತೀಯರನ್ನು ಹೊತ್ತಿಕೊಂಡಿರುವ ದೇಶವಾಗಿ ಭಲಾಡ್ಯವಾಗಿರುವ ಸನಾತನ ಹಿಂದೂ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ಈ ದೇಶದಲ್ಲಿ ಜನಿಸಿರುವ ನಾವುಗಳು ಪುಣ್ಯವಂತರಾಗಿದ್ದು, ಮಕ್ಕಳಲ್ಲಿ ನಮ್ಮ ಸನಾತನ ಧರ್ಮದ ಸಂಸ್ಕೃತಿ ಪರಂಪರೆ ಬೆಳೆಸುವಂತಹ ಕಾರ್ಯ ತಂದೆ, ತಾಯಂದಿರರು ಮಾಡಬೇಕು ಎಂದರು.ವಿರಘೋಟ ಅಡವಿಲಿಂಗ ಮಹಾರಾಜರು, ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ), ಬಿಜೆಪಿ ನಾಯಕ ಬಸನಗೌಡ ಯಡಿಯಾಪೂರ, ಶ್ರೀಕಾಂತ ಪತ್ತಾರ ಮಾತನಾಡಿದರು. ಈ ಸಮಯದಲ್ಲಿ ಸಣ್ಣಕ್ಕೆಪ್ಪ ಮುತ್ಯಾ ಪೂಜಾರ, ಮಹಾರಾಯಮುತ್ಯಾ ಪೂಜಾರಿ, ಜಿಪಂ ಸದಸ್ಯ ಬಸನಗೌಡ ವಣಕ್ಯಾಳ, ಬಸನಗೌಡ ಚೋಕ್ಕಾವಿ, ಬಿ.ಎಸ್.ಪಾಟೀಲ(ನಾಗರಾಳ), ಅಪ್ಪಾಸಾಹೇಬಗೌಡ ಮೂಲಿಮನಿ, ಉತ್ಸವ ಸಮಿತಿಯ ರಾಜುಗೌಡ ಕೊಳೂರ, ಕುಮಾರ ಹೂಗಾರ, ಮದುರಾಜ ನೂಲ, ಮನೋಜ ಹೊರಗಿನಮನಿ, ಭೀಮನಗೌಡ ಅನಂತರೆಡ್ಡಿ, ಸಂತೋಷ ಹೊಳೆಪ್ಪಗೋಳ, ವಿಶ್ವನಾಥ ಅನಂತರೆಡ್ಡಿ, ರಾಜು ರಾರಡ್ಡಿ, ಚಂದ್ರು ಮೂಲಿಮನಿ, ರಮೇಶ ತಾರನಾಳ, ಆಕಾಶ ಅನಂತರೆಡ್ಡಿ, ಪ್ರವೀಣ್ ರಾಜವಾಳ, ಅಮ್ರೇಶ ಮಠ, ಆನಂದ ಹಿರೇಮಠ, ಒಳಗೊಂಡು ಬಿ.ಸಾಲವಾಡಗಿ ಗ್ರಾಮದ ಮುಖಂಡರು, ಶ್ರೀರಾಮನವಮಿ ಉತ್ಸವ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಉತ್ಸವ ಮೂರ್ತಿಯ ಮೆರವಣಿಗೆ ಮಾಡಲಾಯಿತು. ರಾಜು ಜವಳಗೇರಿ ಸ್ವಾಗತಿಸಿದರು. ಅಜೀತ ಯಾಳಗಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಥನಾಳ ಸಂಗನಬಸವ ಶಿವಯೋಗಿಗಳ ಸ್ಮಾರಕ ನಿರ್ಮಾಣಕ್ಕೆ ಆಗ್ರಹ
ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸರ ಕಾರ್ಯ ಜನಮೆಚ್ಚುಗೆ