ಪರಸ್ಪರ ಶಲ್ಯ ಬದಲಿಸಿಕೊಂಡ ಹಿಂದು-ಮುಸ್ಲಿಮರು

KannadaprabhaNewsNetwork |  
Published : Aug 27, 2026, 03:30 AM IST
26ಗದ್ವದ್ವದ್ದ್ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ಲಹಿಂದು-ಮುಸ್ಲಿಂ ಬಾಂಧವರು ಪರಸ್ಪರ ಶಲ್ಯ ಬದಲಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಈದ್‌ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಹಿಂದು-ಮುಸ್ಲಿಂ ಬಾಂಧವರು ಪರಸ್ಪರ ಶಲ್ಯ ಬದಲಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಈದ್‌ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.

ಎಲ್ಲೆಡೆ ಹಿಂದು-ಮುಸ್ಲಿಂ ಬಾಂಧವರ ಗಲಾಟೆಗಳ ಮಧ್ಯೆ ಇಳಕಲ್ಲ ನಗರದಲ್ಲಿ ಆಚರಿಸಿದ ಈದ್‌ ಆಚರಣೆ ವಿಶಿಷ್ಠವಾಗಿದೆ. ಇದಕ್ಕೆ ಶರಣರಾದ ಲಿಂಗೈಕ್ಯ ವಿಜಯಮಹಾಂತ ಶಿವಯೋಗಿಗಳು ಹಾಗೂ ಸೈಯದ್‌ ಮುರ್ತುಜಾ ಖಾದರಿ ಅವರು ಪ್ರಮುಖ ಕಾರಣರಾಗಿದ್ದಾರೆ.

ಉಸ್ಮಾನಗಣಿ ಹುಮನಾಬಾದ, ಅಬ್ದುಲ್‌ರಜಾಕ ತಟಗಾರ ಅವರ ನೇತೃತ್ವದಲ್ಲಿ ಈದಗಾದಿಂದ ಆರಂಭಗೊಂಡ ಮೇರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು. ಮುಖಂಡರಾದ ಮಹಾಂತೇಶ ಅಂಗಡಿ, ಅಶೋಕ ಚಲವಾದಿ, ಸತೀಶ ಸಪ್ಪರದ, ಸವಿತಾ ಚಲವಾದಿ ಹಾಗೂ ಇತರರು ಮೇರವಣಿಗೆಯನ್ನು ಸ್ವಾಗತಿಸಿದರು. ಮೇರವಣಿಗೆ ಉದ್ದಕ್ಕೂ ಎಲ್ಲರಿಗೂ ತಂಪು ಪಾನಿಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಳಿಕ ಮುರ್ತುಜಾ ದರ್ಗಾದತ್ತ ಮೇರವಣಿಗೆ ಸಾಗಿತು. ನೂರಾರು ಸಾರ್ವಜನಿಕರು ಹಿಂದು-ಮುಸ್ಲಿಂ ಸಹೋದರತೆಗೆ ಸಾಕ್ಷಿಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಮಳ ಪುರಸ್ಕಾರಕ್ಕೆ ಜಂಗಲ್, ನೀಲಗಾರ ಆಯ್ಕೆ
ಕುಂದಾಪುರ ಕನ್ನಡಪ್ರಭ ವರದಿಗಾರನ ಮೇಲೆ ಹಲ್ಲೆ ಖಂಡನೆ