ಹಿಂದುತ್ವ ಪರಂಪರೆ ಪಾಲಿಸಬೇಕು

KannadaprabhaNewsNetwork |  
Published : Oct 12, 2025, 01:00 AM IST
೧೧ಕೆಎಲ್‌ಆರ್-೯ಕೋಲಾರದ ಪತ್ರಕರ್ತರ ಭವನದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಮಾರಂಭ-ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಶದಲ್ಲಿ ೧೪೦ ಕೋಟಿ ಜನಸಂಖ್ಯೆ ಇದ್ದರೂ ಸಹ, ದೇಶಭಕ್ತಿಯ ಕೊರತೆ ಪರಿಣಾಮದಿಂದ ಭಯೋತ್ಪಾಧನ ಚಟುವಟಿಕೆ, ಲವ್ ಜಿಹಾದ್ ಗಳಿಗೆ ಬಲಿಯಾಗುತ್ತಿದ್ದಾರೆ. ಕಾನೂನು, ಪೊಲೀಸ್ ರಾಜಕಾರಣಿಗಳ ಭಯವಿಲ್ಲದೆ ಹೋಗಿದ್ದು, ಪ್ರತಿ ದಿನ ಹತ್ತು ಸಾವಿರ ಮಂದಿ ಹೆಣ್ಣು ಮಕ್ಕಳು ಮತಾಂತರಗೊಂಡು ಬುರ್ಕಿ ಆಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಹಿಂದುತ್ವದ ಪರಂಪರೆಯನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು, ದೇಶದಲ್ಲಿ ಯಾವುದೇ ಭೇದಭಾವ ಇಲ್ಲದೆ ಎಲ್ಲರೂ ಸಮಾನರು ಎನ್ನುವ ಆರ್‌ಎಸ್‌ಎಸ್ ಹೆಜ್ಜೆಯಲ್ಲಿ ಶ್ರೀರಾಮ್ ಸೇನೆ ಸಂಘಟನೆ ಸಾಗುತ್ತಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಮಾರಂಭ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ನೂರು ವರ್ಷ ಪೂರೈಸಿದ ಆರ್‌ಎಸ್‌ಎಸ್ ಸಂಘಟನೆ ಒಂದೇ ಸಿದ್ದಾಂತದಲ್ಲಿ ದೇಶದ ಕೋಟ್ಯಂತರ ಜನರ ಜೀವನ ರೂಪಿಸಿದೆ ಎಂದರು.

ಜಾಗೃತಿ ಮೂಡಿಸುವ ಕಾರ್ಯ

ರಾಜ್ಯದಲ್ಲಿ ಕಳೆದ ೨೦ ವರ್ಷದಿಂದ ಶ್ರೀರಾಮ ಸೇನೆ ಸಂಘಟನೆಯಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವ ನಡೆದುಕೊಂಡು ಬರುತ್ತಿದೆ. ರಾಜ್ಯದಲ್ಲಿ ೪ ಸಾವಿರದ ೭೦೦ ನೂರು ಮಂದಿ ಮತಾಂತರಗೊಳ್ಳುತ್ತಿದ್ದ ಹುಡುಗಿಯನ್ನು ಹಾಗೂ ೩೦ ಸಾವಿರ ಗೋವುಗಳನ್ನು ರಕ್ಷಿಸಿ, ಗೋಶಾಲೆಗೆ ಶ್ರೀರಾಮ ಸೇನೆ ಕಾರ್ಯಕರ್ತರು ಮಾಡಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳಿಂದ ಸಮಾಜ ಹಾಗೂ ಜನರನ್ನು ಬೀದಿ ಭಿಕಾರಿಗಳಾಗಿ ಮಾಡಿದ್ದು, ರಾಜಕೀಯ ಪಕ್ಷಗಳಿಗೆ ಧಿಕ್ಕಾರಗಳನ್ನು ಹೇಳಬೇಕು. ದೇಶದಲ್ಲಿ ಮುಸಲ್ಮಾನರು ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ, ದೇಶವನ್ನು ಪ್ರೀತಿಸದೆ ಹೋದರೆ ಅಂತಹ ಪ್ರೀತಿಗೆ ಬೆಲೆ ಇಲ್ಲ, ಮುಸ್ಲಿಂ ಧರ್ಮ ಮೊದಲು ಎನ್ನುವರು ಮುಸ್ಲಿಂ ರಾಷ್ಟ್ರಗಳಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಬಹುದು, ನಾವೇ ಆಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದರು.

