ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ-ರಾಮಪುರ ಮತ್ತು ಬನಹಟ್ಟಿಯ ಸಹಸ್ರಾರು ಗಣವೇಷಧಾರಿ ಸ್ವಯಂಸೇವಕರ, ಅಭಿಮಾನಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯಾನಂತರ ಹಾಗೂ ಇಂದು ಕೂಡ ವಿಘಟಿತ ಮನಸ್ಸುಗಳು ಸಂಘದ ಕ್ರಿಯಾಶೀಲತೆ ಮತ್ತು ಸೇವಾನಿಷ್ಠ ಕಾರ್ಯಕರ್ತರನ್ನು ಕಂಡು ತಲ್ಲಣಗೊಂಡಿದ್ದಾರೆ. ವಿಘಟಿತ ತಂತ್ರಗಳಿಗೆ ಹಿಂದುತ್ವ ಎಂದಿಗೂ ನಾಶವಾಗದು ಎನ್ನುವುದಕ್ಕೆ ನಮ್ಮ ಒಗ್ಗಟ್ಟು ನಿದರ್ಶನವೆಂದು ಹೇಳಿದರು.
ಸ್ವದೇಶಿ ಮಂತ್ರ ಭಾರತೀಯರ ಉಸಿರಾಗಬೇಕು. ಅಮೇರಿಕ, ಚೀನಾದಂಥ ದೇಶಗಳು ತಮ್ಮ ಸ್ವಾರ್ಥ ಸಾಧನೆಗೆ ಭಾರತ ವಿರೋಧಿ ನೀತಿ ತಾಳಿದ್ದರೂ ನಮ್ಮ ಬೆಳವಣಿಗೆಗೆ ಎಷ್ಟೇ ಅಡೆತಡೆ ಒಡ್ಡಿದರೂ ನಾವು ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ಮೇಕ್ ಇನ್ ಇಂಡಿಯಾ ಸೂತ್ರಕ್ಕೆ ಬದ್ಧರಾದಲ್ಲಿ ವಿಶ್ವದ ಯಾವುದೇ ಶಕ್ತಿಯಿಂದ ನಮ್ಮ ಪ್ರಗತಿ ತಡೆಯಲು ಸಾಧ್ಯವಾಗದು. ಹಿಂದೂಗಳ ನಾವೆಲ್ಲರೂ ಒಂದು ಎಂದರಿತು ಏಕ ಸೂತ್ರದಲ್ಲಿ ಸಂಘಟಿತರಾದಲ್ಲಿ ಮಾತ್ರ ನಾವು ನಮ್ಮತನ ಉಳಿಸಿ, ಬೆಳೆಸಲು ಸಾಧ್ಯವಿದೆ ಎಂದರು. ವೇದಿಕೆಯಲ್ಲಿ ಪ್ರಭು ಪಾಟೀಲ ಉಪಸ್ಥಿತರಿದ್ದರು. ಧರೇಶ ಕುಂಬಾರ ವಂದಿಸಿದರು.ಆಕರ್ಷಕ ಪಥಸಂಚಲನ:ಅವಳಿ ನಗರದಲ್ಲಿ ಭಾನುವಾರ ಮಧ್ಯಾಹ್ನ ಆರ್‌ಎಸ್‌ಎಸ್ ಶತಾಬ್ದಿ ವರ್ಷದ ನಿಮಿತ್ತ ಆಕರ್ಷಕ ಪಥ ಸಂಚಲನ ನಡೆಯಿತು.
ಪಥ ಸಂಚಲನದ ಮಾರ್ಗದಲ್ಲಿ ರಸ್ತೆಯ ಬದಿಗೆ ನಿಂತ ಜನರು ಗಣವೇಷಧಾರಿಗಳಿಗೆ ಹೂವಿನ ಮಳೆಗೈದರು. ಭಾರತ ಮಾತಾಕೀ ಜೈ, ಹರ ಹರ ಮಹಾದೇವ, ಜೈ ಶ್ರೀರಾಮ ಘೋಷಣೆಗಳು ಮೊಳಗಿಸಿದರು. ಮಾರ್ಗದ ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ನಾಯಕರ ಛದ್ಮ ವೇಷಧಾರಿ ಮಕ್ಕಳು ಗಮನ ಸೆಳೆದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಮೂರು ಜನ ಡಿವೈಎಸ್ಪಿ, ಆರು ಜನ ಸಿಪಿಐ ಸೇರಿದಂತೆ ನಾಲ್ಕು ನೂರು ಜನ ಪೊಲೀಸ್ ರನ್ನು ಬಂದೋಬಸ್ತ್ ಏರ್ಪಡಿಸಲಾಗಿತ್ತು.