- ತರೀಕೆರೆಯಲ್ಲಿ ಹಿಂದೂ ಸಮಾಜೋತ್ಸವ: ಶೋಭಾಯಾತ್ರೆ । ಸಭಾ ಕಾರ್ಯಕ್ರಮ
ಹಿಂದೂ ಧರ್ಮ ಜಗತ್ತಿಗೆ ಶಾಂತಿ ಕೋರುತ್ತದೆ ಹಾಗೆಯೇ ವಿಶ್ವಕ್ಕೇ ಒಳಿತು ಮಾಡುವುದು ಸಹ ಹಿಂದೂ ಧರ್ಮವೆ ಎಂದು ಲೇಖಕರು ವಿಕಾಸ್ ಪುತ್ತೂರು ಹೇಳಿದ್ದಾರೆ.
ಶನಿವಾರ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ತರೀಕೆರೆ ತಾಲೂಕಿನಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಹಿಂದೂ ಸಮಾಜೋತ್ಸವ, ಶೋಭಾ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತ ಉಳಿಯಬೇಕಾದರೆ ಹಿಂದೂ ಧರ್ಮ ಉಳಿಯಬೇಕು.ಹಿಂದೂ ಸಮಾಜೋತ್ಸವವನ್ನು ಪ್ರತಿ ಮಂಡಲದಲ್ಲಿ ಆಯೋಜಿಸಲಾಗುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷಗಳ ಹಿಂದೆ ಸ್ಥಾಪಿತವಾಯಿತು. ಭಾರತದ ಸಂಸ್ಕೃತಿ ಪರುಂಪರೆ ಮೇಲೆ ಭಾರತ ಪುನರ್ ನಿರ್ಮಾಣ ಆಗಬೇಕು ಎಂಬುದು ಆರ್.ಎಸ್.ಎಸ್.ಸ್ಥಾಪನೆ ಗುರಿಯಾಗಿದೆ ಎಂದ ಹೇಳಿದರು. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರಿಯಾಗಿದೆ. ಹಿಂದುತ್ವದ ಆಧಾರದ ಮೇಲೆ ರಾಷ್ಟ್ರ ಕಟ್ಟುವುದು ಆರ್.ಎಸ್.ಎಸ್.ಗುರಿ. ದೇಶದಲ್ಲಿ ಅವಘಡಗಳು ಸಂಭವಿಸಿದರೆ ಮೊದಲು ಕಾರ್ಯಪ್ರವೃತ್ತರಾಗುವುದು ಆರ್.ಎಸ್.ಎಸ್. ಮಾತ್ರ, ಆರ್.ಎಸ್.ಎಸ್.ಸ್ವಯಂ ಸೇವಕರು ಮುಂದೆ ಬಂದು ಸಮರ್ಪಿಸಿಕೊಳ್ಳುತ್ತಾರೆ. ಸಮಾಜದಲ್ಲಿ ಜಾಗೃತಿ ಮಾಡುವ ಕಾರ್ಯವನ್ನು ಆರ್.ಎಸ್.ಎಸ್.ಮಾಡುತ್ತಿದೆ ಎಂದು ಹೇಳಿದರು.ಅಸ್ಪೃಶ್ಯತೆ ಜಾತಿ ತಾರತಮ್ಯ ಸರಿಪಡಿಸಿಕೊಳ್ಳಬೇಕು. ಸಾಮರಸ್ಯದ ಕಾರ್ಯಕ್ರಮಗಳು ಹೆಚ್ಚಿಸಬೇಕು. ಸ್ವದೇಶಿ ಚಿಂತನೆ ಅಳವಡಿಸಿಕೊಳ್ಳಬೇಕು. ಪ್ರಕೃತಿಯನ್ನು ತಾಯಿ ಸ್ಥಾನದಲ್ಲಿ ಇಟ್ಟು ನೋಡುವುದು ಹಿಂದೂ ಧರ್ಮದಲ್ಲಿ ಮಾತ್ರ ನಾಗರಿಕ ಶಿಷ್ಟಾಚಾರ ಮಹತ್ವದ ಸಂಗತಿ. ಹಿಂದುತ್ವದ ರಕ್ಷಣೆ