ದೇಶಭಕ್ತಿಯ ಕೊರತೆ

ದೇಶದಲ್ಲಿ ೧೪೦ ಕೋಟಿ ಜನಸಂಖ್ಯೆ ಇದ್ದರೂ ಸಹ, ದೇಶಭಕ್ತಿಯ ಕೊರತೆ ಪರಿಣಾಮದಿಂದ ಭಯೋತ್ಪಾಧನ ಚಟುವಟಿಕೆ, ಲವ್ ಜಿಹಾದ್ ಗಳಿಗೆ ಬಲಿಯಾಗುತ್ತಿದ್ದಾರೆ. ಕಾನೂನು, ಪೊಲೀಸ್ ರಾಜಕಾರಣಿಗಳ ಭಯವಿಲ್ಲದೆ ಹೋಗಿದ್ದು, ಪ್ರತಿ ದಿನ ಹತ್ತು ಸಾವಿರ ಮಂದಿ ಹೆಣ್ಣು ಮಕ್ಕಳು ಮತಾಂತರಗೊಂಡು ಬುರ್ಕಿ ಆಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹಲಾಲ್‌ಮುಕ್ತ ದೀಪಾವಳಿಪೆಹಲ್ಗಾಮ್ ನಲ್ಲಿ ಇತ್ತೀಚೆಗೆ ನಡೆದಂತಹ ಕೃತ್ಯವನ್ನ ಹಿಂದೂಗಳು ಮರೆಯಬಾರದು, ಹಾಗಾಗಿ ಮುಂಬರುವ ದೀಪಾವಳಿಯನ್ನ ಹಲಾಲ್ ಮುಕ್ತ ಹಬ್ಬವನ್ನಾಗಿ ಆಚರಣೆ ಮಾಡಬೇಕು. ದೇಶದಲ್ಲಿ ನರಕ ಚತುರ್ಥಿ ಆಚರಣೆ ನಡೆಯುತ್ತೆ ಹಾಗಾಗಿ ಎಲ್ಲ ಹಿಂದೂಗಳು ಹಲಾಲ್‌ಮುಕ್ತ ದೀಪಾವಳಿ ಮಾಡಬೇಕು. ನಾನು ಹಿಂದೂ ಸಮಾಜಕ್ಕೆ ಹೇಳುವೆ, ಧರ್ಮ ಕೇಳಿ ವ್ಯಾಪಾರ, ವ್ಯವಹಾರ ಮಾಡಿ, ಆಗ ಮಾತ್ರ ಹಿಂದೂ ಸಮಾಜ ಬದುಕುತ್ತೆ ಉಳಿಯುತ್ತೆ, ಸುರಕ್ಷಿತವಾಗಿ ಇರುತ್ತೆ ಎಂದರು.ಐ ಲವ್ ಮೊಹಮ್ಮದ್ ಅನ್ನೋದು ವಿಚಿತ್ರವಾದ ಹೇಳಿಕೆ. ಹಿಂದೂ ವಿರೋಧಿ ವಾತಾವರಣ ದೇಶದಲ್ಲಿ ಸೃಷ್ಟಿಸುವ ಕೆಲಸ ನಡೆಯುತ್ತಿದೆ, ಇಲ್ಲಿ ತನಕ ಇಲ್ಲದ್ದು ಈಗ ಏನಕ್ಕೆ ಮಾಡಲು ಹೊರಟಿದ್ದಾರೆ. ಅವರಲ್ಲಿ ಮೂರ್ತಿ ಪೂಜೆ ಇಲ್ಲ, ಈಗಿರುವಾಗ ಪ್ರೀತಿ ಮಾಡುವುದು ಎಲ್ಲಿ ಬಂತು, ಈ ರೀತಿಯ ಬಹಿರಂಗವಾಗಿ ಹಿಂದೂಗಳನ್ನ ಕೆಣಕುವ ಕೆಲಸ ಮಾಡುತ್ತಿದ್ದಾರೆ ಎಂದರ. ಪ್ರಜಾಪ್ರಭುತ್ವ ವಿರೋಧಿ

ತಾಲಿಬಾನಿಗಳ ಜತೆ ಸ್ನೇಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪಾಕಿಸ್ತಾನ, ಆಫ್ಘಾನಿಸ್ತಾನದ ತಾಲಿಬಾನ್ ಇವೆಲ್ಲಾ ಪ್ರಜಾಪ್ರಭುತ್ವ ವಿರೋಧಿಗಳು. ಜಗತ್ತನ್ನ ಹಾಳು ಮಾಡುವವರಿಗೆ ಮನ್ನಣೆ ಕೊಡುವುದು ಸರಿಯಲ್ಲ ಎಂದರು.ಶ್ರೀರಾಮ ಸೇನೆಯ ರಾಜ್ಯ ಮುಖಂಡರಾದ ಶ್ರೀನಿವಾಸ ಗುರೂಜಿ, ಸುಂದರೇಶ್ ನರ್ಗಲ್, ನಾಗಾರ್ಜುನಗೌಡ, ರಮೇಶ್ ಗೌಡ, ಪರಶುರಾಮ್ ನಡುಮನಿ, ಮೋಹನ್ ಕುಮಾರ್ ಇದ್ದರು.

PREV

Recommended Stories

ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ
ಇಂದು ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ - ಮುಂದಿನ 3-4 ದಿನ ಹಲವೆಡೆ ಉತ್ತಮ ಮಳೆ