ಹಿಂದೂಗಳು ಅನ್ಯ ಧರ್ಮೀಯರ ಆಸೆ-ಆಮಿಷಗಳಿಗೆ ಒಳಗಾಗಬಾರದು: ಸುಮನಾ ಪಾಟೀಲ

KannadaprabhaNewsNetwork |  
Published : Oct 29, 2024, 01:05 AM IST
ಗದಗದಲ್ಲಿ ಶ್ರೀರಾಮ ಸೇನೆ ಸಂಘಟನೆಯಿಂದ ಆಕರ್ಷಕ ಪಥ ಸಂಚಲನ ಜರುಗಿತು. | Kannada Prabha

ಸಾರಾಂಶ

ಅನ್ಯ ಧರ್ಮೀಯರ ಆಸೆ-ಆಮಿಷಗಳಿಗೆ ಹಿಂದೂಗಳು ಒಳಗಾಗಬಾರದು ಎಂದು ಉಪನ್ಯಾಸಕಿ ಸುಮನಾ ಪಾಟೀಲ ಕಿವಿ ಮಾತು ಹೇಳಿದರು.

ಗದಗ: ಹಿಂದೂ ಧರ್ಮ ಎಂದಿಗೂ ಅಳಿಸಿ ಹೋಗಲು ಸಾಧ್ಯವಿಲ್ಲ. ಭಾರತದಲ್ಲಿ ಹಿಂದೂಗಳಿಗೆ ವಿಶೇಷ ಸ್ಥಾನವಿದೆ. ಜಗತ್ತಿನಲ್ಲಿ ಹಲವಾರು ಧರ್ಮಗಳು ನಶಿಸಿ ಹೋಗಿವೆ. ಆದರೆ, ಹಿಂದೂ ಧರ್ಮ ಮಾತ್ರ ಗಟ್ಟಿಯಾಗಿ ನೆಲೆ ನಿಂತಿದೆ. ಹಿಂದೂಗಳಲ್ಲಿ ತಾಳ್ಮೆ ಎನ್ನುವುದು ಬಹಳಷ್ಟಿದೆ. ಆದರೆ, ಅದರ ಮೇಲೆ ಅತಿಯಾದ ದಬ್ಬಾಳಿಕೆ ನಡೆದರೆ ನಮ್ಮ ಧರ್ಮ ರಕ್ಷಣೆಗಾಗಿ ಶ್ರೀರಾಮ ಸೇನೆಯ ಪ್ರತಿಯೊಬ್ಬರು ಸಿದ್ಧವಾಗಿರಬೇಕು ಎಂದು ಉಪನ್ಯಾಸಕಿ ಸುಮನಾ ಪಾಟೀಲ ಹೇಳಿದರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಭಾನುವಾರ ಶ್ರೀರಾಮ ಸೇನೆ ಸಂಘಟನೆ ಆಯೋಜಿಸಿದ್ದ ಪಥಸಂಚಲನದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಹಲವರು ನಮ್ಮ ಹಿಂದೂ ಧರ್ಮದಲ್ಲಿ ಒಡಕನ್ನು ತರುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಆಚರಣೆಗಳಲ್ಲಿ ಧರ್ಮ ಅಡಗಿದೆ. ಹಿಂದಿನ ಜನ್ಮದಲ್ಲಿನ ಕರ್ಮದ ಫಲವಾಗಿ ನಮ್ಮ ಹುಟ್ಟು ಅಡಗಿದೆ ಎಂದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ. ಸತ್ಯ, ನ್ಯಾಯ, ನಿಷ್ಠೆಯನ್ನು ಅಳವಡಿಸಿಕೋಳ್ಳುವುದೇ ನಿಜವಾದ ಧರ್ಮವಾಗಿದೆ. ನಮ್ಮ ಪೂರ್ವಜರನ್ನು ಹೈಜಾಕ್ ಮಾಡಿ ಅನ್ಯ ಧರ್ಮದ ಆಚರಣೆಗೆ ಬಳಸಿಕೊಳ್ಳಲಾಗಿದೆ. ಆದರೆ, ಈಗ ಕಾಲ ಬದಲಾಗಿದೆ. ಅವರ ಬೆದರಿಕೆಗೆ ನಮ್ಮ ಹಿಂದೂಗಳು ಬಗ್ಗುವುದಿಲ್ಲ. ಅನ್ಯ ಧರ್ಮೀಯರ ಆಸೆ-ಆಮಿಷಗಳಿಗೆ ಹಿಂದೂಗಳು ಒಳಗಾಗಬಾರದು ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ರಾಜ್ಯ ಶಾರೀರಕ ಪ್ರಮುಖ ಮಹೇಶ್ ರೋಖಡೆ, ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಸೋಮು ಗುಡಿ, ಗದಗ-ಬೆಟಗೇರಿ ಶ್ರೀರಾಮ ಸೇನೆಯ ನಗರಾಧ್ಯಕ್ಷ ಚೇತನ್ ಅಬ್ಬಿಗೇರಿ, ಅಂಜಲಿ ಶೀಂದ್ರೆ, ಅಥಿತಿ ರೋಖಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಆಕರ್ಷಕ ಪಥ ಸಂಚಲನ

ಕಾರ್ಯಕ್ರಮಕ್ಕಿಂತಲೂ ಮೊದಲು ಶ್ರೀರಾಮ ಸೇನೆ ಸಂಘಟನೆ ಆಯೋಜಿಸಿದ್ದ ಪಥಸಂಚಲನ ನಗರದ ವೀರನಾರಾಯಣ ದೇವಸ್ಥಾನದಿಂದ ಆರಂಭವಾಗಿ ಪೇಟೆ ವೀರಭದ್ರೇಶ್ವರ ದೇವಸ್ಥಾನ, ವಾಸವಿ ಸರ್ಕಲ್, ಸೋಮೇಶ್ವರ ದೇವಸ್ಥಾನ, ಹನುಮನ ಗರಡಿ, ಒಕ್ಕಲಿಗೇರ ಓಣಿ, ಗುಜ್ಜರಬಸ್ತಿ, ಕಮಾಸ್ ಸ್ವಿಟ್ಸ್, ನಾಲವಾಡಗಲ್ಲಿ, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಮಹೇಂದ್ರಕರ್ ಸರ್ಕಲ್, ಬಸವೇಶ್ವರ ನಗರ, ಶಹಪೂರಪೇಟೆ, ಗಾಂಧಿ ಸರ್ಕಲ್ ಮಾರ್ಗವಾಗಿ ಮುನ್ಸಿಪಲ್ ಹೈಸ್ಕೂಲ್ ತಲುಪಿತು. ಪಥ ಸಂಚಲನದಲ್ಲಿ 500ಕ್ಕೂ ಹೆಚ್ಚು ಶ್ರೀರಾಮ ಸೇನಾ ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