ನಮ್ಮ ಸಂರಕ್ಷಣೆಯಾಗಿದೆ ಎಂದರು.ಡಾ.ಅಶ್ವಿನಿ ನಟರಾಜ್ ಮಾತನಾಡಿ ಹಿಂದೂ ಸಮಾಜೋತ್ಸವ ಹಿಂದೂಗಳು ಸಂಭ್ರಮಿಸುವ ಕಾಲ. ಇಡೀ ಜಗತ್ತಿಗೆ ಭಾರತ ಗುರುವಾಗಿದೆ. ಈ ನೆಲದಲ್ಲಿ ಹಿಂದೂ ಸಂಸ್ಕೃತಿ ಗಟ್ಟಿಯಾಗಿ ನಿಂತಿದೆ ಅಂದರೆ ಅದು ತಾಯಂದಿರ ಶಕ್ತಿ. ಇಚ್ಚಾಶಕ್ತಿ, ಜ್ಞಾನಶಕ್ತಿಯನ್ನು ವಿವಿಧ ರೂಪದಲ್ಲಿ ಪ್ರಕಟಿಸುತ್ತಿದೆ. ಮಾತೃತ್ವ ಪ್ರಕೃತಿ ನೀಡಿದ ಶಕ್ತಿಯಾಗಿದೆ. ನಾವು ಹಿಂದೂ ಸಮಾಜವನ್ನು ಸಮರ್ಥ ಮತ್ತು ಬಲಿಷ್ಠವಾಗಿ ಕಟ್ಟೋಣ ಎಂದು ಹೇಳಿದರು.ಹುಣಸಘಟ್ಟ ಷ.ಬ್ರ. ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಂಘಟನೆಯಲ್ಲಿ ಬಲ ಇದೆ. ಪಂಚಭೂತಗಳನ್ನು ದೈವಸ್ವರೂಪದಲ್ಲಿ ಕಾಣುತ್ತೇವೆ. ಹಿಂದೂಗಳು ವಾವು ಸಂಘಟಿತರಾಗಬೇಕು. ಹಿಂದುತ್ವ ಅಜರಾಮರವಾಗಿ ಉಳಿಯಬೇಕು. ಒಗ್ಗಟ್ಟಿನಿಂದ ದೇಶ ಕಟ್ಟೋಣ, ನಮ್ಮ ಬದುಕು ಯಾವ ರೀತಿ ನಡೆಯಬೇಕು ಎಂದು ಯೋಚಿಸಿ ಕತ್ತಲೆಯಿಂದ ಬೆಳಕಿನಡೆಗೆ ಹೋಗಬೇಕು ಎಂದು ಹೇಳಿದರು.ಪಟ್ಟಣದ ಓಂ ವೃತ್ತದಿಂದ ಬಯಲು ರಂಗಮಂದಿರ ವರೆಗೆ ಶೋಭಾಯಾತ್ರೆ ಏರ್ಪಡಿಸಲಾಗಿತ್ತು.ಮಾಜಿ ಶಾಸಕ ಡಿ.ಎಸ್.ಸುರೇಶ್, ಮ್ಯಾಮ್ ಕೋಸ್ ನಿರ್ದೇಶಕ ಟಿ.ಎಲ್.ರಮೇಶ್, ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಜಿಪಂ ಮಾಜಿ ಅದ್ಯಕ್ಷೆ ಚೈತ್ರಶ್ರೀ, ರಾಜೇಶ್ವರಿ ರಾಜಶೇಖರ್, ಕೆ.ಆರ್.ಧೃವಕುಮಾರ್, ಕೆ.ಆರ್.ಆನಂದಪ್ಪ, ಜಿಪಂ ಮಾಜಿ ಸದಸ್ಯ ಕೆ.ಎಚ್.ಮಹೇಂದ್ರ, ಗುಳ್ಳದಮನೆ ವಸಂತಕುಮಾರ್, ಬೇಲೇನಹಳ್ಳಿ ಸೋಮಶೇಖರ್, ಕನ್ನಡಶ್ರೀ ಬಿ.ಎಸ್.ಭಗವಾನ್, ರಾಜಶೇಖರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೃತಿ ಮತ್ತಿತರರು ಭಾಗವಹಿಸಿದ್ದರು.-
24ಕೆಟಿಆರ್.ಕೆ.15ಃ ತರೀಕೆರೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ, ಶೋಭಾಯಾತ್ರೆಯಲ್ಲಿ ಹುಣಸಘಟ್ಟ ಷ.ಬ್ರ. ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿ ಮಾತನಾಡಿದರು. ಲೇಖಕರು ವಿಕಾಸ್ ಪುತ್ತೂರು, ಡಾ.ಅಶ್ವಿನಿ ನಟರಾಜ್ ಇದ್ದರು.