30, 31ರಂದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

KannadaprabhaNewsNetwork |  
Published : Mar 29, 2024, 12:45 AM IST
11 | Kannada Prabha

ಸಾರಾಂಶ

ಮಾ.30ರಂದು ಸಂಜೆ 5.30ಕ್ಕೆ ಸೌರಬ್‌ ಗುಲವಾನಿ, ಸಂದೀಪನ್‌ ಮುಖರ್ಜಿ ಅವರ ತಬಲಾ ವಾದನ ಕಛೇರಿ ಬಳಿಕ ನಿಶಾದ್‌ ವ್ಯಾಸ್‌ ಅವರಿಂದ ಗಾಯನ, ಬಳಿಕ ಕಶ್ಯಪ್‌ ಬಂಧು ಅವರಿಂದ ಗಾಯನ ಪ್ರಸ್ತುತಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಸ್ವರಾನಂದ ಪ್ರತಿಷ್ಠಾನ ವತಿಯಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಪಂಡಿತ್‌ ರಾಜನ್‌ ಮಿಶ್ರಾ ಅವರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಮಾ.30 ಮತ್ತು 31ರಂದು ನಗರದ ಬಿಇಎಂ ಹೈಸ್ಕೂಲ್‌ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಕುರಿತು ಮಾಹಿತಿ ನೀಡಿದ ಪ್ರತಿಷ್ಠಾನದ ಅಧ್ಯಕ್ಷ ಭಾರವಿ ದೇರಾಜೆ, ರಾಜನ್‌ ಮಿಶ್ರಾ ಅವರ ಶಿಷ್ಯ ಪರಂಪರೆಯ ಗಾಯಕರಾದ, ಯುಗಳ ಗಾಯನ ಪ್ರಸ್ತುತಿಯಲ್ಲಿ ಜನಪ್ರಿಯರಾಗಿರುವ ಡಾ.ಪ್ರಭಾಕರ ಕಶ್ಯಪ್‌, ಡಾ.ದಿವಾಕರ್‌ ಕಶ್ಯಪ್‌ (ಕಶ್ಯಪ್‌ ಬಂಧು) ಕಛೇರಿ ನಡೆಸಿಕೊಡಲಿದ್ದಾರೆ ಎಂದರು.

ಮಾ.30ರಂದು ಸಂಜೆ 5.30ಕ್ಕೆ ಸೌರಬ್‌ ಗುಲವಾನಿ, ಸಂದೀಪನ್‌ ಮುಖರ್ಜಿ ಅವರ ತಬಲಾ ವಾದನ ಕಛೇರಿ ಬಳಿಕ ನಿಶಾದ್‌ ವ್ಯಾಸ್‌ ಅವರಿಂದ ಗಾಯನ, ಬಳಿಕ ಕಶ್ಯಪ್‌ ಬಂಧು ಅವರಿಂದ ಗಾಯನ ಪ್ರಸ್ತುತಿ ನಡೆಯಲಿದ್ದು, ಪಂಡಿತ್‌ ಅರವಿಂದ್‌ ಕುಮಾರ್‌ ಆಜಾದ್‌, ಗುರುಪ್ರಸಾದ್‌ ಹೆಗಡೆ, ಪ್ರಸಾದ್‌ ಕಾಮತ್‌, ಶಶಿಕಿರಣ್‌ ಮಣಿಪಾಲ ಅವರು ಸಾತ್‌ ಸಂಗತ್‌ ನೀಡಲಿದ್ದಾರೆ. ಮಾ. 31ರಂದು ಮುಂಜಾನೆ 6.30ರಿಂದ 8 ಗಂಟೆಯವರೆಗೆ ಕಶ್ಯಪ್‌ ಬಂಧುಗಳಿಂದ ಮುಂಜಾನೆಯ ರಾಗಗಳ ಪ್ರಸ್ತುತಿಯ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು. ಉಪಾಧ್ಯಕ್ಷೆ ಕವಿತಾ ಶೆಣೈ ಬಸ್ತಿ, ಕಾರ್ಯದರ್ಶಿ ಡಾ.ದಾಮೋದರ್‌ ಹೆಗ್ಡೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ-30,000 ಕೋಟಿ ರು. ವಿತರಣೆಯ ಗುರಿ
ಏಪ್ರಿಲ್‌ನಿಂದ ಆಲ್ಕೋಹಾಲ್‌ ಪ್ರಮಾಣಕ್ಕೆ ತಕ್ಕಂತೆ ಮದ್ಯ ಸುಂಕ