ಕನ್ನಡಪ್ರಭವಾರ್ತೆ ಕೆರೂರ
ಗೋವು ರಾಷ್ಟ್ರೀಯ ಪ್ರಾಣಿಯಾಗಲೆಂದು ಮುಸ್ಲಿಂ ಬಾಂಧವರೆಲ್ಲ ಸರ್ಕಾರಕ್ಕೆ ಒತ್ತಾಯಿಸುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸ್ವಾಗತಾರ್ಹ ನಡೆಯಾಗಿದ್ದು, ಇದಕ್ಕೆ ನನ್ನ ಸಹಮತವಿದೆ. ಈ ವಿಷಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು. ಸರ್ಕಾರಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಎಲ್ಲ ರಾಜ್ಯ ಸರ್ಕಾರಗಳು, ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ತರುತ್ತಿವೆ. ಭವಿಷ್ಯದಲ್ಲಿ ಏನಾಗಬಹುದೆಂದು ಪ್ರಶ್ನಿಸಿದಾಗ ಶ್ರೀಗಳು ಈ ವಿಷಯ ನನಗೆ ಸಂಬಂಧಿಸಿದ್ದಲ್ಲ ಎಂದು ಹೇಳುವ ಮೂಲಕ ಜಾರಿಕೊಂಡರು.ಈ ವೇಳೆ ಶ್ರೀಗಳು ಹಳಪೇಟೆ ಬಡಾವಣೆಯ ನಗರೇಶ್ವರ ಗುಡಿಯಲ್ಲಿ ವೈಶ್ಯ ಸಮಾಜ ಬಾಂಧವರಿಂದ ಪಾದಪೂಜೆ ನೆರವೇರಿತು. ಬಳಿಕ ಮೆರವಣೆಗೆಯಲ್ಲಿ ಶ್ರೀಗಳು ರಾಘವೇಂದ್ರ ಮಠಕ್ಕೆ ಆಗಮಿಸಿದರು. ಮಠದ ಸಂಸ್ಥಾಪಕ ಪ್ರಾಣೇಶಾಚಾರ್ಯ ಕೆರೂರ ಸನ್ನಿಧಾನದಲ್ಲಿ ವಿಪ್ರ ಸಮಾಜದ ಅಧ್ಯಕ್ಷ ರಂಗನಾಥ ದೇಸಾಯಿ, ವ್ಯವಸ್ಥಾಪಕ ಸುಧೀಂದ್ರ ಕುಲಕರ್ಣಿ ನೇತೃತ್ವದಲ್ಲಿ ತೊಟ್ಟಿಲು ಸೇವೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವರು.------
ಕೋಟ್‌ಒಂದು ಕೋಮಿಗೆ ನೋವಾಗುತ್ತದೆ ಎಂದರೆ ಹಸುವಿನ ವಧೆ ಆಗಕೂಡದು, ಇದು ಸರಿಯಲ್ಲ. ಗೋವು ಪೂಜಾರ್ಹವಾದದ್ದಾಗಿದ್ದು, ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಸರ್ಕಾರಗಳು ಘೋಷಿಸಬೇಕು. ಇದು ಮುಸ್ಲಿಂರ ಒಕ್ಕೊರಲಿನ ಕೂಗು.ಮಹಮದ ಅಲ್ತಾಫ ಧಾರವಾಡ, ಪಿಕೆಪಿಎಸ್ ನಂ-2 ಕೆರೂರ, ಮಹಮದ ಇಬ್ರಾಹಿಂ ಖಾಜಿ, ಧರ್ಮ ಬೋಧಕರುಧರ್ಮಸಭೆಯಲ್ಲಿ ಡಿ.ಕೆ.ಕಂದಕೂರ, ರಮೇಶ ಪುರಂದರೆ, ಶ್ರೀನಿವಾಸ ಕಂದಕೂರ, ಮಹಾಂತೇಶ ಮೆಣಸಗಿ, ಎನ್.ಬಿ.ಬನ್ನೂರ, ಆನಂದ ನಾನಾವಟೆ, ರಂಗಣ್ಣ ಎಮ್ಮಿ, ಡಿ.ಪಿ.ಅಮಲಝರಿ, ಮಲ್ಲಪ್ಪ ಹಡಪದ, ಡಾ.ಬಸವರಾಜ ಬೊಂಬ್ಲೆ, ಗೋಪಾಲಕೃಷ್ಣ ದೇಸಾಯಿ, ಅಬೂಬಕರ ಯಡಹಳ್ಳಿ, ಶ್ರೀಧರ ಚಂದರಗಿ, ಮಹಾಂತೇಶ ಅಂಬಿಗೇರ, ವಿನಾಯಕ ದಾಸಮನಿ, ಅಶೋಕ ದೇಶಪಾಂಡೆ, ಪಕ್ರುಸಾಬ ಕುರ್ಲಗೇರಿ ಸೇರಿ ಹಲವರು ಇದ್ದರು. ಸನ್ಮಾನ ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಉಪಾಧ್ಯಕ್ಷ ಬದ್ರುದ್ದೀನ ಮುಲ್ಲಾ, ಉಸ್ಮಾನಸಾಬ ಮುಲ್ಲಾ, ಮೋದಿನಸಾಬ ಅಗಸಿಮನಿ, ಮುಲ್ಲಾ ಸಮಾಜದ ಅಧ್ಯಕ್ಷ ಮಹಮ್ಮದಲಿ ಕುಡಚಿ, ಬುಡ್ಡೆಸಾಬ ಡೋಲಿಕಟ್ಟಿ, ಹಾಸಿಮಸಾಬ ಮುಲ್ಲಾ, ಮಹಿಬೂಬ ಮುಜಾವರ, ವಕೀಲರಾದ ಶೌಕತಲಿ ಕುಡಚಿ ಉಪಸ್ಥಿತರಿದ್ದರು.ಬಾದಾಮಿ ವಲಯದ ಸಿಪಿಐ ಕರಿಯಪ್ಪ ಬನ್ನೆ ನೇತೃತ್ವದಲ್ಲಿ ಪಿಎಸ್ಐ ನಿತಿನಕುಮಾರ, ಕ್ರೈಂ ಪಿಎಸ್ಐ ಐ.ಎಮ್.ಹಿರೇಗೌಡ್ರ ಹಾಗೂ ಸಿಬ್ಬಂದಿ, ವಿಶ್ವ ಪ್ರಸನ್ನ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.